Karnataka Budget 2026: ಸಿಎಂ ಸಿದ್ದರಾಮಯ್ಯ ಮಂಡಿಸಿದ 2026-27ರ ಬಜೆಟ್​ ಹೈಲೈಟ್ಸ್​

Karnataka Budget 2026

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 06) ಕರ್ನಾಟಕದ 2026-27ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಒಟ್ಟು 4 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್​​​ನಲ್ಲಿ ವಲಯವಾರು ವಿಂಗಡಣೆ ಮಾಡಿದ್ದಾರೆ. ಹಾಗಾದ್ರೆ, ಈ ಬಾರಿಯ ಬಜೆಟ್​​ನಲ್ಲಿ ಪ್ರಮುಖ ಮುಖ್ಯಾಂಶ ಇಲ್ಲಿದೆ. * ವಿವಿಗಳಲ್ಲಿ ಜಾತಿ ದೌರ್ಜನ್ಯ ತಡೆಗೆ ‘ರೋಹಿತ್ ವೇಮುಲ’ ಕಾಯ್ದೆ ಜಾರಿ. * ಕುವೆಂಪು ವಿವಿಯಲ್ಲಿ U.R.ಅನಂತಮೂರ್ತಿ ಅಧ್ಯಯನಪೀಠ ಸ್ಥಾಪನೆ. * ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡ ಎಂದು ಮರುನಾಮಕರಣ. * ಕರ್ನಾಟಕದ ಸಮಗ್ರ ಅಭಿವೃದ್ಧಿಗೆ […]

ಕೊಡಗು ಜಿಲ್ಲಾ ಪೊಲೀಸ್‌ ಶ್ವಾನ ದಳಕ್ಕೆ ಬೆಲ್ಜಿಯನ್‌ ಮಾಲಿನೋಯಿಸ್‌ ಉಡುಗೊರೆ

ಮಡಿಕೇರಿ : ಕೊಡಗು ಜಿಲ್ಲಾ ಪೊಲೀಸ್ ಶ್ವಾನ ದಳಕ್ಕೆ ಶ್ವಾನವೊಂದನ್ನು ಉಡುಗೊರೆಯಾಗಿ ವ್ಯಕ್ತಿಯೊಬ್ಬರು ನೀಡಿದ್ದಾರೆ. ಮಡಿಕೇರಿ ತಾಲೂಕಿನ ಪಾಲೂರು ನಿವಾಸಿ ಎ.ಯು. ಪೂವಯ್ಯ ಎಂಬವರು ಬೆಲ್ಜಿಯನ್‌ ಮಾಲಿನೋಯಿಸ್‌ ಎಂಬ ಶ್ವಾನವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಎಸ್ಪಿ ಬಿಂದು ಮಣಿ ಅವರ ಮೂಲಕ ಶ್ವಾನ ದಳಕ್ಕೆ ಹಸ್ತಾಂತರಿಸಿದರು. ಘಟಕದಲ್ಲಿ ಅಪರಾಧ ಪತ್ತೆ, ಸ್ಫೋಟಕ, ಮಾದಕ ದ್ರವ್ಯ ಪತ್ತೆಯ ಸಮಯದಲ್ಲಿ ತರಬೇತು ಹೊಂದಿದ ಶ್ವಾನಗಳನ್ನು ಬಳಸಲಾಗುತ್ತಿದೆ. ಪೂವಯ್ಯ ಅವರ ಕೊಡುಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ […]

ಗೌಡ ಸಮಾಜದ ಕಾರ್ಯಗಳಿಗೆ ಸಂಪೂರ್ಣ ಸಹಕಾರ – ಶಾಸಕ ಎ.ಎಸ್.‌ ಪೊನ್ನಣ್ಣ ಭರವಸೆ

ವರದಿ : ರಜಿತ ಕಾರ್ಯಪ್ಪ ವೀರಾಜಪೇಟೆ : ವೀರಾಜಪೇಟೆ ಗೌಡ ಸಮಾಜದ ಅಭಿವೃದ್ದಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭರವಸೆ ನೀಡಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟ ಮಡಿಕೇರಿ, ಹಾಗೂ ಕೊಡಗಿನ ಎಲ್ಲಾ ಗೌಡ ಸಮಾಜಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ವಿರಾಜಪೇಟೆಯ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ […]

ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿರಾಜಪೇಟೆ: ವಿರಾಜಪೇಟೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನವನ್ನು ಅಧ್ಯಯನ ಹಬ್ಬ ಎನ್ನುವ ದೃಷ್ಟಿಕೋನದಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ನಿಶಾ ರವರು ಮಾತನಾಡಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಇಂದು ವಿದ್ಯಾರ್ಥಿಗಳು […]

ಕಡಗದಾಳುವಿನಲ್ಲಿ ವೈಭವದಿಂದ ಜರುಗಿದ ʼಹಿಂದು ಸಂಗಮʼ – ಹಿಂದುಗಳ ಮತಾಂತರ ತಡೆಯಲು ಶ್ರಮಿಸಬೇಕು : ಶಿವಪ್ರಸಾದ್‌ ಉಜಿರೆ

ಮಡಿಕೇರಿ : ಕಡಗದಾಳು ಮಂಡಲ ವ್ಯಾಪ್ತಿಯ ಹಿಂದು ಸಂಗಮ ಕಾರ್ಯಕ್ರಮ ಭಾನುವಾರ ವೈಭವದಿಂದ ಜರುಗಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಹಿಂದುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ವರ್ಣರಂಜಿತ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ರಚಿಸಲಾಗಿದ್ದ ಶ್ರೀ ವಿನಾಯಕ ವಸತಿ ಕತ್ತಲೆಕಾಡು-ಜೇನುಕೊಲ್ಲಿ, ಶೌರ್ಯ ವಸತಿ ಕಡಗದಾಳು, ಶಿವಾಜಿ ವಸತಿ ನೀರುಕೊಲ್ಲಿ, ಪರಶುರಾಮ ವಸತಿ ಬೋಯಿಕೇರಿ ಸದಸ್ಯರುಗಳು ತಮ್ಮ ಗ್ರಾಮಗಳಿಂದ ಮೆರವಣಿಗೆ ಮೂಲಕ ಕಡಗದಾಳು ಶಾಲೆ ಆವರಣಕ್ಕೆ ಆಗಮಿಸಿದರು. ಬಳಿಕ ಸ್ಥಳೀಯ ಶಾಲೆ ಆವರಣದಿಂದ ಸಾಮೂಹಿಕ […]

ಸೆಂಟ್ ಆನ್ಸ್ ಪದವಿ ಕಾಲೇಜಿನ NSS ಘಟಕದ ವಾರ್ಷಿಕ ವಿಶೇಷ ಶಿಬಿರ ಮಾರ್ಚ್ 4 ರಿಂದ ಆರಂಭ

ವಿರಾಜಪೇಟೆ : ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಮಾರ್ಚ್ 4 ರಿಂದ ಮಾರ್ಚ್ 10 ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ತೋಡು ನಾಂಗಲದಲ್ಲಿ ಜರುಗಲಿದೆ. ಮಾರ್ಚ್ 4 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು ಉದ್ಘಾಟನೆಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ರವರು ನೆರವೇರಿಸಲಿದ್ದಾರೆ.ಬಿಟ್ಟಂಗಾಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಮೂಕಚಂಡ […]

ಮಾರ್ಚ್‌ 03ಕ್ಕೆ ಭಗಂಡೇಶ್ವರ ದೇವಾಲಯದಲ್ಲಿ ದೇವರ ದರ್ಶನವಿರಲ್ಲ..! ಕಾರಣ ಏನು ಗೊತ್ತಾ..?

ಮಡಿಕೇರಿ : ಇದೇ ಮಾರ್ಚ್ 3 ರಂದು ಸಂಭವಿಸುವ ಫಾಲ್ಗುನ ಶುಕ್ಲ ಪೌರ್ಣಮಿ ಖಗ್ರಾಸ ಗ್ರಸ್ತೋದಯ ಚಂದ್ರಗ್ರಹಣ ಪ್ರಯುಕ್ತ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 7.15 ರವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಇರುವುದಿಲ್ಲ.  ಈ ದಿನದಂದು ಯಾವುದೇ ಪಿಂಡಪ್ರಧಾನ, ಪಿತೃ ಕಾರ್ಯಗಳು, ಹುಣ್ಣಿಮೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಭಕ್ತಾದಿಗಳಿಗೆ ಅನ್ನದಾಸೋಹ ಇರುವುದಿಲ್ಲ. ಅಂತೆಯೇ ಶ್ರೀ ತಲಕಾವೇರಿ ದೇವಾಲಯದಲ್ಲಿ ಬೆಳಗ್ಗೆ 9 ರಿಂದ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಇರುವುದಿಲ್ಲ […]

ಮಡಿಕೇರಿ ಜೂನಿಯರ್‌ ಕಾಲೇಜು ಆವರಣದಲ್ಲಿ ಸಡಗರದಿಂದ ಜರುಗಿದ ಮಕ್ಕಳ ಸಂತೆ

ಮಡಿಕೇರಿ : ಎತ್ತ ನೋಡಿದರೂ ವಿವಿಧ ಬಗೆಯ ಸೊಪ್ಪು, ತರಕಾರಿ, ಆಹಾರ ಧಾನ್ಯಗಳು, ಹಣ್ಣು ಹಂಪಲುಗಳು, ಪಾನಿಪೂರಿ, ಮಸಾಲೆ ಪುರಿ, ಚುರುಮುರಿ ಹೀಗೆ ಜೊತೆಗೆ ಚಿಕನ್ ಬಿರಿಯಾನಿಯು ಸಹ ಇದ್ದುದ್ದು ಬುಧವಾರ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯಗಳು. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ, ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಬುಧವಾರ ನಡೆದ ಮಕ್ಕಳ ಸಂತೆಯಲ್ಲಿ ಕೇಳಿ ಬಂದವು. 70 ಕ್ಕೂ ಹೆಚ್ಚು […]

ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ – ಜಿಲ್ಲಾಧಿಕಾರಿ ಹೇಳಿದ್ದೇನು..?

ಮಡಿಕೇರಿ : ಇದೇ ತಿಂಗಳ 28 ರಿಂದ ಮಾರ್ಚ್ 17 ರವರೆಗೆ ಮಡಿಕೇರಿ, ನಾಪೋಕ್ಲು, ಪೊನ್ನಂಪೇಟೆ, ಸೋಮವಾರಪೇಟೆ, ವಿರಾಜಪೇಟೆ, ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ನೆಲ್ಲಿಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು, ಮೂರ್ನಾಡು ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ […]

ಕಡಗದಾಳುವಿನಲ್ಲಿ ಬೃಹತ್‌ ಹಿಂದು ಸಂಗಮ ಮಾರ್ಚ್‌ 01ಕ್ಕೆ

ಮಡಿಕೇರಿ : ಕಡಗದಾಳು ಮಂಡಲ ವತಿಯಿಂದ ಬೃಹತ್ ಹಿಂದು ಸಂಗಮ ಕಾರ್ಯಕ್ರಮ ಮಾರ್ಚ್‌ 01ರಂದು ಕಡಗದಾಳುವಿನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10‌-30 ಗಂಟೆಗೆ ಕಡಗದಾಳು ಶಾಲೆ ಆವರಣ ಬಳಿಯಿಂದ ವೈಭವೋಪೇತ ಶೋಭಾಯಾತ್ರೆ ಆರಂಭವಾಗಲಿದೆ. ಕತ್ತಲೆಕಾಡು, ಕ್ಲೋಸ್‌ಬರ್ನ್‌, ಕಡಗದಾಳು, ನೀರುಕೊಲ್ಲಿ, ಇಬ್ನಿವಳವಾಡಿ, ಬೋಯಿಕೇರಿ ವ್ಯಾಪ್ತಿಯ ಹಿಂದುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಾಮದ ಮುಖ್ಯ ಬೀದಿಯಲ್ಲಿ ವಿವಿಧ ಕಲಾ ತಂಡಗಳು, ಹಿಂದು ಧರ್ಮ, ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರದರ್ಶನದೊಂದಿಗೆ ಮೆರವಣಿಗೆ ಸಾಗಲಿದೆ. ಬಳಿಕ ಶಾಲಾ ಮೈದಾನದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ […]