ʼಮಾಹೆದ ಆಟಿದ ತುಳು ಪರ್ಬʼ – ಕುಕ್ಕೇರ ಬೆಳಕು ರಚಿಸಿದ ಕೊರಗಜ್ಜನ ಚಿತ್ರಕ್ಕೆ ದ್ವಿತೀಯ ಬಹುಮಾನ..!

Share this post :

ಮಣಿಪಾಲ : ಮಾಹೆ ವಿವಿ ವತಿಯಿಂದ ನಡೆದ ʼಮಾಹೆದ ಆಟಿದ ತುಳು ಪರ್ಬʼ ಚಿತ್ರಕಲಾ ಸ್ಪರ್ಧೆಯಲ್ಲಿ ಕುಕ್ಕೇರ ಬೆಳಕು ಬೊಳ್ಳಮ್ಮ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಆಟಿ ತಿಂಗಳ ಮಹತ್ವ ಸಾರುವ ಉದ್ದೇಶದಿಂದ ವಿವಿ ವಿತಿಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜಾನಪದದ ವಿಷಯಾಧಾರಿತ ʼತುಳು ರಂಗ್‌ʼ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ತುಳುನಾಡಿನಲ್ಲಿ ಹೆಚ್ಚು ಆರಾಧಿಸಲ್ಪಡುವ ದೈವ ಸ್ವಾಮಿ ಕೊರಗಜ್ಜನ ಮುಖಭಾವದ ಚಿತ್ರವನ್ನು ಬೆಳಕು ರಚಿಸಿದ್ದರು. ಈ ಚಿತ್ರಕ್ಕೆ ದ್ವಿತೀಯ ಬಹುಮಾನ ಸಿಕ್ಕಿದೆ.
ಮಡಿಕೇರಿ ತಾಲೂಕಿನ ದೇವಸ್ತೂರು ಗ್ರಾಮದ ಕುಕ್ಕೇರ ಲಕ್ಷ್ಮಣ-ಜಯ ದಂಪತಿಯ ಪುತ್ರಿ ಬೆಳಕು ಮಣಿಪಾಲ ಸ್ಕೂಲ್ ಆಫ್ ಕಾಮರ್ಸ್ & ಎಕನಾಮಿಕ್ಸ್(ಎಂಎಸ್‌ಸಿಇ)ನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ.

coorg buzz
coorg buzz