ಗೋಣಿಕೊಪ್ಪ : ಗೋಣಿಕೊಪ್ಪ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಕುಲ್ಲಚಂಡ ಪ್ರಮೋದ್ ಗಣಪತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಟ್ರಸ್ಟ್ ಸಂಚಾಲಕ ಅಜಿತ್ ಅಯ್ಯಪ್ಪ ಧ್ವಜಾರೋಹಣ ನೆರವೇರಿಸಿದರು.
ಸಮೀರ್ ಮುಖ್ಯ ಭಾಷಣ ಮಾಡಿದರು. ಗೋಣಿಕೊಪ್ಪ ಕಾಂಗ್ರೆಸ್ ಉಪಾಧ್ಯಕ್ಷ ನಾಯಂಡಿರ ಶಿವಾಜಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಂಶಿಫ್, ಪಂಚಾಯಿತಿ ಸದಸ್ಯರಾದ ಚೆಪ್ಪುಡಿರ ಧ್ಯಾನ್ ದೇವಯ್ಯ , ಗೋಣಿಕೊಪ್ಪಲು ಗ್ರಾಮ ಪಂಚಾಯತಿ ಸದಸ್ಯರಾದ ಶರತ್ ಕಾಂತ್, ಅಪ್ಸಲ್, ಪ್ರಮುಖರಾದ ಅಬ್ದುಲ್ ಸಮ್ಮದ್, ರಾಜಶೇಖರ್, ಸಜೀರ್, ಧನ್ಯ, ಖಾಲಿದ್, ಸಲೀಂ ಪಿಎಂ ಮುಂತಾದವರಿದ್ದರು.



