ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಮಡಿಕೇರಿಯಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು. ವಿವಿಧ ಸಂಘ ಸಂಸ್ಥೆಗಳ ಸಹಕಾರದೊಮದಿಗೆ ಕೊಡಗು ಪತ್ರಕರ್ತರ ಸಂಘ ಗೌಡ ಸಮಾಜ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿದೆಡೆಯ ಮಂದಿ ಪಾಲ್ಗೊಂಡು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. 75 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಮರ್ ಜವಾನ್ ಸ್ಮಾರಕದ ಪ್ರತಿರೂಪಕ್ಕೆ ಪುಪ್ಪಾರ್ಚನೆ ಮಾಡಿ, ಹಣತೆ ಬೆಳಗಿ ಯೋಧರಿಗೆ ಭಾವಪೂಣ೯ ಗೌರವ ನಮನ ಸಲ್ಲಿಸಿದರು.
ಕಾಗಿ೯ಲ್ ಸಮರದಲ್ಲಿ ಹುತಾತ್ಮರಾದ ಪೆಮ್ಮಂಡ ಕಾವೇರಪ್ಪ ಅವರ ಪತ್ನಿ ಪೆಮ್ಮಂಡ ಶೋಭಾ ಕಾವೇರಪ್ಪ ದೀಪಬೆಳಗಿಸಿ ಉದ್ಘಾಟಿಸಿದರು. ರೋಟರಿ ಜಿಲ್ಲೆಯ ನಿಕಟಪೂವ೯ ಗವನ೯ರ್ , ಮಾಜಿ ನೌಕದಳದ ಅಧಿಕಾರಿ ವಿಕ್ರಂದತ್ತ, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಕಾಯ೯ದಶಿ೯ ಸುರೇಶ್ ಬಿಳಿಗೇರಿ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ.ಕಾಯ೯ಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾನಿಕುಟ್ಟೀರ ಕುಟ್ಟಪ್ಪ ವೇದಿಕೆಯಲ್ಲಿದ್ದರು.
ಈ ಸಂದರ್ಭ ಮಾತನಾಡಿದ ವಿಕ್ರಂದತ್ತ, ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಹೋರಾಟ ಮಾಡಿದ ಯುದ್ದವಾಗಿ ಕಾಗಿ೯ಲ್ ಸಮರ ದಾಖಲಾಗಿದೆ. ಆ ಯುದ್ದದಲ್ಲಿ ಭಾರತದ ಭೂಮಿಯ ಸಂರಕ್ಷಣೆಗಾಗಿ 527 ವೀರ ಯೋಧರು ಹುತಾತ್ಮರಾದರು. ಆ ಯೋಧರ ಬಲಿದಾನವನ್ನು ಈ ಕಾಯ೯ಕ್ರಮದ ಮೂಲಕ ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಪ್ರತೀ ದಿನವೂ ನಮ್ಮ ರಕ್ಷಣೆಗಾಗಿ ಶ್ರಮವಹಿಸುತ್ತಿರುವ ಯೋಧರನ್ನು ರಕ್ಷಿಸು ಎಂಬ ಪ್ರಾಥ೯ನೆಯನ್ನು ಎಲ್ಲರೂ ಪ್ರತೀ ದಿನ ಮನೆಗಳಲ್ಲಿ ಮಾಡುವಂತಾಗಬೇಕು. ಆ ಪ್ರಾಥ೯ನೆ ನಮ್ಮೆಲ್ಲರ ದಿನನಿತ್ಯದ ಕತ೯ವ್ಯದಂತಾಗಬೇಕೆಂದು ವಿಕ್ರಂದತ್ತ ಆಶಿಸಿದರು.
ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಸೈನಿಕರ ನಾಡು ಎಂಬ ಹಿರಿಮೆಯ ಕೊಡಗು ಜಿಲ್ಲೆಯಲ್ಲಿನ ವಿವಿಧ ಸಂಘಸಂಸ್ಥೆಗಳು ಈ ರೀತಿಯಲ್ಲಿ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಯೋಧರಿಗೆ ಅಥ೯ಪೂಣ೯ ರೀತಿಯಲ್ಲಿ ತನ್ನ ಗೌರವ ಸಲ್ಲಿಸಿದೆ ಎಂದರು. ಯೋಧರ ಸ್ಮರಣೆಯಲ್ಲಿ ಆಯೋಜಿಸುವ ಯಾವುದೇ ಕಾಯ೯ಕ್ರಮಗಳು ಕೆಲವು ದಿನಗಳಲ್ಲಿ ಮರೆತು ಹೋಗಬಹುದು. ಆದರೆ ದೇಶರಕ್ಷಣೆಯಲ್ಲಿ ತಮ್ಮ ಎಲ್ಲ ಸುಖಸಂತೋಷವನ್ನೇ ತ್ಯಾಗ ಮಾಡುವ ಯೋಧರನ್ನು ಮಾತ್ರ ನಾವಂದೂ ಮರೆಯಬಾರದು. ಹೀಗಾಗಿಯೇ ಕೊಡಗು ಪತ್ರಕತ೯ರ ಸಂಘ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಗಳು ಯೋಧ ಮೊದಲು, ದೇಶ ಮೊದಲು ಎಂಬ ಸಂದೇಶದೊಂದಿಗೆ ಈ ಕಾಯ೯ಕ್ರಮ ಆಯೋಜಿಸಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಕಳೆದ ವಷ೯ದಿಂದ ರೋಟರಿ ಮಿಸ್ಟಿ ಹಿಲ್ಸ್ ದೀಪನಮನ ಕಾಯ೯ಕ್ರಮದ ಮೂಲಕ ಯೋಧರಿಗೆ ಗೌರವ ಸಲ್ಲಿಸುವಲ್ಲಿ ನಿರತವಾಗಿದ್ದು ಪ್ರತೀ ವಷ೯ವೂ ಕಾಯ೯ಕ್ರಮವನ್ನು ಯೋಧರಿಗಾಗಿ ಮೀಸಲಿಡುವುದಾಗಿ ಹೇಳಿದರು.
ಶ್ರೀರಾಮಾಂಜನೇಯ ಭಜನಾ ಮಂಡಳಿಯ ಕೆ.ಕೆ.ಮಹೇಶ್ ಕುಮಾರ್, ಗಾಯಕ ರವಿ ಭೂತನಕಾಡು ಯೋಧರು ಮತ್ತು ಭಾರತಕ್ಕೆ ಜೈಘೋಷಗಳನ್ನು ಮೊಳಗಿಸಿ, ದೇಶಭಕ್ತಿಗೀತೆ ಹಾಡಿದರು. ಮೈಸೂರಿನ ಪಾವನ ಇವೆಂಟ್ಸ್‌ನ ಗಾಯಕ, ಗಾಯಕಿಯರಿಂದ ವಂದೇಮಾತರಂ, ಸಂದೇಶ್ ಆತೇಹೇ, ಮಿಲೆ ಸುರೇ ಮೇರ ತುಮಾರ… ಮೊದಲಾದ ಗೀತೆಗಳನ್ನು ಹಾಡಿದರು. ಪತ್ರಕರ್ತ ಜಿ.ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್ ರಾಷ್ಟ್ರ ದೇವಗೆ.. ಪ್ರಾಣ ದೀವಿಗೆ.. ಸೇವೆಯಾಗಲಿ ನಾಡಿಗೆ ಎಂಬ ಹಾಡಿನ ಮೂಲಕ ಗಮನ ಸೆಳೆದರೆ, ಟಿ.ಕೆ. ಸುಧೀರ್ ಯಂಹಾ ಡಾಲ್ ಡಾಲ್ ಪರ್ ಎಂಬ ಹಾಡಿನ ಮೂಲಕ ಮೆಚ್ಚುಗೆ ಗಳಿಸಿದರು.
ಕೊಡಗು ಪತ್ರಕತ೯ರ ಸಂಘದ ನಿದೇ೯ಶಕ ವಿನೋದ್ ಮೂಡಗದ್ದೆ ಮತ್ತು ಕುಡೆಕಲ್ ಸಂತೋಷ್ ಕಾಯ೯ಕ್ರಮ ನಿರೂಪಿಸಿದರು. ಕನಾ೯ಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ, ಸಂಸ್ಕೖತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಹಾಜರಿದ್ದರು. ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮಕ್ಕೆ ಕನ್ನಡ ಮತ್ತು ಸಂಸ್ಕೖತಿ ಇಲಾಖೆ, ಮಡಿಕೇರಿ ಗೌಡ ಸಮಾಜ, ಶಕ್ತಿ ಪ್ರತಿಷ್ಠಾನ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಶಾಖೆ, ಕೊಡಗು ಪತ್ರಿಕಾಭವನ ಟ್ರಸ್ಟ್, ಮಡಿಕೇರಿ ರೋಟರಿ , ಮಡಿಕೇರಿ ಇನ್ನರ್ ವೀಲ್, ರೋಟರಿ ಮಡಿಕೇರಿ ವುಡ್ಸ್, ಕೇಶವಪ್ರಸಾದ್ ಮುಳಿಯ, ಕೆಡಿಸಿಸಿ ಬ್ಯಾಂಕ್, ಮಡಿಕೇರಿಯ ಭಗವಾನ್ ಗ್ಲಾಸ್ ಅಂಡ್ ಫ್ಲೈ ವುಡ್ , ಅತ್ತೂರಿನ ಜ್ಞಾನಗಂಗ ರೆಸಿಡೆನ್ಶಿಯಲ್ ಸ್ಕೂಲ್, ಮಡಿಕೇರಿಯ ಅರುಣ್ ಸ್ಟೋರ್ಸ್, ಶಾಂತಿ ಸಾಗರ್ ರೆಸ್ಟೋರೆಂಟ್, ಸ್ವಾಗತ್ ಡೆಕೋರೇಟರ್ಸ್ ಸಂಸ್ಥೆಗಳು ಸಹಯೋಗ ನೀಡಿದ್ದವು.