ಪೊಲೀಸರ ಭರ್ಜರಿ ಕಾರ್ಯಚರಣೆ : ಜಾನುವರು ಕಳ್ಳರ‌‌ ಬಂಧನ

Cow thieves

Share this post :

ಜೂ.24 ರಂದು ನೋಕ್ಯ ಗ್ರಾಮದ ನಿವಾಸಿ ಆನಂದ ಎ.ಎಸ್ ಅವರ ಎಸ್ಟೇಟ್ನ ಕೊಟ್ಟಿಗೆಯಲ್ಲಿ ಕಟ್ಟಿದ್ದ 02 ಹಸುಗಳನ್ನು ಕಳ್ಳತನ ಮಾಡಿರುವ ಕುರಿತು ಹಾಗೂ ಭದ್ರಗೋಳ ಗ್ರಾಮದ ನಿವಾಸಿ ಪಿ.ಪಿ. ಮುತ್ತಣ್ಣ, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 01 ಎಮ್ಮೆಯನ್ನು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡರು

ಎರಡು ಪ್ರಕರಣಗಳ ಆರೋಪಿ ಪತ್ತೆಗಾಗಿ ಮಹೇಶ್ ಕುಮಾರ್.ಎಸ್, ಡಿಎಸ್ಪಿ, ವಿರಾಜಪೇಟೆ ಉಪವಿಭಾಗ, ಶಿವರಾಜ ಆರ್.ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ, ಪ್ರದೀಪ್ ಕುಮಾರ್.ಬಿ.ಕೆ. ಪಿಎಸ್ಐ, ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಜು.6 ರಂದು ಕೇರಳ ರಾಜ್ಯ ಮತ್ತು ಕಾನೂರು ಪ್ರದೇಶದಲ್ಲಿ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ವಿರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮದ ಉಬೈದ್.ಕೆ.ಎಂ. (37), ಪೊನ್ನಂಪೇಟೆ ತಾಲೂಕಿನ ಸೀತಾ ಕಾಲೋನಿಯ ಗಜನ್ ಗಣಪತಿ (25), ಬೇಗೂರು ಗ್ರಾಮದ ಹನೀಫ ಸಿ.ಈ (36 ವರ್ಷ) ಹಾಗೂ ಕೇರಳ ರಾಜ್ಯದ ಮಾನಂದವಾಡಿಯ ಅಜನಸ್ (21) ಬಂಧಿತ ಆರೋಪಿಗಳು. ಬಂಧಿತರಿಂದ 7,000 ರೂ ನಗದು, ಕೃತ್ಯಕ್ಕೆ ಬಳಸಿದ್ದ ಮಹೀಂದ್ರ ಬೊಲೇರೊ ಪಿಕಪ್ ವಾಹನ, ಮಾರುತಿ ಓಮ್ಮಿ ವಾಹನ, ಟಾಟಾ ಇಂಟ್ರಾ ವಾಹನ, ಒಂದು ಚಾಕು ಮತ್ತು ಹಗ್ಗ, ಕೃತ್ಯಕ್ಕೆ ಉಪಯೋಗಿಸಿದ 3 ಮೊಬೈಲ್ ಪೋನುಗಳನ್ನು ವಶಕ್ಕೆ ಪಡೆಯಲಾಗಿದೆ.

coorg buzz
coorg buzz