ನಟಿ ರಮ್ಯಾಗೆ ದರ್ಶನ್‌ ಫ್ಯಾನ್ಸ್‌ ನಿಂದನೆ – ಕೊನೆಗೂ ಮೌನ ಮುರಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ – ರಮ್ಯಾ ಜೊತೆ ನಾವಿದ್ದೇವೆ ಎಂದ ಶಿವಣ್ಣ ದಂಪತಿ..!

Share this post :

coorg buzz

ಬೆಂಗಳೂರು : ಸೋಷಿಯಲ್‌ ಮೀಡಿಯಾದಲ್ಲಿ ತನ್ನ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ ದರ್ಶನ್‌ ಫ್ಯಾನ್ಸ್‌ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿರುವ ಸ್ಯಾಂಡಲ್‌ವುಡ್‌ ತಾರೆ ರಮ್ಯಾಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿಮ್ಮ ನಿಲುವು ಸರಿಯಾಗಿದೆ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆಂದು ಶಿವರಾಜ್‌ಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆ ವಿರುದ್ಧವು ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು ಅಂತ ಅವರು ಹೇಳಿದ್ದಾರೆ.
ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ, ಮತ್ತು ಮೊಟ್ಟಮೊಡಲು ಒಬ್ಬ ವ್ಯಕ್ತಿಯಾಗ ಗೌರವಿಸುವುದು ತುಂಬಾ ಮುಖ್ಯ. ಸೋಷಿಯಲ್‌ ಮೀಡಿಯಾ ತುಂಬಾ ಬಲಿಷ್ಟವಾದ ಅಸ್ತ್ರ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ- ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆಂದು ನಟಿ ರಮ್ಯಾಗೆ ಅಭಯ ನೀಡಿದ್ದಾರೆ.