ಕೊಡಗಿನ ಪಾಲಂಗಾಲದಲ್ಲಿ ಭೂಕುಸಿತ – ಕೊಚ್ಚಿ ಹೋದ ಎಕ್ರೆಗಟ್ಟಲೆ ಅರಣ್ಯ ಪ್ರದೇಶ..!

Share this post :

coorg buzz

ವೀರಾಜಪೇಟೆ : ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಭಾರಿ ಪ್ರಮಾಣದ ಭೂ ಕುಸಿತವಾಗಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಅನಾಹುತವಾಗಿಲ್ಲ.
ವಿರಾಜಪೇಟೆ ಹೋಬಳಿಯ ಪಾಲಂಗಾಲ ಗ್ರಾಮದ ಸ.ನಂ 171/11P2 ರಲ್ಲಿ ಈ ಭೂಕುಸಿತ ಸಂಭವಿಸಿದೆ. 341.00 ಎಕ್ರೆ ಅರಣ್ಯ ಪ್ರದೇಶದ ಕೊಡಗು ಮತ್ತು ಕೇರಳ ಗಡಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಎತ್ತರದ ಪ್ರದೇಶದಿಂದ ಕುಸಿತ ಸಂಭವಿಸಿ, ನೂರಾರು ಮೀಟರ್‌ಗಳ ಉದ್ದಕ್ಕೆ ಸಾಗಿದೆ. ಅರಣ್ಯ ಪ್ರದೇಶದೊಳಗೇ ವ್ಯಾಪ್ತಿ ಇದ್ದುದ್ದರಿಂದ ಹೆಚ್ಚಿನ ಹಾನಿಯಾಗಿಲ್ಲ. ಈ ಭೂಕುಸಿತ ಜಾಗದಿಂದ ಅಂದಾಜು 15KM ಆ ವ್ಯಾಪ್ತಿಯಲ್ಲಿ ಜನವಸತಿ ಕೂಡಾ ಇರುವುದಿಲ್ಲ ಎಂದು ತಹಸೀಲ್ದಾರ್‌ ತಿಳಿಸಿದ್ದಾರೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಳೀಗೆ ಮಾಹಿತಿ ರವಾನಿಸಿದ್ದು, ತೆರಳಿ ಪರಿಶೀಲನೆ ನಡೆಸಲಿದ್ದಾರೆ.