ವಿರಾಜಪೇಟೆ ಮಲೆ ತಿರಿಕೆ ಬೆಟ್ಟದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸುವಲ್ಲಿ ಯಶಸ್ವಿ

ವಿರಾಜಪೇಟೆ: ನಗರದ ಮಲೆ ತಿರಿಕೆ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ 2:30 ವೇಳೆಯಲ್ಲಿ ವ್ಯೂ ಪಾಯಿಂಟ್ ಸಮೀಪ ರಸ್ತೆ ಬದಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ನಿವಾಸಿಗಳು ವಿರಾಜಪೇಟೆ (Virajpet) ಪೊಲೀಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸ್ ಇಲಾಖೆ ಅಗ್ನಿಶಾಮಕ ದಳಕ್ಕೆ ಈ ಕುರಿತ ಮಾಹಿತಿಯನ್ನು ರವಾನಿಸಿದ್ದ, ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಅಗ್ನಿಶಾಮಕದಳ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪುರಸಭೆಯ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದರು. ಈ ಬೆಂಕಿಯ ಕೆನ್ನಾಲಿಗೆ […]
ಎಚ್ಚರಿಕೆ: ಉಚಿತ ಲ್ಯಾಪ್ಟಾಪ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ವಂಚನೆ!

ಆತ್ಮೀಯ ಪೋಷಕರೇ, ಕೆಲವು ದಿನಗಳಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ತೇರ್ಗಡೆಗೊಂಡ ವಿದ್ಯಾರ್ಥಿಗಳ ಪೋಷಕರಿಗೆ 8867388278 (ಟ್ರೂ ಕಾಲರ್’ನಲ್ಲಿ ದೀಪ ಗೌಡ ಎಂಬ ಹೆಸರು ಬರುತ್ತಿದೆ) ಎಂಬ ಸಂಖ್ಯೆಯಿಂದ ಕರೆಗಳು ಬರುತ್ತಿದ್ದು, ತಮ್ಮ ಮಗ/ಮಗಳಿಗೆ ಎಸ್ ಎಸ್ ಎಲ್ ಸಿ/ ಪಿ ಯು ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿರುವುದರಿಂದ ಸಾಂಸಂಗ್ ಕಂಪನಿಯ ವತಿಯಿಂದ ಸುಮಾರು ರೂ ಐವತ್ತು ಸಾವಿರ ಬೆಲೆ ಬಾಳುವ ಲ್ಯಾಪ್ಟಾಪ್ (laptop) ಉಚಿತವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಪೋಷಕರು […]
ಏಷ್ಯಾದ ದೊಡ್ಡ ಸಾಹಿತ್ಯೋತ್ಸವಕ್ಕೆ ಡಾ.ರೇವತಿ ಪೂವಯ್ಯ ಆಯ್ಕೆ

ಕೇಂದ್ರ ಸಾಂಸ್ಕೃತಿಕ ಮಂತ್ರಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಮಾರ್ಚ್ 7 ರಿಂದ 12ರವರೆಗೆ ನವದೆಹಲಿಯಲ್ಲಿ ಆಯೋಜಿಸಿರುವ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವಕ್ಕೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ (Revathi Poovaiah) ಆಯ್ಕೆಯಾಗಿದ್ದಾರೆ. ಏಷ್ಯಾದ ಬೃಹತ್ ಸಾಹಿತ್ಯೋತ್ಸವ ಖ್ಯಾತಿಯ ಈ ಕಾರ್ಯಕ್ರಮದಲ್ಲಿ ಆಹ್ವಾನಿತ ಕೊಡವ ಭಾಷಾ ಕವಯಿತ್ರಿಯಾಗಿ ಕೊಡಗನ್ನು ಇವರು ಪ್ರತಿನಿಧಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ನಾನಾ ಸಾಂಸ್ಕೃತಿಕ ವಲಯಗಳ ಅನಾವರಣವಾಗುತ್ತದೆ. ಹಲವು ದಿಗ್ಗಜ ಹಿರಿಯ ಸಾಹಿತಿಗಳು […]
ಒಣಗಿಸಲು ಇಟ್ಟಿದ್ದ ಕಾಫಿ ಕಳವು: ಆರೋಪಿಗಳ ಬಂಧನ

ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಹಸಿ ಕಾಫಿಯನ್ನು (Coffee) ಕಳ್ಳತನ ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಮಾಲು ಹಾಗೂ ಕೃತ್ಯಕ್ಕೆ ಬಳಸಿದ ಮೂರು ವಾಹನಗಳ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿತಿಮತಿ ಗ್ರಾಮದ ಶಾಂತಿನಗರದ ಕೆ. ಬಿ. ಶಫೀಕ್ (26), ಟಿ.ಜೆ. ಥೋಮಸ್ (29) ನೊಕ್ಯ ಗ್ರಾಮದ ಎಂ.ಜಿ. ಅನೀಸ್ (24) ಹಾಗೂ ಪೊನ್ನಪ್ಪ ಸಂತೆಯ ಎಂ.ಬಿ. ಯಾಸಿನ್ (28) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 51 […]
ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಇನ್ನಿಲ್ಲ

ಮಾಜಿ ಜಿಲ್ಲಾ ಕಾಂಗ್ರೆಸ್ (Congress) ಅಧ್ಯಕ್ಷ ಕುಟ್ಟ ಗ್ರಾಮದ ನಿವಾಸಿ ಮುಕ್ಕಾಟೀರ ಶಿವು ಮಾದಪ್ಪ (49) ನಿಧನರಾಗಿದ್ದಾರೆ. ನೇರ ನುಡಿಯ ಒಬ್ಬ ನಾಯಕ, ಮಾಜಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಹಾಲಿ ಕೆಪಿಸಿಸಿ ಸದಸ್ಯರಾಗಿದ್ದ ಶಿವು ಮಾದಪ್ಪ (Shivu Madappa) ಒಬ್ಬ ಅತ್ಯುತ್ತಮ ಸಂಘಟಗಾರರಾಗಿ, ಯುವ ನಾಯಕರಾಗಿ ಗುರುತಿಸಿಕೊಂಡಿದ್ದರು. ಮುಕ್ಕಾಟಿರ ಶಿವು ಮಾದಪ್ಪ ಭಾನುವಾರ ರಾತ್ರಿ 11:00 ಸಮಯದಲ್ಲಿ ಮೈಸೂರು ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ಸಂಸ್ಕಾರ ಸೋಮವಾರ […]
ಮಡಿಕೇರಿಯಲ್ಲಿ ಗಮನ ಸೆಳೆದ ಪೊಲೀಸ್ ರನ್ ಮ್ಯಾರಾಥಾನ್

ಕರ್ನಾಟಕ ರಾಜ್ಯ ಪೊಲೀಸ್ (Police) ಇಲಾಖೆಯ ಫಿಟ್ನೆಸ್ ಫಾರ್ ಅಲ್ (Fitness for all) ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದಾದ್ಯಂತ ಇಂದು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಈ ಕಾಯಕ್ರಮದ ಭಾಗವಾಗಿ ಕೊಡಗು ಜಿಲ್ಲಾ ಪೊಲೀಸ್ ಘಟಕದ ಆಯೋಜನೆಯಲ್ಲಿ ಡ್ರಗ್ಸ್ ಮುಕ್ತ ಕೊಡಗು ಎನ್ನುವ ಪರಿಕಲ್ಪನೆಯೊಂದಿಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ಪೊಲೀಸ್ ರನ್ ಮ್ಯಾರಾಥಾನ್ (Police Run Marathon) ನಡೆಯಿತು. ವಿಕ್ರಮ್ ಜಾದೂಗಾರ್ ರವರಿಂದ ಮಾದಕ ದ್ರವ್ಯವನ್ನು […]
ಭಾಗ್ಯವತಿಗೆ ಉತ್ತಮ ಅಂಗನವಾಡಿ ಶಿಕ್ಷಕಿ ಪ್ರಶಸ್ತಿ

ರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಬಲ್ಲಮಾವಟಿ ವೃತ್ತದ ಹಳೆ ತಾಲೂಕು ಅಂಗನವಾಡಿ ಕೇಂದ್ರದ ಶಿಕ್ಷಕಿ ಭಾಗ್ಯವತಿಯವರಿಗೆ “ಉತ್ತಮ ಅಂಗನವಾಡಿ ಶಿಕ್ಷಕಿ” (Anganwadi Teacher) ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿ ಗೌರವಿಸಿದರು.
Women’s Day: ಸಮಾಜ ಸೇವಕಿ ಲೀಲಾ ಮೇದಪ್ಪಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿಯು ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಮಾಡಿರುವವರಿಗೆ ಕೊಡಮಾಡುತ್ತಿರುವ ರಾಜ್ಯ ಪ್ರಶಸ್ತಿಗೆ ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯೆ ಹಾಗೂ ಕೊಡಗು (Kodagu) ಜಿಲ್ಲಾ ಹಾಪ್ ಕಾಮ್ಸ್ ನ ನಿರ್ದೇಶಕಿ ಸುಂಟಿಕೊಪ್ಪದ ಚಟ್ರಂಡ ಲೀಲಾ ಮೇದಪ್ಪ (Leela Medappa) ಅವರು ಭಾಜನರಾಗಿದ್ದಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ಶಿಕಾರಿಪುರದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ ಆಯೋಜಿಸಿರುವ ತೋಟಗಾರಿಕೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ […]
ಬೀದಿ ಬದಿ ವ್ಯಾಪಾರಿಗಳೇ ಗಮನಿಸಿ…

ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಸಂಪಾಜೆಯಿಂದ ಕುಶಾಲನಗರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು ಅಲ್ಲಲ್ಲಿ ಅನಧಿಕೃತವಾಗಿ ಹಣ್ಣಿನ ಅಂಗಡಿಗಳನ್ನು ಮತ್ತು ಇತರೆ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಗ್ರಾಹಕರು ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ರಸ್ತೆಯಲ್ಲಿನ ವಾಹನ ನಿಲುಗಡೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆಯಿರುವುದರಿಂದ ಮಾರ್ಚ್, 15 ರೊಳಗೆ ಸಂಬಂಧಿಸಿದ ಬೀದಿ ಬದಿ ವ್ಯಾಪಾರಿಗಳು (Street vendor) ಅಂಗಡಿಗಳನ್ನು ತೆರವುಗೊಳಿಸಬೇಕು, ತಪ್ಪಿದ್ದಲ್ಲಿ ಮಾರ್ಚ್, 16 ರಿಂದ ಪೊಲೀಸ್ ಸಹಯೋಗದೊಂದಿಗೆ ಇಲಾಖೆಯ ವತಿಯಿಂದ […]
ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ಕಾಲರ್ಶಿಪ್, ಪ್ರತಿಭಾ ಪುರಸ್ಕಾರ ವಿತರಣೆ

ಸಂಯುಕ್ತ ಅರಬ್ ಸಂಸ್ಥಾನದ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಕೊಡಗಿನ ಹಳೆ ವಿದ್ಯಾರ್ಥಿಗಳ ಸಂಘದ ಅವರ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕೊಡಗಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಎಲ್ಲಾ ವರ್ಷವು ನೀಡಿ ಬರುವ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಕೊಡಗಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಫೆ.01 ರಂದು ಹೊದವಾಡದಲ್ಲಿರುವ ರಾಫಲ್ಸ್ […]