ಕೊಡಗು : ವಾಹನದ ಮೇಲೆ ಮರ ಬಿದ್ದು ಪತ್ರಕರ್ತ ಜೀವಪಾಯದಿಂದ ಪಾರಾಗಿದ್ದಾರೆ. ಪ್ರತಿನಿಧಿ ಪತ್ರಿಕೆ ಸೋಮವಾರಪೇಟೆ ವರದಿಗಾರ ಡಿ. ಜಿ. ಶರಣ್ ಗೌಡ ಹರಗ ಶನಿವಾರ ರಾತ್ರಿ ಮನೆಗೆ ವಾಹನದಲ್ಲಿ ತೆರಳುತ್ತಿದ್ದಾಗ ಶಾಂತಳ್ಳಿ ರಸ್ತೆಯ ಜೆಡಿಗುಂಡಿ ಎಂಬಲ್ಲಿ ಇವರು ಚಲಾಯಿಸುತ್ತಿದ್ದ ಮಾರುತಿ ಒಮ್ನಿ ಕಾರಿನ ಮೇಲೆ ಮರ ಬಿದ್ದಿದೆ . ಕಾರು ತೀವ್ರವಾಗಿ ಜಖಂ ಆಗಿದೆ. ಕಾರಿನಲ್ಲಿ ಒಬ್ಬರೆ ಇದ್ದ ಕಾರಣ, ಮುಂಭಾಗಕ್ಕೆ ಹಾನಿಯಾಗದ ಹಿನ್ನೆಲೆ ಅಪಾಯದಿಂದ ಹೊರ ಬಂದರು. ಬರೆ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತವಾಗಿದೆ. ಅರಣ್ಯ ಇಲಾಖೆಯಿಂದ ಮರ ತೆರುವುಗೊಳಿಸಲಾಗಿದೆ. ವಾಹನ ಸಂಚಾರ ಆರಂಭವಾಗಿದೆ.
