ಹೊಸ ಬ್ಯುಸಿನೆಸ್‌ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ!

Actress Rashmika Mandanna

Share this post :

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಮುಟ್ಟಿದ್ದೆಲ್ಲ ಚಿನ್ನ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಇದೀಗ ನಟಿ ರಶ್ಮಿಕಾ ಬ್ಯುಸಿನೆಸ್‌ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಈ ಬಗ್ಗೆ ರಶ್ಮಿಕಾ, ತಮ್ಮ ತಾಯಿ ಅವರೊಂದಿಗಿನ ವಿಡಿಯೋ ಕಾಲ್‌ನ ಸಂಭಾಷಣೆ ಮೂಲಕ ಅಭಿಮಾನಿಗಳೊಂದಿಗೆ ಶೇರ್‌ ಮಾಡಿಕೊಂಡಿದ್ದಾರೆ.

ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಹೊಸ ಬ್ಯುಸಿನೆಸ್‌ ಶುರು ಮಾಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಮಾಹಿತಿ ಹಂಚಿಕೊಂಡಿದ್ದಾರೆ. ರಶ್ಮಿಕಾ, ಅವರ ತಾಯಿ ಸುಮನ್‌ ಮಂದಣ್ಣ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ, ನಾನು ತುಂಬಾ ಮುಖ್ಯವಾದ ಶೂಟಿಂಗ್‌ಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ಅಮ್ಮ ನೀವು ಹೇಳಿದ ಬ್ಯುಸಿನೆಸ್‌ ನಾನು ಆರಂಭಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಸುಮನ್‌ ಅವರು ಮಗಳ ಹೊಸ ಕಾರ್ಯಕ್ಕೆ ಶುಭಾಶಯ ಕೋರಿದ್ದಾರೆ.

ಹೊಸ ಬ್ಯುಸಿನೆಸ್‌ ಯಾವುದು?
ನಟಿ ರಶ್ಮಿಕಾ ಡಿಯರ್ ಡೈರಿ ಅನ್ನೋ ಸುಂಗಧ ದ್ರವ್ಯದ ಬ್ರ್ಯಾಂಡ್ ಶುರು ಮಾಡಿದ್ದಾರೆ. ಸುಗಂಧ ದ್ರವ್ಯ ಅನ್ನೋದು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಒಂದು ರೀತಿ ನಮ್ಮ ನೆನಪುಗಳನ್ನ ಹೇಗೆ ನಮ್ಮ ಮನದಲ್ಲಿ ಹೊತ್ತು ಸಾಗುತ್ತೇವೋ ಹಾಗೆ ಪರ್ಫ್ಯೂಮ್ ಕೂಡ ಚಿಕ್ಕ ಬಾಟಲ್‌ ಅಲ್ಲಿ ನಮ್ಮ ಜೊತೆಗೇನೆ ಇರುತ್ತದೆ. ಇಂತಹ ಒಂದು ವಿಶೇಷ ಸುಗಂಧ ದ್ರವ್ಯದ ಉದ್ಯಮವನ್ನ ಆರಂಭಿಸಿದ್ದೇವೆ ಎಂದು ಸೋಷಿಯಲ್ ಮೀಡಿಯಾದ ತಮ್ಮ ಪೇಜ್‌ ನಲ್ಲಿ ಹಂಚಿಕೊಂಡಿದ್ದಾರೆ.

coorg buzz
coorg buzz