ಕ್ರೀಡಾ ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ ಹುದ್ದೆಗೆ ಅರ್ಜಿ ಆಹ್ವಾನ

Share this post :

ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ (ಕೇರ್‌ಟೇಕರ್) ಹುದ್ದೆಗೆ (ಹೊರಗುತ್ತಿಗೆ ಆಧಾರದ ಮೇಲೆ) ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ಕ್ಷೇಮಪಾಲಕರು ಕಿರಿಯರ ಕ್ರೀಡಾ ನಿಲಯದಲ್ಲಿಯೇ ಇರಬೇಕು. ಮಹಿಳಾ ಅಭ್ಯರ್ಥಿಯಾಗಿರಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ. ೦೮೨೭೨-೨೨೦೯೮೬ ಅಥವಾ ೯೪೮೦೦೩೨೭೧೨ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.

coorg buzz
coorg buzz