ನಾಪೋಕ್ಲು ಕಕ್ಕಬ್ಬೆ ಬಳಿಯ ಕುಂಜಿಲ ಗ್ರಾಮದ ನಿವಾಸಿ ಹಲವು ವರ್ಷಗಳ ಹಿಂದೆ ಜಿಲ್ಲೆಯ ವಿವಿಧೆಡೆ ಸಂಚರಿಸುತ್ತಿದ್ದ ಐಡಿಯಲ್ ಬಸ್ಸಿನ ಮಾಲೀಕರಾಗಿದ್ದ ಕುಂಜಿಲ ಯೂಸುಫ್ (60)ರವರು ನಿಧನರಾಗಿದ್ದಾರೆ. ಮೃತರ ದಫನ ಕಾರ್ಯವು ಇಂದು ಮದ್ಯಾಹ್ನ ಕುಂಜಿಲ ಪೈನರಿ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.



