ಗೌಡ ಸಮಾಜದ ಕಾರ್ಯಗಳಿಗೆ ಸಂಪೂರ್ಣ ಸಹಕಾರ – ಶಾಸಕ ಎ.ಎಸ್.‌ ಪೊನ್ನಣ್ಣ ಭರವಸೆ

Share this post :

ವರದಿ : ರಜಿತ ಕಾರ್ಯಪ್ಪ

ವೀರಾಜಪೇಟೆ : ವೀರಾಜಪೇಟೆ ಗೌಡ ಸಮಾಜದ ಅಭಿವೃದ್ದಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭರವಸೆ ನೀಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟ ಮಡಿಕೇರಿ, ಹಾಗೂ ಕೊಡಗಿನ ಎಲ್ಲಾ ಗೌಡ ಸಮಾಜಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ವಿರಾಜಪೇಟೆಯ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರಿಗೆ ಕೊಡಗು ಗೌಡ ಸಮಾಜಕ್ಕೆ ಮದೆನಾಡಿನಲ್ಲಿ ಸರಕಾರದ ವತಿಯಿಂದ ಆರು ಎಕರೆ ಜಾಗವನ್ನು ಮಂಜೂರು ಮಾಡಿಸಿಕೊಟ್ಟದ್ದಕ್ಕೆ ಕೃತಜ್ಞತಾಪೂರ್ವಕವಾಗಿ ಏರ್ಪಡಿಸಲಾದ ಅಭಿನಂದನೆ ಮತ್ತು ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮದಲ್ಲಿ ಈ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಕೊಡಗು ಗೌಡ ಸಮಾಜಕ್ಕೆ ಸರಕಾರಿ ಜಮೀನನ್ನು ಮಂಜೂರು ಮಾಡಿಸಿಕೊಟ್ಟಿರುವುದು ಇಲ್ಲಿಯ ಶೈಕ್ಷಣಿಕ, ಸಾಂಸ್ಕöÈತಿಕ ಹಾಗೂ ಇತರ ಚಟುವಟಿಕೆಗಳಿಗೆ ಪೂರಕವಾಗಲಿದೆ ಎಂದರು.
ಹಲವು ಸಮಯದಿಂದ ಗೌಡ ಸಮುದಾಯದವರು ಈ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದು ತನ್ನ ಬಳಿಗೆ ಗೌಡ ಸಮುದಾಯದ ಮುಖಂಡರು ಆಗಮಿಸಿ ಇದನ್ನು ಮಂಜೂರು ಮಾಡಿಸಿಕೊಡಬೇಕೆಂದು ಬೇಡಿಕೊಂಡಿದ್ದರು. ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಉಂಟಾದ ಆಡಳಿತಾತ್ಮಾಕ ಸಮಸ್ಯೆಗಳು ಹಾಗೂ ಸರಕಾರದ ವತಿಯಿಂದ ಯಾವ ರೀತಿಯಲ್ಲಿ ಜಾಗ ಮಂಜೂರು ಮಾಡಿಸಿಕೊಳ್ಳಲಾಯಿತು. ಮತ್ತು ಗೌಡ ಸಮುದಾಯದ ಪ್ರಮುಖರು ಇದರ ಹಿಂದೆ ಎಷ್ಟು ಶ್ರಮ ಪಟ್ಟಿದ್ದರು ಎನ್ನುವ ಎಲ್ಲ ವಿಚಾರಗಳನ್ನು ಉಂಟಾದ ತಾಂತ್ರಿಕ ಸಮಸ್ಯೆಗಳನ್ನು ಸಮುದಾಯದ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟು ಮಾತನಾಡಿದ ಶಾಸಕರು, ಜಾಗ ಮಂಜೂರಾತಿ ಮಾಡಿಕೊಟ್ಟ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಇದೇ ಸಂದರ್ಭದಲ್ಲಿ ಶಾಸಕರು ಸ್ಮರಿಸಿದರು.
ಮುಂದುವರೆದು ಮಾತನಾಡಿದ ಶಾಸಕರು ಮುಂದೆ ಸಮಾಜದ ಎಲ್ಲಾ ಕಾರ್ಯ ಚಟುವಟಿಕೆಗಳು ನಾಡಿನ ಏಳಿಗೆಗೆ ಹಾಗೂ ಸಮಾಜದ ಸಂಸ್ಕöÈತಿ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದು ಕಿವಿಮಾತು ಹೇಳಿದರು.
ಕ್ಷೇತ್ರದ ಅಭಿವೃದ್ದಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರಲ್ಲದೆ ಪೂರ್ವಜರು ದಾನದ ರೂಪದಲ್ಲಿ ನೀಡಿದ ಸ್ಥಳದಲ್ಲಿ ಭವ್ಯವಾದ ನೂತನ ಕಟ್ಟಡ ನಿರ್ಮಾಣವಾಗಲಿ, ಇಲ್ಲಿ ಎಲ್ಲರ ಬೇಡಿಕೆಗಳನ್ನು ಪರಿಗಣನೆಗೆ ತೆಗೆದುಕೊಂಡು ಜಾತಿ ಮತ, ಭೇಧ ಭಾವ ಮಾಡದೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಎಲ್ಲರ ಭಾವನೆಗಳಿಗೆ ಬೆಲೆ ಕೊಟ್ಟು ಕೆಲಸ ಮಾಡುವುದಾಗಿ ಹೇಳಿದರು. ನಾವೆಲ್ಲರೂ ತಾಯಿ ಕಾವೇರಿ ಮಾತೆಯ ಭಕ್ತರು. ಇಲ್ಲಿನ ಸಂಸ್ಕೃತಿಯ ಪಾಲನೆ ಆಗಬೇಕು. ಅದನ್ನು ಉಳಿಸಬೇಕು. ಹಾಗೆಯೇ ಯಾವ ವಿಧಾನ ಸಭಾ ಕ್ಷೇತ್ರಕ್ಕೂ ನೀಡದ ಅನುದಾನ ನಮ್ಮ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ದೊರಕಿದೆ. ಅಭಿವ್ರದ್ದಿ ಒಂದೆ ನಮ್ಮ ಮೂಲಮಂತ್ರ ಎಂದರು.
ಕೊಡಗು ಜಿಲ್ಲೆಯ ಕೃಷಿಕರಲ್ಲಿ ನೂರಾರು ವರ್ಷಗಳಲ್ಲಿ ಕಾಡಿದ್ದ ಜಮ್ಮಾಬಾಣೆ ಸಮಸ್ಯೆಯನ್ನು ಒಂದು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನಿಸಲಾಗಿದೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರನ್ನು ಸದಾ ಸ್ಮರಿಸಬೇಕು. ನಿರಂತರ ಪ್ರಯತ್ನ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಈ ಸಂಬಂಧ ಹಲವು ಬಾರಿ ಸಭೆ ನಡೆಸಿ ಸದನಕ್ಕೆ ಮಂಡಿಸುವ ಮೂಲಕ ಜಮ್ಮಾ ಬಾಣೆ ಸಮಸ್ಯೆಯನ್ನು ಕಾಯ್ದೆರೂಪಕ್ಕೆ ಜಾರಿಗೊಳಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದು ಶಾಸಕರು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಮಾತನಾಡಿ ಇಲ್ಲಿ ಜಾತಿ ಮತ ಮುಖ್ಯವಲ್ಲ. ಅಭಿವೃದ್ದಿ ಮುಖ್ಯ. ಶಾಸಕರು ಸದಾ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಾ ಬರುತ್ತಿದ್ದಾರೆ ಎಂದರು.
ಕೊಡಗು ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೊಡಗು ಜಿಲ್ಲೆಯ ಸಂಸ್ಕೃತಿ, ಪರಂಪರೆಗೆ ಗೌಡ ಜನಾಂಗದ ಕೊಡುಗೆ ಮಹತ್ವದ್ದು. ಸಾಮರಸ್ಯದ ಜೀವನ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಪರಸ್ಪರ ವೈರುಧ್ಯಗಳನ್ನು ಬದಿಗೊತ್ತಿ ಬಾಂಧವ್ಯ ವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಗೌಡ ಜನಂಗದ ಏಳಿಗೆಗಾಗಿ ಸರಕಾರದಿಂದ ಜಾಗ ಮಂಜೂರು ಮಾಡಿಕೊಟ್ಟ ಶಾಸಕರ ಕಾರ್ಯ ಶ್ಲಾಘನೀಯ. ಇದೇ ರೀತಿ ಅರೆಭಾಷಿಕರ ಐನ್‌ಮನೆಗಳಿಗೂ ವಿಶೇಷವಾದ ಪ್ರಾತಿನಿದ್ಯ ನೀಡಬೇಕು. ಇಲ್ಲಿನ ಆಚಾರ ವಿಚಾರಗಳು ಅನಾವರಣಗೊಳ್ಳಬೇಕು ಎಂದರು.
ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಂಗಾರು ನಾಣಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲೂ ಶಾಸಕರೊಂದಿಗೆ ನಾವಿದ್ದೇವೆ. ನಮ್ಮ ಜನಾಂಗದ ಏಳಿಗೆ ಹಾಗೂ ಸಮಾಜ ಮತ್ತು ಐನ್ ಮನೆಗಳ ಅಭಿವ್ರದ್ದಿಗೆ ಶಾಸಕರು ಸಹಕಾರ ನೀಡಬೇಕು ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಡಾ. ರಾಜೇಶ್ ತೇನನ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆ ಗೌಡ ಜನಾಂಗಕ್ಕೆ, ಸಾಂಸ್ಕöÈತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದದಲ್ಲಿ ೬ ಏಕರೆ ಜಾಗ ಮಂಜೂರು ಮಾಡಿಕೊಟ್ಟು ಗೌಡ ಜನಂಗದ ಕಣ್ಮಣಿಯಾಗಿದ್ದಾರೆ. ಒಬ್ಬ ವ್ಯಕ್ತಿ ಯಾವುದಾದರೂ ಒಂದು ಕೆಲಸ ಮಾಡಬೇಕಾದರೆ ಅದಕ್ಕೆ ಸಂಕಲ್ಪ ಬೇಕು. ಸಂಕಲ್ಪ ಮಾಡಿಕೊಂಡರೆ ಅದು ಖಮಡಿತ ಆಗುತ್ತದೆ, ಅದೇ ರೀತಿ ಶಾಸಕ ಪೊನ್ನಣ್ಣ ಸಂಕಲ್ಪ ಮಾಡಿದರ ಫಲವಾಗಿ ಈ ಜಾಗ ಮಂಜೂರಾಗಿದೆ. ಅದೇ ರೀತಿ ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕೊಡಗಿನ ಜಮ್ಮಾ ಭೂಮಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿ ಕಾಯ್ದೆ ರೂಪಕ್ಕೆ ಜಾರಿಗೊಳಿಸುವಲ್ಲಿ ಶ್ರಮಿಸಿದ್ದಾರೆ. ಹೀಗೆ ಹಲವು ರೀತಿಯಲ್ಲಿ ಗೌಡ ಜನಾಂಗದ ಏಳಿಗೆಗಾಗಿ, ಕೇತ್ರದ ಅಭಿವೃದ್ದಿಗಾಗಿ ಶಾಸಕರು ಶ್ರಮಿಸುತ್ತಾ ಬಂದಿದ್ದಾರೆ ಎಂದರು.
ಮನೋಜ್ ಅಂಡ್ ಅಸೋಸಿಯೇಟ್ಸ್ ಮಾಲೀಕ, ವಾಸ್ತುಶಿಲ್ಪಿ ಮುಕ್ಕಾಟಿ ಮನೋಜ್ ಮಾತನಾಡಿ,
ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ವಾಸು ಗಣಪತಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ವಿರಾಜಪೇಟೆ ಗೌಡ ಸಮಾಜದ ಅಭಿವೃದ್ದಿಗೆ ಅನುದಾನ ಒದಗಿಸುವಂತೆ ಹಾಗೂ ರಸ್ತೆ ಅಭಿವೃದ್ದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಶಾಸಕರಿಗೆ ನೀಡಿದರು.
ವೇದಿಕೆಯಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಖಜಾಂಚಿ ಅಂಬೆಕಲ್ ನವೀನ್, ಕಾರ್ಯದರ್ಶಿ ಪೇರಿಯನ ಉದಯ ಸೇರಿದಂತೆ ಇತರರು ಇದ್ದರು.
ಸನ್ಮಾನ…
ಇದೇ ಸಂದರ್ಭ ಶಾಸಕ ಪೊನ್ನಣ್ಣ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಕೊಡಗು ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಮನೋಜ್ ಅಂಡ್ ಅಸೋಸಿಯೇಟ್ಸ್ ಮಾಲೀಕ, ವಾಸ್ತುಶಿಲ್ಪಿ ಮುಕ್ಕಾಟಿ ಮನೋಜ್, ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಂಗಾರು ನಾಣಯ್ಯ ಇವರುಗಳನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪೋಸ್ಟರ್ ಬಿಡುಗಡೆ
ಇದೇ ಸಂದರ್ಭ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏಪ್ರಿಲ್ ೨೭-ಮೇ ೧೭ ರವರೆಗೆ ನಡೆಯುವ ಕ್ರಿಡಾಕೂಟದ ಕುಟುಂಬ-೨೦೨೬ ಪೋಸ್ಟರ್‌ನ್ನು ಶಾಸಕರು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಬಿಡುಗಡೆಗೊಳಿಸಿದರು. ಈ ಸಂದರ್ಭ ಗೌಡ ಯುವ ವೇದಿಕೆಯ ಪದಾಧಿಕಾರಿಗಳು ಕೈ ಜೋಡಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜದ ಒಕ್ಕೂಟದ ಸರ್ವ ಸದಸ್ಯರು ಹಾಗೂ ಗೌಡ ಸಮುದಾಯದ ಅಧ್ಯಕ್ಷರುಗಳು, ಸದಸ್ಯರುಗಳು, ಪದಾಧಿಕಾರಿಗಳು ಹಾಗೂ ಪ್ರಮುಖರು ಒಕ್ಕೂಟದ ಸದಸ್ಯ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕೂಟದ ಸಹ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಸ್ವಾಗತಿಸಿದರೆ, ತೆಕ್ಕಡೆ ಆಶಾ ಪ್ರಾರ್ಥಿಸಿ, ಮುರ್ನಾಡು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಲ್ಲುಮುಟ್ಲು ಜಸ್ಮಿ ನಿರೂಪಿಸಿ ವಿರಾಜಪೇಟೆ ಗೌಡ ಸಮಾಜದ ಕಾರ್ಯದರ್ಶಿ ಮಂಞAಡ್ರ ರೇಖಾ ಉಲ್ಲಾಸ್ ವಂದಿಸಿದರು.

coorg buzz
coorg buzz