ಕೃತಕ ಕಾಲು ಜೋಡಣೆ ಯಶಸ್ವಿ – ಅಸಹಾಯಕನಿಗೆ ನೆರವಾದ ಮಾಧ್ಯಮ ಸ್ಪಂದನ ಟೀಂ..!

Share this post :

coorg buzz

ಗೋಣಿಕೊಪ್ಪ : ತಿತಿಮತಿ ಸಮೀಪದ ನೊಕ್ಯಾ ನಿವಾಸಿ ಪಿ.ಡಿ. ಸುಬ್ರಮಣಿ ಅವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಕೃತಕ ಕಾಲು ಅಳವಡಿಸಲಾಗಿದೆ. ಮನೆಯಿಂದ ಬೆಂಗಳೂರಿಗೆ ತೆರಳಲು ಅವರಿಗೆ ವಾಹನದ ಅಗತ್ಯತೆ ಪಾಲಿಬೆಟ್ಟ ಚೆಶೆರ್ ಹೋಮ್ ಪ್ರಾಂಶುಪಾಲರಾದ ಶಿವರಾಜ ಮಾಧ್ಯಮ ಸ್ಪಂದನ ಗಮನ ಸೆಳೆದಿದ್ದರು.
ಯುವ ಕಾಂಗ್ರೆಸ್ ಮಡಿಕೇರಿ ವಿಧಾನಸಭಾ ಅಧ್ಯಕ್ಷರಾದ ಅನೂಪ್ ಕುಮಾರ್ ಸುಂಟಿಕೊಪ್ಪ ಅವರು ವ್ಯವಸ್ಥೆ ಮಾಡಿದ ವಾಹನದಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು.
ಮಾಧ್ಯಮ ಸ್ಪಂದನ ತಂಡದ ಸದಸ್ಯ ಪುತ್ತಂ ಪದೀಪ್ ಬಾಲನ್, ಚೆಶೆರ್ ಹೋಮ್ ಪ್ರಾಂಶುಪಾಲರಾದ ಶಿವರಾಜ್ ಸಾಥ್ ನೀಡಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕೃತಕ ಕಾಲು ಜೋಡಿಸಲಾಗಿದೆ. ಬೆಂಗಳೂರಿಗೆ ತೆರಳಿದವರಿಗೆ ಊಟೋಪಚಾರ ಸೇರಿದಂತೆ ಇತರೆ ಖರ್ಚು ವೆಚ್ಚವನ್ನು ಮಡಿಕೇರಿ ನಗರಸಭೆ ಜೆಡಿಎಸ್ ಸದಸ್ಯ ಎಂ.ಎ. ಮುಸ್ತಫಾ ಆರ್ಥಿಕ ನೆರವು ಒದಗಿಸಿದರು.