ನದಿಯಲ್ಲಿ ಸ್ನಾನಕ್ಕೆ ತೆರಳಿದ ಯುವಕರಿಬ್ಬರು ನೀರುಪಾಲು

kaveri river

Share this post :

coorg buzz

ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ 8 ಜನ ಯುವಕರ ಪೈಕಿ ಇಬ್ಬರು ನೀರು ಪಾಲಾಗಿರುವ ಘಟನೆ ನಾಪೋಕ್ಲು ಸಮೀಪದ ಎಮ್ಮೆಮಾಡುವಿನ ಕೂರುಳಿಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಚೇರಂಬಾಣೆ ಮೂಲದ ಗಿರೀಶ್‌ (16) ಮತ್ತು ಅಯ್ಯಪ್ಪ (18) ಎಂಬಿಬ್ಬರು ಯುವಕರು ಕಾವೇರಿ ನದಿಯಲ್ಲಿ (kaveri river) ಈಜಲು ತೆರಳಿ ಜಲ ಸಮಾಧಿ ಆಗಿರುವ ನತದೃಷ್ಟ ರಾಗಿದ್ದಾರೆ.

ಇವರ ಪೈಕಿ ಓರ್ವನ ಮೃತದೇಹ ದೊರಕಿದೆ, ಇನ್ನೊರ್ವನ ಮೃತದೇಹದ ಶೋಧ ಕಾರ್ಯ ನಡೆಯುತ್ತಿದ್ದು, ಸ್ಥಳಕ್ಕೆ ನಾಪೋಕ್ಲು ಪಿ.ಎಸ್.ಐ ಮಂಜುನಾಥ್‌ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.