ಯೋಗ ಭಾರತಿ ಹಾಗೂ ಯೋಗ ಸಂಧ್ಯಾ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Share this post :

ಮಡಿಕೇರಿ : ಯೋಗ ಭಾರತಿ ಹಾಗೂ ಯೋಗ ಸಂಧ್ಯಾ ವತಿಯಿಂದ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ. ೧೧ರಂದು ನಡೆಯಲಿದೆ.
ಅಂದು ಬೆಳಗ್ಗೆ 6.30ರಿಂದ 8.30ರವರೆಗೆ ಮಡಿಕೇರಿಯ ಗೌಡ ಸಮಾಜ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸರಳ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸವನ್ನು ಯೋಗ ಗುರುಗಳು ಮಾಡಿಸಲಿದ್ದಾರೆ. ಈ ಬಾರಿ ʼಒನ್‌ ಅರ್ಥ್‌ ಒನ್‌ ಹೆಲ್ತ್‌ʼ(one earth, one health) ಧ್ಯೇಯದೊಂದಿಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಸ್ಥೆ ಪ್ರಮುಖರು ಕೋರಿದ್ದಾರೆ. ಯೋಗ ಭಾರತಿ ಹಾಗೂ ಯೋಗ ಸಂಧ್ಯಾ ಸದಸ್ಯರು ಹಳದಿ ಬಣ್ಣದ ಯೋಗ ಉಡುಗೆ ಧರಿಸಿ ಪಾಲ್ಗೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.

coorg buzz
coorg buzz