Power Cut: ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ‌?

electricity

66/11 ಕೆ.ವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ನೂತನ ಬ್ರೇಕರ್‍ಗಳ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ, ಜನವರಿ, 30 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಅತ್ತೂರು, ಕಾನೂರು, ಬಾಳೆಲೆ, ರಾಜಪುರ, ದೇವನೂರು, ಮಲ್ಲೂರು, ಕಿರುಗೂರು, ವಡ್ಡರಮಾಡು, ಮಾಯಮುಡಿ, ಸುಳುಗೋಡು, ಧನುಗಾಲ, ಕಾರ್ಮಾಡು, ಕೊಟ್ಟಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ […]

ಸಂಪಾಜೆಯಲ್ಲಿ ಭೀಕರ ಅಪಘಾತ – ಆಟೋ ರಿಕ್ಷಾ ಚಾಲಕ ದುರ್ಮರಣ..! ಕಾರು ಚಾಲಕ ಎಸ್ಕೇಪ್…

ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಪಲ್ಟಿಯಾದ ಆಟೋ ರಿಕ್ಷಾ ಮೇಲೆ ಟಿಪ್ಪರ್‌ ವಾಹನ ಹರಿದ ಪರಿಣಾಮ ಆಟೋ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಸಂಪಾಜೆಯಲ್ಲಿ ಸಂಭವಿಸಿದೆ. ಇಲ್ಲಿನ ಪೆಟ್ರೋಲ್ ಬಂಕ್‌ ಬಳಿ ಆಟೋ ರಿಕ್ಷಾಗೆ ಹಿಂದಿನಿಂದ ಕಾರೊಂದು ವೇಗವಾಗಿ ಬಂದು ಡಿಕ್ಕಿಯಾಗಿದೆ. ಆ ಋಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಇದೇ ಸಂದರ್ಭ ಎದುರಿನಿಂದ ಬಂದ ಟಿಪ್ಪರ್‌ ವಾಹನ ಆಟೋ ರಿಕ್ಷಾ ಮೇಲೆ ಹರಿದಿದೆ. ರಸ್ತೆಗೆ ಎಸೆಯಲ್ಪಟ್ಟ ಚಾಲಕನ ಮೇಲೂ ಟಿಪ್ಪರ್‌ ಹರಿದಿದ್ದು, ಚಾಲಕ ಸುಂದರ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. […]

ವೀರಾಜಪೇಟೆ : ಕಾಡಾನೆ ದಾಳಿಗೆ ತೋಟ ಕಾವಲುಗಾರ ಬಲಿ..!

ವೀರಾಜಪೇಟೆ : ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರೆದಿದೆ. ಓಂಟಿ ಸಲಗ ದಾಳಿಗೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಗೌರಿಬೆಟ್ಟ ಎಸ್ಟೇಟ್‌ನಲ್ಲಿ ಸಂಭವಿಸಿದೆ. ತೋಟದಲ್ಲಿ ಕಾವಲುಗಾರನಾಗಿದ್ದ ಲತೀಫ್(65) ಮೃತ ದುರ್ದೈವಿ. ಇಂದು ಮಧ್ಯಾಹ್ನದ ವೇಳೆ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದು, ಲತೀಫ್‌ ಮೇಲೆ ದಾಳಿ ಮಾಡಿದೆ. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಲತೀಫ್‌ ಅವರನ್ನು ಸಹಕಾರ್ಮಿಕರು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಕಾಡು ಪ್ರಾಣಿ ಹಾವಳಿ ತಡೆಗಟ್ಟುವಲ್ಲಿ […]

ಶಾದಿ ಮಹಲ್ ವಿವಾದ: ವಿದ್ಯಾಸಂಸ್ಥೆಗೆ ದಾನ ನೀಡಿದ ಜಾಗ ಅನ್ಯ ಕಾರ್ಯಕ್ಕೆ ಬಳಸುವಂತಿಲ್ಲ: ಕೆ.ಜಿ. ಬೋಪಯ್ಯ

K. G. Bopaiah

ನಾಪೋಕ್ಲು: ಇಲ್ಲಿಯ ವಿದ್ಯಾಸಂಸ್ಥೆಗೆ ದಾನವಾಗಿ ನೀಡಿದಂತಹ ಜಾಗ ಯಥಾ ಸ್ಥಿತಿಯಲ್ಲಿರಬೇಕು .ಯಾವುದೇ ಅನ್ಯ ಕಾರ್ಯಕ್ಕೆ ಬಳಕೆ ಆಗಬಾರದು ಎಂದು ಮಾಜಿ ವಿಧಾನಸಭಾ ಅಧ್ಯಕ್ಷ, ಮಾಜಿ ಶಾಸಕ ಕೆ. ಜಿ. ಬೋಪಯ್ಯ ಒತ್ತಾಯಿಸಿದರು.ಇಲ್ಲಿಗೆ ಸಮೀಪದ ಚೆರಿಯಪಬುವಿಗೆ ಬುಧವಾರ ಭೇಟಿ ನೀಡಿದ ಬಿಜೆಪಿ ಪಕ್ಷದ ಪ್ರಮುಖರು ನೂತನವಾಗಿ ನಿರ್ಮಾಣ ಹಂತದಲ್ಲಿರುವ ಶಾದಿ ಮಹಲ್ ಕಟ್ಟಡದ ಸ್ಥಳ ಪರಿಶೀಲನೆ ಮಾಡಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಸರ್ಕಾರದಿಂದ ಒಟ್ಟು 47.2 ಎಕರೆ ಸ್ಥಳ ಇಲ್ಲಿಯ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ .ಇಲ್ಲಿ ಪ್ರೌಢಶಾಲೆ […]

ಕೊಡಗಿನ ನಟ-ನಟಿಯರು, ಗಾಯಕ, ಕಲಾವಿದರ ಸಮಾಗಮ

ಮಡಿಕೇರಿ : ಕೊಡಗು ಕಲಾವಿದರ ಬಳಗದ ವತಿಯಿಂದ ಚೆಯ್ಯಂಡಾಣೆಯ ಸಿನಿಮಾ ಕಲಾವಿದೆ ಚೆರುವಾಳಂಡ ಸುಜಲಾ ಹಾಗೂ ನಾಣಯ್ಯ ದಂಪತಿ ತೋಟದ ಮನೆಯಲ್ಲಿ ಜಿಲ್ಲೆಯ ಹಲವಷ್ಟು ಹಿರಿ-ಕಿರಿಯ ಸಿನಿಮಾ ಕಲಾವಿದರುಗಳು, ಬರಹಗಾರರು, ನಿರ್ದೇಶಕರು, ಗಾಯಕರು, ಛಾಯಾಚಿತ್ರ ಕಲಾವಿದರುಗಳು ಸಂತಸ ಸಮ್ಮಿಲನದಲ್ಲಿ ಭಾಗಿಗಳಾದರು. ದಶಕಗಳ ಹಿಂದೆ ಆರಂಭಗೊಂಡ ನೋಂದಾಯಿತ ಕಲಾವಿದರ ಸಂಘವೂ ಕಾರ್ಯಚಟುವಟಿಕೆಗಳಿಲ್ಲದೆ ನಿಷ್ಕ್ರಿಯವಾಗಿತ್ತು. ನಟ ನೆರವಂಡ ಉಮೇಶ್ ಹಾಗೂ ತಂಡದವರ ಸಂಚಾಲಕತ್ವದಲ್ಲಿ ವರ್ಷದಿಂದೀಚೆಗೆ ಸಂಘ ಮರುಜೀವ ಪಡೆದುಕೊಂಡಿದೆ. ರಾಜ್ಯದ ಹಲವೆಡೆಗಳಿಂದ ಕಲಾವಿದರುಗಳು ಆಗಮಿಸಿದ್ದು, ಮೈಸೂರಿನಲ್ಲಿ ನೆಲೆಸಿರುವ ಸಂಗೀತಗಾರ, ಹಾರ್ಮೋನಿಯಂ […]