ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯಗೆ ಬೀಳ್ಕೊಡುಗೆ

Share this post :

ಮಡಿಕೇರಿ : ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಸಹಾಯಕ ನಿರ್ದೇಶಕರಾಗಿ ಸುದೀರ್ಘ 7 ವರ್ಷ ಸೇವೆ ಸಲ್ಲಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ವರ್ಗಾವಣೆಗೊಂಡ ಪ್ರೀತಿ ಚಿಕ್ಕಮಾದಯ್ಯ ಅವರನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಮಡಿಕೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರು, ಸಿಬ್ಬಂದಿ, ಮಡಿಕೇರಿ, ಸೋಮವಾರಪೇಟೆಯ ಸಹಾಯಕ ನಿರ್ದೇಶಕರು, ಪೊನ್ನಂಪೇಟೆ ತಾಲೂಕಿನ ಸಿಬ್ಬಂದಿಗಳು, ಮಡಿಕೇರಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ಈ ಸಂದರ್ಭ ಹಾಜರಿದ್ದರು.

coorg buzz
coorg buzz