‘ಸು ಫ್ರಮ್ ಸೋ’ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

Share this post :

coorg buzz

ಕನ್ನಡ ಚಿತ್ರರಂಗದಲ್ಲಿ ಕೆಲವರು ಇನ್ನೂ ಕೂಡ KGF ಚಿತ್ರದ ಗುಂಗಿನಲ್ಲಿದ್ದಾರೆ. ಪ್ಯಾನ್ ಇಂಡಿಯಾ ಎಂಬ ಭ್ರಮಾ ಲೋಕದ ಬೆನ್ನತ್ತಿದ್ದಾರೆ. ಆದರೆ ಇನ್ನು ಕೆಲವರು ಹೊಸ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೊಸ ಹೊಸ ಆಲೋಚನೆಗಳಿಂದ ಎಲ್ಲರನ್ನು ನಿಬ್ಬೇರಗಾಗಿಸುತ್ತಿದ್ದಾರೆ. ಹೊಸಬರ ಸಿನಿಮಾವೊಂದು ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ. ”ಸು ಫ್ರಮ್‌ ಸೋ” (Su From So) ಚಿತ್ರ ಕನ್ನಡ ಚಿತ್ರರಂಗದ ಸದ್ಯದ ಉತ್ತಮ ಉದಹಾರಣೆ. ಅಬ್ಬರದ ಪ್ರಚಾರ ಇಲ್ಲ.. ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಸ್ಟಾರ್ ಇಲ್ಲ. ಆದರೂ ಇವತ್ತು ಎಲ್ಲರ ಎಲ್ಲರ ಬಾಯಲ್ಲಿ ”ಸು ಫ್ರಮ್ ಸೋ” ನಲಿಯುತ್ತಿದೆ. ಕನ್ನಡಿಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವಲ್ಲಿ ಯಶಸ್ವಿಯಾಗಿದೆ. ಇಷ್ಟೇ ಅಲ್ಲ ಹತ್ತು ಹಲವು ದಾಖಲೆಗಳನ್ನು ಕೂಡ ಈ ಹೊಸ ತಂಡ ಮುರಿಯುತ್ತಿದೆ. ಇವರ ಅಬ್ಬರದ ಮುಂದೆ ಸದ್ಯ ಯಾವ ಸೂಪರ್ ಸ್ಟಾರ್‌ ಕೂಡ ಇಲ್ಲ.

ಸಿನಿಮಾ ರಿಲೀಸ್ ಆದಲ್ಲಿಂದ ‘ಸು ಫ್ರಮ್ ಸೋ’ ಕಲೆಕ್ಷನ್ ಏರಿಕೆ ಆಗುತ್ತಲೇ ಇದೆ. ಈ ಸಿನಿಮಾ ಮಾಡುತ್ತಿರುವ ಕಲೆಕ್ಷನ್​ಗೆ ಹಲವು ದಾಖಲೆಗಳು ಉಡೀಸ್ ಆಗಿವೆ. ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಕೊಟ್ಟಿದೆ. ವೀಕೆಂಡ್‌ನಲ್ಲಿ ಮಾತ್ರವಲ್ಲದೆ ವೀಕ್‌ಡೇಸ್‌ನಲ್ಲೂ ಅದಕ್ಕಿಂಗ ಹೆಚ್ಚು ಕಲೆಕ್ಷನ್ ಆಗುತ್ತಿರೋದು ಮತ್ತೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ಸಿಕ್ಕಿರೋದಂತೂ ನಿಜ. ಇನ್ನು 5ನೇ ದಿನಕ್ಕೆ ಹೋಲಿಕೆ ಮಾಡಿದರೆ, ಆರನೇ ದಿನ ಇನ್ನೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ. ಹಾಗಿದ್ದರೆ, 6ನೇ ದಿನದ ಕಲೆಕ್ಷನ್ ಎಷ್ಟು?

ಚಿತ್ರದ ಆರು ದಿನಗಳ ಕಲೆಕ್ಷನ್ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ 19 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಚಿತ್ರ ಸುಮಾರು 16.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಬುಧವಾರ ಕೂಡ ಸಿನಿಮಾ 3.50 ಕೋಟಿ ಬಾಚಿಕೊಂಡಿದೆ ಎಂಬುದು ವಿಶೇಷ. 5ನೇ ದಿನಕ್ಕಿಂತಲೂ 6ನೇ ದಿನದ ಕಲೆಕ್ಷನ್ ಏರಿಕೆಯಾಗಿದೆ.

ಸು ಫ್ರಮ್ ಸೋ’ ಕ್ರೇಜ್ ನೋಡುತ್ತಿದ್ದರೆ, ಕರ್ನಾಟಕದಲ್ಲಿ ಇನ್ನೂ ಎರಡು ವಾರ ಈ ಸಿನಿಮಾದ ಹವಾ ಇರುತ್ತೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾಕಂದ್ರೆ ಕಳೆದ ಆರು ದಿನಗಳಲ್ಲಿ ಈ ಸಿನಿಮಾ ಗಳಿಕೆ ಏರಿಕೆಯಾಗುತ್ತಿದೆಯೇ ಹೊರತು ಇಳಿಕೆಯಾಗುತ್ತಿಲ್ಲ. ಹೀಗಾಗಿ ಎರಡನೇ ವೀಕೆಂಡ್‌ನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಲೆಕ್ಕ ಹಾಕಲಾಗಿದೆ. ಈ ಸಿನಿಮಾ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಕಮ್ಮಿ ಅಂದರೂ ಮೂವತ್ತು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಲೆಕ್ಕ ಹಾಕಲಾಗಿದೆ.