ಭಾರತದಲ್ಲಿ ಟೊಯೊಟಾ ಇನ್ನೋವಾ (Toyota Innova) ಬಿಡುಗಡೆಯಾಗಿ 20 ವರ್ಷಗಳನ್ನು ಪೂರ್ಣಗೊಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಇನ್ನೋವಾ ಕಾರು ಲಕ್ಷಾಂತರ ಭಾರತೀಯ ಕುಟುಂಬಗಳು ಮತ್ತು ವ್ಯವಹಾರಗಳಿಗೆ ವಿಶ್ವಾಸಾರ್ಹ ಒಡನಾಡಿಯಾಗಿ ಬೆಳೆದಿದೆ. ಇನ್ನೋವಾ, ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್ ಎಂಬ ಮೂರು ಕಾರುಗಳು ಒಟ್ಟಾರೆಯಾಗಿ ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿದ್ದು, ಬ್ರ್ಯಾಂಡ್ ಅಚಲ ಗ್ರಾಹಕ ನಂಬಿಕೆ ಮತ್ತು ಶಾಶ್ವತ ಮೌಲ್ಯದ ಸಂಕೇತವಾಗಿದೆ ಎಂದು ಟೊಯೋಟಾ ಹೆಮ್ಮೆ ವ್ಯಕ್ತಪಡಿಸಿದೆ.
2016 ರಲ್ಲಿ ಟೊಯೊಟಾ ಕಂಪನಿಯು ಇನ್ನೋವಾ ಕ್ರಿಸ್ಟಾವನ್ನು ಬಿಡುಗಡೆ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿತು, ಇದು ಸಂಪೂರ್ಣವಾಗಿ ಹೊಸ ವಿನ್ಯಾಸ, ಪವರ್ ಫುಲ್ ಎಂಜಿನ್, ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ವರ್ಧಿತ ಸುರಕ್ಷತೆಯನ್ನು ತರುವ ಮೂಲಕ ಮಾಲೀಕತ್ವದ ಅನುಭವವನ್ನು ಹೊಸ ಎತ್ತರಕ್ಕೆ ಏರಿಸಿತು. ಈ ಡಿಮ್ಯಾಂಡ್ ಮುಂದುವರೆಸುತ್ತಾ, 2022 ರಲ್ಲಿ ಇನ್ನೋವಾ ಹೈಕ್ರಾಸ್ ಆಗಮನಕ್ಕೆ ಸಾಕ್ಷಿಯಾಯಿತು.
ಟೊಯೊಟಾ ಇನ್ನೋವಾದ ಯಶಸ್ಸಿನ ಹಿಂದಿನ ಪ್ರಮುಖ ಕಾರಣವೆಂದರೆ ಸೌಕರ್ಯ, ಪ್ರಾಯೋಗಿಕತೆ ಮತ್ತು ಹೊಂದಿಕೊಳ್ಳುವಿಕೆಯ ಮಿಶ್ರಣವನ್ನು ನೀಡುವುದಾಗಿದೆ. ಎರಡು ದಶಕಗಳಿಂದ ಟೊಯೋಟಾ ಗ್ರಾಹಕರ ಪ್ರತಿಕ್ರಿಯೆಗೆ ಆಳವಾಗಿ ಹೊಂದಿಕೊಳ್ಳುತ್ತಿದೆ. ಸುರಕ್ಷತೆ, ಸಂಪರ್ಕ ಮತ್ತು ಅನುಕೂಲತೆಯಲ್ಲಿ ಚಿಂತನಶೀಲ ವರ್ಧನೆಗಳನ್ನು ನಿರಂತರವಾಗಿ ಪರಿಚಯಿಸುತ್ತಿದೆ.
ಇವೆಲ್ಲವೂ ಅರ್ಥಗರ್ಭಿತ ಚಾಲನಾ ಅನುಭವವನ್ನು ಸಂರಕ್ಷಿಸುವುದರೊಂದಿಗೆ ಇನ್ನೋವಾವನ್ನು ಟೊಯೋಟಾ ಅಭಿಮಾನಿಗಳಲ್ಲಿ ಮನೆಮಾತಾಗಿ ಮತ್ತು ಪ್ರೀತಿಯ ಆಯ್ಕೆಯನ್ನಾಗಿ ಮಾಡಿದೆ. ಈ ಸೌಕರ್ಯವು ಟೊಯೋಟಾದ ದೀರ್ಘಕಾಲೀನ ಮಾಲೀಕತ್ವದ ಮೌಲ್ಯದ ಪ್ರಸಿದ್ಧ ಪರಂಪರೆಯಿಂದ ಮತ್ತಷ್ಟು ಬಲಗೊಂಡಿದೆ. ಇನ್ನೋವಾವನ್ನು ಕೇವಲ ವಿಶ್ವಾಸಾರ್ಹ ವಾಹನವಾಗಿ ಮಾತ್ರವಲ್ಲದೆ, ಜೀವನದ ಪ್ರತಿಯೊಂದು ಹಂತಕ್ಕೂ ವಿಶ್ವಾಸಾರ್ಹ ಒಡನಾಡಿಯಾಗಿ ಮಾಡಿದೆ.
ಸದ್ಯ 2022 ರಲ್ಲಿ ಆಗಮಿಸಿದ ಇನ್ನೋವಾ ಹೈಕ್ರಾಸ್ ವಿಶೇಷತೆಗಳು, ಸೆಲ್ಫ್-ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿಯಾಗಿದೆ. ಹೈಕ್ರಾಸ್ ಅನ್ನು ಸೌಕರ್ಯ, ಪರ್ಫಾಮೆನ್ಸ್ ಮತ್ತು ಮೈಲೇಜ್ ಹೆಚ್ಚಿಸಲು ನಿರ್ಮಿಸಲಾಗಿದೆ. ಹಾಗೆಯೇ ತನ್ನ ಹಳೆಯ ಮಾಡಲ್ಗಳಂತೆ ಅದೇ ವಿಶ್ವಾಸಾರ್ಹತೆ ಮತ್ತು ವಿಶಾಲತೆಯನ್ನು ಸಹ ಉಳಿಸಿಕೊಂಡಿದೆ. ಇದು ಇನ್ನೋವಾವನ್ನು ಮನೆಮಾತನ್ನಾಗಿ ಮಾಡಿದೆ.
ಇದು ಟೊಯೊಟಾದ 5ನೇ ತಲೆಮಾರಿನ ಸೆಲ್ಫ್ – ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಅನ್ನು ಪ್ರತಿನಿಧಿಸುತ್ತದೆ. ಇದು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಇ-ಡ್ರೈವ್ ಟ್ರಾನ್ಸ್ಮಿಷನ್ ಅನ್ನು ಸಂಯೋಜಿಸುತ್ತದೆ. ಸಂಯೋಜಿತ 137 kW (186 PS) ಗರಿಷ್ಠ ಪವರ್ ಹೊರಹಾಕುತ್ತದೆ. ಹಾಗೆಯೇ ಅತ್ಯುತ್ತಮ ಮೈಲೇಜ್ ನೀಡುತ್ತದೆ.
ಪನೋರಮಿಕ್ ಸನ್ರೂಫ್, ಆಟೋ ಹೈ ಬೀಮ್ನೊಂದಿಗೆ LED ಹೆಡ್ಲ್ಯಾಂಪ್ಗಳು, ಗನ್ ಮೆಟಲ್ ಫಿನಿಶ್ನೊಂದಿಗೆ ಆಕರ್ಷಕ ಮುಂಭಾಗದ ಗ್ರಿಲ್, ವಿಭಾಗದಲ್ಲಿ ಮೊದಲ ಬಾರಿಗೆ ಡ್ಯುಯಲ್ – ಫಂಕ್ಷನ್ ಡೇ-ಟೈಮ್ ರನ್ನಿಂಗ್ ಲೈಟ್ (DRL) ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಎದ್ದು ಕಾಣುತ್ತದೆ. ನವೆಂಬರ್ 2024 ರಲ್ಲಿ ತನ್ನ ಎರಡನೇ ವಾರ್ಷಿಕೋತ್ಸವವನ್ನು ಗುರುತಿಸುವ ಸಮಯದಲ್ಲಿ ಭಾರತದಲ್ಲಿ ಇನ್ನೋವಾ ಹೈಕ್ರಾಸ್ 1,00,000 ಯುನಿಟ್ ವಾಹನಗಳ ಮಾರಾಟದ ಮೈಲಿಗಲ್ಲು ಸಾಧಿಸಿತ್ತು. ಅದೇ ಸಮಯದಲ್ಲಿ ಅದರ ಸುಧಾರಿತ ತಂತ್ರಜ್ಞಾನ, ಸಾಟಿಯಿಲ್ಲದ ಸೌಕರ್ಯ ಮತ್ತು ಅಸಾಧಾರಣ ಪರ್ಫಾಮೆನ್ಸ್ನಿಂದಾಗಿ ಇನ್ನೋವಾ ಹೈಕ್ರಾಸ್ ಜನಪ್ರಿಯತೆ ಹೆಚ್ಚಾಗಿದೆ.



