ಮಡಿಕೇರಿ : ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ಕೆ. ಹಂಸ ನೇಮಕವಾಗಿದ್ದಾರೆ. ಚೆಟ್ಟಿಮಾನಿ ಗ್ರಾಮದ ಕುಂದಚೆರಿ ನಿವಾಸಿಯಾಗಿರುವ ಹಂಸ ಪಕ್ಷದಲ್ಲಿ ಸಕ್ರಿಯರಾಗಿದ್ದು, ನೂತನ ಜವಾಬ್ದಾರಿ ನೀಡಿ ಶಾಸಕ ಎ.ಎಸ್. ಪೊನ್ನಣ್ಣ ಆದೇಶಿಸಿದ್ದಾರೆ.
ಕೊಡಗು ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪಟ್ಟಡ ರಕ್ಷಿತ್ ಚೆಂಗಪ್ಪ ಶಿಫಾರಸಿನ ಮೇರೆಗೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅನುಮೋದನೆಯೊಂದಿಗೆ ಈ ನೇಮಕಾತಿ ಮಾಡಲಾಗಿದೆ.
ನೂತನ ಅಧ್ಯಕ್ಷರಿಗೆ ಜವಾಬ್ದಾರಿಯ ಆದೇಶ ಪತ್ರವನ್ನು ಶಾಸಕ ಪೊನ್ನಣ್ಣ ಹಸ್ತಾಂತರಿಸಿ ಶುಭಕೋರಿದರು.



