ಮಡಿಕೇರಿ : ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಈಶ(isha) ಗ್ರಾಮೋತ್ಸವ 17ನೇ ಆವೃತ್ತಿ ಕರ್ನಾಟಕದಲ್ಲಿ ಈಗಾಗಲೆ ಆರಂಭವಾಗಿದ್ದು, 700ಕ್ಕೂ ಹೆಚ್ಚು ತಂಡಗಳು, 8,100ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಕರ್ನಾಟಕದ 18 ಜಿಲ್ಲೆಗಳಲ್ಲಿ 19 ಕ್ಲಸ್ಟರ್‌ಗಳಲ್ಲಿ ನಡೆಯುತ್ತಿದೆ. ಎಂಟು ಕ್ಲಸ್ಟರ್‌ಗಳಲ್ಲಿ ಥ್ರೋಬಾಲ್ ಪಂದ್ಯಾವಳಿ ನಡೆಯುತ್ತವೆ. ಪುರುಷರ ವಿಭಾಗದಲ್ಲಿ ವಾಲಿಬಾಲ್ ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್ ನಡೆಯಲಿದೆ. ಫೈನಲ್‌ನಲ್ಲಿ ಪ್ಯಾರಾ ವಾಲಿಬಾಲ್ ಪ್ರದರ್ಶನ ಪಂದ್ಯವೂ ಜರುಗಲಿದೆ.
ರಾಜ್ಯದಲ್ಲಿ ಕ್ಲಸ್ಟರ್ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ವಿಭಾಗೀಯ ಪಂದ್ಯಗಳು ಆಗಸ್ಟ್31ರಂದು ಉಡುಪಿಯಲ್ಲಿ ಮತ್ತು ಸೆಪ್ಟೆಂಬರ್ 7ರಂದು ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದಲ್ಲಿ ನಿಗದಿಯಾಗಿವೆ. ದೇಶದಾದ್ಯಂತ ಈಶ ಗ್ರಾಮೋತ್ಸವವು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ 35,000 ಕ್ಕೂ ಹೆಚ್ಚು ಗ್ರಾಮಗಳನ್ನು ವ್ಯಾಪಿಸಲಿದೆ. ಈ ವರ್ಷ 5,000 ಕ್ಕೂಹೆಚ್ಚುಮಹಿಳೆಯರು ಸೇರಿದಂತೆ 50,000ಕ್ಕೂಹೆಚ್ಚುಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದು, 6,000 ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಗ್ರಾಮೋತ್ಸವವು ಮೂರು ಹಂತಗಳಲ್ಲಿ ನಡೆಯಲಿದೆ: ಕ್ಲಸ್ಟರ್ ಹಂತ, ವಿಭಾಗೀಯ ಹಂತ ಮತ್ತು ಫೈನಲ್. ಗ್ರಾಂಡ್ ಫೈನಲ್ ಸೆಪ್ಟೆಂಬರ್ 21ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ಪ್ರತಿಷ್ಠಿತ ಆದಿಯೋಗಿ ಮುಂದೆ ನಡೆಯಲಿದೆ. ಕಳೆದ ವರ್ಷ, ಕರ್ನಾಟಕ ಅದ್ಭುತ ಪ್ರದರ್ಶನ ನೀಡಿ, ಪುರುಷರ ವಾಲಿಬಾಲ್‌ನಲ್ಲಿ ಮೊದಲ, ಎರಡನೇ ಮತ್ತು ಮೂರನೇ ಬಹುಮಾನ ಗೆದ್ದುಕೊಂಡಿತು. ಮಹಿಳೆಯರ ಥ್ರೋಬಾಲ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು ಎಂದು ವಿವರಿಸಿದರು.



