ಮಡಿಕೇರಿ : ಹಾಕಿ ಇಂಡಿಯಾ ವತಿಯಿಂದ ಪಂಜಾಬ್‌ನಲ್ಲಿ ನಡೆಯಲಿರುವ ಹಾಕಿ ಇಂಡಿಯಾ ಜೂನಿಯರ್ ಮೆನ್ಸ್ ನ್ಯಾಷನಲ್ ಚಾಂಪಿಯನ್‌ಶಿಪ್ 2025 ಹಾಕಿ ಟೂರ್ನಿಗೆ ರಾಜ್ರ ತಂಡ ಪ್ರಕಟವಾಗಿದ್ದು, ಕೊಡಗಿನ 11 ಮಂದಿ ಆಟಗಾರರು ಅವಕಾಶ ಗಿಟ್ಟಿಸಿದ್ದಾರೆ.
ನಾಯಕರಾಗಿ ಕೊಡಗಿನ ಬಿ.ಎಸ್. ಧ್ರುವ, ಆಟಗಾರರಾಗಿ ಬಿದ್ದಾಟಂಡ ಬೋಪಣ್ಣ, ಕುಲ್ಲೇಟಿರ ವಚನ್ ಕಾಳಪ್ಪ, ವಿಶ್ವನಾಥ್, ಹರ್ಷಿತ್ ಕುಮಾರ್, ಮಂಡೇಡ ಅಚ್ಚಯ್ಯ, ಬಲ್ಯಂಡ ಸಂಪನ್ ಗಣಪತಿ, ಚೋಯಮಾಡಂಡ ಆಕರ್ಷ್ ಬಿದ್ದಪ್ಪ, ಕೆ.ಆರ್. ಪೂಜಿತ್, ಕೋಳೆರ ಹೃತಿಕ್ ಅಯ್ಯಪ್ಪ, ಚೋಕಿರ ಕುಶಾಲ್ ಬೋಪಯ್ಯ ತಂಡದಲ್ಲಿದ್ದಾರೆ.
ತಂಡದ ಕೋಚ್ ಆಗಿ ಮೇಚಂದ ತನು ನಂಜಪ್ಪ, ಮ್ಯಾನೇಜರ್ ಆಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ಭಾಗವಹಿಸುತ್ತಿದ್ದಾರೆ.



