ಮಿಟ್ಟು ಚಂಗಪ್ಪ ಅಂತಿಮ ದರ್ಶನಕ್ಕೆ ಆಗಮಿಸಿದ ಸಚಿವರಾದ ಕೆ. ಜೆ. ಜಾರ್ಜ್, ಎನ್. ಎಸ್. ಬೋಸರಾಜ್

Mitoo Chengappa

Share this post :

ರಾಜಕಾರಣಿಯಾಗಿ, ಪ್ರವಾಸೋದ್ಯಮಿಯಾಗಿ, ಕೖಷಿಕರಾಗಿ, ಕಾಫಿ ಉದ್ಯಮಿಯಾಗಿ ಗಮನ ಸೆಳೆದಿದ್ದ ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ (83) ಅವರು ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು. ಮಿಟ್ಟು ಚಂಗಪ್ಪ ಅವರು ಐದು ದಶಕಗಳ ಕಾಲ ರಾಜಕೀಯದಲ್ಲಿ ಕಾಂಗ್ರೆಸ್ ನ ನಿಷ್ಟಾವಂತ ನಾಯಕರೆನಿಸಿದ್ದರು.

ನಿನ್ನೆ ನಿಧನರಾದ ಮಿಟ್ಟು ಚಂಗಪ್ಪ(Mitoo Chengappa) ಅಂತಿಮ ದರ್ಶನಕ್ಕೆ ಸಚಿವರಾದ ಕೆ. ಜೆ. ಜಾರ್ಜ್ ಹಾಗೂ ಎನ್. ಎಸ್. ಬೋಸರಾಜ್ ಹೆಲಿಕಾಪ್ಟರ್ ಮೂಲಕ ಮಡಿಕೇರಿಗೆ ಆಗಮಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಮಡಿಕೇರಿ ಗಾಂಧಿ ಮೈಧಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಮಿಟ್ಟು ಚಂಗಪ್ಪ ಅವರ ಪಾರ್ಥಿವ ಶರೀರ ಇರಿಸಲಾಗುತ್ತದೆ. ಶಾಸಕರಾದ ಎ. ಎಸ್. ಪೊನ್ನಣ್ಣ, ಡಾ. ಮಂಥರ್ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ನೂರಾರು ಜನರಿಂದ ಅಂತಿಮ ನಮನ ಸಲ್ಲಿಸಿದ್ದಾರೆ.

coorg buzz
coorg buzz