ಮಡಿಕೇರಿ : ಕೊಡಗು ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಹುಣಸೂರಿನ ವಿಜಯನಗರದ ಅನೀಸ್ ಅಹಮದ್(45), ಹುಣಸೂರು ಪಟ್ಟಣದ ಸ್ಕೋರ್ ಬೀದಿ ನಿವಾಸಿ ಚೇತನ್(40) ಬಂಧಿತರು. ಗಾಂಜಾವನ್ನು ಕೇರಳಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿದ್ದಾರೆ. ಬಂಧಿತರಿಂದ 7 ಕೆಜಿ 872 ಗ್ರಾಂ ತೂಕದ(2,50,000 ರೂ. ಮೌಲ್ಯದ) ಗಾಂಜಾ, ಸ್ವಿಫ್ಟ್ ಕಾರು, ಒಂದು ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಪಡಿಸಲಾಗಿದೆ.



