ಬೆಂಗಳೂರು : ತನ್ನಿಂದ ದೂರವಾಗಲು ಮುಂದಾದ 26 ವರ್ಷದ ಪ್ರೇಯಸಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಿರರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
52 ವರ್ಷದ ವಿಠ್ಠಲ ಎಂಬಾತನೇ ಪ್ರೇಯಸಿಯನ್ನು ಹತ್ಯೆಗೈದ ವ್ಯಕ್ತಿ. ಇಬ್ಬರು ಕೂಡಾ ಆನೇಕಲ್ ಮಳೆನಲ್ಲಸಂದ್ರ ನಿವಾಸಿಗಳಾಗಿದ್ದು, ವನಜಾಕ್ಷಿ ವಿಧವೆಯಾಗಿದ್ದು, ವಿಠ್ಠಲನ ಪತ್ನಿಯೂ ತೀರಿಕೊಂಡಿದ್ದಳು. ಇಬ್ಬರು ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ವರ್ಷದಿಂದ ಇಬ್ಬರು ಸಹಜೀವನ ನಡೆಸುತ್ತಿದ್ದರು ಅಂತ ಹೇಳಲಾಗಿದೆ.
ಹೀಗಿರುವಾಗ ವನಜಾಕ್ಷಿ ಬೇರೊಬ್ಬನ ಜೊತೆ ಸ್ನೇಹ ಬೆಳೆಸಿ ಈತನಿಂದ ದೂರವಾಗಲು ಮುಂದಾಗಿದ್ದಾಳೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ಸಂದರ್ಭ ವನಜಾಕ್ಷಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪರಿಣಾಮ ಆಕೆ ಮೃತಪಟ್ಟಿದ್ದಳು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.



