ವಿರಾಜಪೇಟೆ ಸ್ನೇಹಿತರ ಒಕ್ಕೂಟದಿಂದ ಹೆಗ್ಗಳ ಸರ್ಕಾರಿ ಶಾಲಾ ಮಕ್ಕಳಿಗೆ ಟೈ, ಬೆಲ್ಟ್ ವಿತರಣೆ

Heggala government school

Share this post :

ಸ್ನೇಹಿತರ ಒಕ್ಕೂಟ ವಿರಾಜಪೇಟೆ (Virajpet) ವತಿಯಿಂದ ವಿರಾಜಪೇಟೆಯ ಹೆಗ್ಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸರಿಸುಮಾರು 25 ಮಕ್ಕಳಿಗೆ ಟೈ ,ಬೆಲ್ಟ್ ಹಾಗೂ ಶಿಕ್ಷಕರಿಗೆ ಟೇಬಲ್ ನೀಡುವ ಮೂಲಕ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುತ್ತಾರೆ ಇವರ ಈ ಕಾರ್ಯ ಸಾರ್ವಜನಿಕರಲ್ಲಿ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸ್ನೇಹಿತರ ಒಕ್ಕೂಟ ಪ್ರಮುಖರಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರೆಲ್ಲ ಸೇರಿ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ನೇಹಿತರ ಒಕ್ಕೂಟ ಪ್ರಮುಖರಾದ ಮಹಮ್ಮದ್ ನಯಾಜ್, ಹಬೀಬುಲ್ಲಾ ಶರೀಫ್, ಝೀಯಾವುಲ್ಲ, ಝಬಿವುಲ್ಲಾ,ಜಿಶಾನ್ ಉಪಸ್ಥಿತರಿದ್ದರು.

coorg buzz
coorg buzz