ಕರಿಕೆ : ಮನೆ ಮೇಲೆ ಮರ ಬಿದ್ದು ಹಾನಿ – ಟಾರ್ಪಾಲ್ ವಿತರಿಸಿದ ಗ್ರಾಪಂ ಅಧ್ಯಕ್ಷ ಬಾಲಚಂದ್ರ ನಾಯರ್

Share this post :

coorg buzz

ಕರಿಕೆ : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಹಲವೆಡೆ ಅನಾಹುತ ಸಂಭವಿಸುತ್ತಿದೆ.
ಕರಿಕೆ ಚೆತ್ತುಕಾಯ ದೊಡ್ಡಚೇರಿ ಗ್ರಾಮದ ದಾಮೋದರ ಎಂಬವರ ಮನೆಗೆ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಭೇಟಿ ನೀಡಿ ಪರಿಶೀಲಿಸಿದರು. ತಾತ್ಕಾಲಿಕ ಪರಿಹಾರವಾಗಿ ಮನೆಯ ಮೇಲೆ ಹಾಕಲು ಪಂಚಾಯಿತಿ ವತಿಯಿಂದ ವಿಶಾಲವಾದ ಟಾರ್ಪಾಲ್ ವಿತರಿಸಿದರು. ಮಳೆ ಕಡಿಮೆಯಾದ ನಂತರ ದುರಸ್ತಿಯ ಭರವಸೆ ನೀಡಿದರು.