ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣ – ಸರ್ಕಾರಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಕೆ – ಮುಂದಿನ ನಡೆ ಏನು..?

Share this post :

ಬೆಂಗಳೂರು : ದೇಶಾದ್ಯಂತ ಸದ್ದು ಮಾಡಿರುವ ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣದ ತನಿಖಾ ಪ್ರಗತಿಯ ವರದಿಯನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಪ್ರಕರಣ
ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಭೇಟಿಯಾದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೋಹಂತಿ ವರದಿ ಸಲ್ಲಿಕೆ ಮಾಡಿ, 45 ನಿಮಿಷಕ್ಕೂ ಹೆಚ್ಚು ಸಮಯ ಚರ್ಚೆ ನಡೆಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಸಲ್ಲಿಕೆಯಾಗಿರುವ ತನಿಖಾ ಪ್ರಗತಿ ಆಧರಿಸಿ ಸದನದಲ್ಲಿ ಚರ್ಚೆಯಲ್ಲಿ ಪರಮೇಶ್‌ ಉತ್ತರ ನೀಡುವ ಸಾಧ್ಯತೆ ಇದೆ. ಶ*ವ ಹೂತ ಪ್ರಕರಣದಲ್ಲಿ ದೂರುದಾರ ಗುರುತಿಸಿದ್ದ ಎಲ್ಲಾ ಸ್ಥಳದಲ್ಲಿ ಅಗೆದು ಶೋಧ ನಡೆಸಲಾಗಿದೆ. ಎಲ್ಲೂ ಕೂಡಾ ಪೂರಕ ದಾಖಲೆ ಸಿಕ್ಕಿರಲಿಲ್ಲ. ಇದೀಗ ದೂರುದಾರ ವ್ಯಕ್ತಿಯನ್ನು ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಸದ್ಯ ತನಿಖಾ ಪ್ರಗತಿ ವರದಿ ಸರ್ಕಾರದ ಕೈಸೇರಿದ್ದು, ಮುಂದಿನ ತನಿಖೆ, ಎಸ್‌ಐಟಿಯ ನಡೆ ಬಗ್ಗೆ ಸರ್ಕಾರದಿಂದ ಯಾವ ರೀತಿಯ ಸೂಚನೆ ಬರುತ್ತೆ ಎಂಬುದು ಸದ್ಯಕ್ಕಿರುವ ಕುತೂಹಲ.

coorg buzz
coorg buzz