ಎಲ್ಲಾ ಕಡೆ AI ಹಾವಳಿ: ಪ್ರತಿಭಾವಂತರು ಸಿಗುವುದು ಬಲು ಕಷ್ಟ: ಲಿಂಕ್ಡ್‌ ಇನ್

LinkedIn report on AI

Share this post :

ಕಳೆದ ಎರಡು ವರ್ಷಗಳಲ್ಲಿ ಜನರೇಟಿವ್ ಎಐ ಎಂಬ ಒಂದು ಪದವು ಜನಪ್ರಿಯ ಪದದಿಂದ ಉದ್ಯಮಗಳ ಅಗತ್ಯವಾಗಿ ಬದಲಾಗಿ ಹೋಗಿದೆ. ಭಾರತದ ಉದ್ಯಮ ನಾಯಕರು ಅದರ ಸಾಮರ್ಥ್ಯವನ್ನು ಅರಿತುಕೊಂಡಿದ್ದಾರೆ ಮತ್ತು ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಲಿಂಕ್ಡ್‌ ಇನ್‌ನ ಹೊಸ ಸಂಶೋಧನೆಯ ಪ್ರಕಾರ, ಭಾರತದ ಶೇ.98ರಷ್ಟು ಉದ್ಯಮ ನಾಯಕರು 2025ರಲ್ಲಿ ತಮ್ಮ ಸಂಸ್ಥೆಗಳಲ್ಲಿ ಎಐ ಅಳವಡಿಕೆಯನ್ನು ವೇಗಗೊಳಿಸುವುದು ತಮ್ಮ ಮುಖ್ಯ ಆದ್ಯತೆ ಎಂದು ಹೇಳಿದ್ದಾರೆ. ಆದರೆ ಸರಿಯಾದ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ಕಂಡುಹಿಡಿಯುವುದು ಇನ್ನೂ ಬಹಳ ದೊಡ್ಡ ಸವಾಲಾಗಿದೆ.

ಭಾರತದ 5ರಲ್ಲಿ 3 ಉದ್ಯೋಗ ನೇಮಕಾತಿದಾರರಿಗೆ ಎಐ ಮತ್ತು ಮಾನವ ಕೌಶಲಗಳ ಸೂಕ್ತ ಮಿಶ್ರಣವನ್ನು ಕಂಡುಹಿಡಿಯುವುದು ಬಹಳ ದೊಡ್ಡ ಸವಾಲಾಗಿದೆ:
ಲಿಂಕ್ಡ್‌ ಇನ್ ಸಂಶೋಧನೆಯ ಪ್ರಕಾರ ಭಾರತದಲ್ಲಿ ಶೇ.54ರಷ್ಟು ಹೆಚ್ಆರ್ ತಜ್ಞರು ತಮಗೆ ಬರುವ ಉದ್ಯೋಗಾಕಾಂಕ್ಷಿ ಅರ್ಜಿಗಳಲ್ಲಿ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಅರ್ಜಿಗಳು ಮಾತ್ರ ಅಗತ್ಯ ಮತ್ತು ಆದ್ಯತೆಯ ಅರ್ಹತೆಗಳನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ. ಸರಿಯಾದ ಟೆಕ್ನಿಕಲ್ (ಶೇ.61) ಮತ್ತು ಸಾಫ್ಟ್ ಸ್ಕಿಲ್ ಗಳನ್ನು (ಶೇ.57) ಹೊಂದಿರುವ ಅಭ್ಯರ್ಥಿಗಳನ್ನು ಕಂಡುಹಿಡಿಯುವುದು ಅವರಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ತಾಂತ್ರಿಕ/ ಐಟಿ ಕೌಶಲ್ಯಗಳು (ಸಾಫ್ಟ್‌ ವೇರ್ ಡೆವಲಪ್‌ಮೆಂಟ್, ಎಂಜಿನಿಯರಿಂಗ್ – ಶೇ.44), ಎಐ ಕೌಶಲ್ಯಗಳು (ಶೇ.34), ಮತ್ತು ಸಂವಹನ ಹಾಗೂ ಸಮಸ್ಯೆ-ಪರಿಹಾರದಂತಹ ಸಾಫ್ಟ್ ಸ್ಕಿಲ್ ಗಳು (ಶೇ.33) ಭಾರತದಲ್ಲಿ ಹುಡುಕಲು ಕಷ್ಟವಾಗಿರುವ ಕೌಶಲ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್‌ನಿಂದ ಪ್ರಶಸ್ತಿ ಘೋಷಣೆ

2025ರಲ್ಲಿ ಕಂಪನಿಗಳು ‘ಆಯ್ದ ನೇಮಕಾತಿ’ ಪ್ರಕ್ರಿಯೆ ನಡೆಸಲಿವೆ:
ಭಾರತದ ಹೆಚ್ಆರ್ ತಜ್ಞರು ಹೇಳುವ ಪ್ರಕಾರ, ಅವರಿಗೆ ಅರ್ಜಿಗಳು ಬರುತ್ತವೆ (ಶೇ.47), ಆದರೆ ಅವುಗಳಲ್ಲಿ ಬಹಳಷ್ಟು ಅರ್ಜಿಗಳು ಅವರ ಉದ್ಯೋಗಕ್ಕೆ ಸರಿಹೊಂದುವುದಿಲ್ಲ (ಶೇ.41). ಹೀಗಾಗಿ 2025ರಲ್ಲಿ ಅವರು ಆಯ್ದ ಅಭ್ಯರ್ಥಿಗಳನ್ನು ಮಾತ್ರ ನೇಮಕ ಮಾಡುತ್ತಿದ್ದಾರೆ. ಶೇ.55ರಷ್ಟು ಜನರು ಶೇ.80ರಷ್ಟು ಅರ್ಹತೆ ಇರುವ ಅಭ್ಯರ್ಥಿಗಳನ್ನು ಮಾತ್ರ ಸಂಪರ್ಕಿಸುತ್ತಾರೆ ಮತ್ತು ಶೇ.54ರಷ್ಟು ನೇಮಕಾತಿದಾರರು ಅಷ್ಟು ಅರ್ಹತೆ ಉಳ್ಳವರನ್ನು ಮಾತ್ರ ನೇಮಿಸಿಕೊಳ್ಳುತ್ತಾರೆ.

ಈ ಕುರಿತು ಭಾರತದ ಲಿಂಕ್ಡ್‌ ಇನ್ ಟ್ಯಾಲೆಂಟ್ ಆಂಡ್ ಲರ್ನಿಂಗ್ ಸೊಲ್ಯೂಷನ್ಸ್ ಮುಖ್ಯಸ್ಥೆ ರುಚೀ ಆನಂದ್ ಅವರು, “ಕೃತಕ ಬುದ್ಧಿಮತ್ತೆಯು ನೇಮಕಾತಿ ಮತ್ತು ಪ್ರತಿಭಾವಂತರನ್ನು ಬೆಳೆಸುವ ರೀತಿಯನ್ನು ಬದಲಾಯಿಸುತ್ತಿದೆ. ಆದರೆ ನಿಜವಾದ ಯಶಸ್ಸು ಇರುವುದು ಎಐ ಅಳವಡಿಸುವುದರಲ್ಲಿ ಮಾತ್ರವೇ ಅಲ್ಲ, ಅದನ್ನು ಉದ್ಯಮಕ್ಕೆ ಸರಿಯಾಗಿ ಹೊಂದಿಸಿಕೊಳ್ಳುವುದರಲ್ಲಿ. ಹಲವು ಕಂಪನಿಗಳು ಎಐ ಟೂಲ್ ಗಳಿಗೆ ಹಣ ಖರ್ಚು ಮಾಡುತ್ತವೆ, ಆದರೆ ಸರಿಯಾದ ಪ್ರತಿಭೆಗಳೇ ಇಲ್ಲದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಈ ಅಡೆತಡೆಯಿಂದ ಪಾರಾಗಲು ಕಂಪನಿಗಳು ಕೌಶಲ್ಯ ಮೊದಲು ಎಂಬ ಮನಸ್ಥಿತಿ ಇಟ್ಟುಕೊಂಡು ನೇಮಕಾತಿ ಮಾಡಬೇಕು. ಯಾಕೆಂದರೆ ಎಐ ಆವಿಷ್ಕಾರ ಸೃಷ್ಟಿಸುವ ಸಾಧನವಾಗಿದ್ದರೂ ಕಂಪನಿಗಳು ಮುಂಚೂಣಿಯಲ್ಲಿ ನಿಲ್ಲಲು ಸೃಜನಶೀಲತೆ, ಸಂವಹನ, ಮತ್ತು ಸಹಯೋಗದಂತಹ ಮಾನವ ಕೌಶಲ್ಯಗಳೇ ನೆರವಾಗಬೇಕು” ಎಂದು ಹೇಳಿದರು.

ನಾಯಕರು ತಮ್ಮ ಉದ್ಯೋಗಿಗಳ ಕೌಶಲ್ಯವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ:
ಭಾರತದಲ್ಲಿ ಶೇ.84ರಷ್ಟು ಹೆಚ್ಆರ್ ತಜ್ಞರು 2025ರಲ್ಲಿ ಉದ್ಯೋಗಿಗಳಿಗೆ ಹೊಸ ಕೌಶಲ್ಯಗಳನ್ನು ಕಲಿಸುವುದನ್ನು ಆದ್ಯತೆಯನ್ನಾಗಿ ಇಟ್ಟುಕೊಂಡಿದ್ದಾರೆ. ಇದರಲ್ಲಿ ಎಐ ಕೌಶಲ್ಯಗಳು (ಶೇ.84) ಮತ್ತು ಸಂವಹನ, ಸಹಯೋಗದಂತಹ ಸಾಫ್ಟ್ ಸ್ಕಿಲ್ ಗಳ (ಶೇ.82) ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿ ಭಾರತದ ಎಲ್ಲಾ (ಶೇ.100) ತರಬೇತಿ ತಜ್ಞರು (ಎಲ್ ಆಂಡ್ ಡಿ ಪ್ರೊಫೆಷನಲ್ಸ್) ಸೃಜನಶೀಲತೆ, ಕುತೂಹಲ, ಸಂವಹನದಂತಹ ಸಾಫ್ಟ್ ಸ್ಕಿಲ್ ಗಳು ತಾಂತ್ರಿಕ ಕೌಶಲ್ಯಗಳಷ್ಟೇ ಮುಖ್ಯ ಎಂದು ಒಪ್ಪಿಕೊಂಡಿದ್ದಾರೆ. ಶೇ.48ರಷ್ಟು ಭಾರತೀಯ ಉದ್ಯಮ ನಾಯಕರು ಎಐ ತರಬೇತಿ ನೀಡಲು ತರಬೇತಿ ಮತ್ತು ಅಭಿವೃದ್ಧಿಗೆ ಹೂಡಿಕೆ ಮಾಡುವುದು ಎಐ ಅಳವಡಿಕೆಯನ್ನು ವೇಗಗೊಳಿಸುತ್ತದೆ ಎಂದು ಹೇಳಿದ್ದಾರೆ.

ಲಿಂಕ್ಡ್‌ ಇನ್ ನೇಮಕಾತಿದಾರರಿಗೆ ನೆರವಾಗುವ ಹೊಸ ಎಐ-ಚಾಲಿತ ಟೂಲ್ ಗಳನ್ನು ಪರಿಚಯಿಸುತ್ತಿದೆ:
ಕಂಪನಿಗಳು ಎಚ್ಚರಿಕೆಯಿಂದ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಲಿಂಕ್ಡ್‌ ಇನ್ ಹೊಸ ಎಐ-ಆಧರಿತ ಟೂಲ್ ಗಳನ್ನು ಅನಾವರಣಗೊಳಿಸುತ್ತಿದ್ದು, ಇದು ನೇಮಕಾತಿದಾರರಿಗೆ ಅವರ ಪ್ರಮುಖ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಆ ಟೂಲ್ ಗಳ ಬಗ್ಗೆ ಇಲ್ಲಿ ತಿಳಿಯೋಣ:

ಭಾರತದಲ್ಲಿ ಶೇ.37ರಷ್ಟು ಹೆಚ್ಆರ್ ಗಳು ಅದ್ರೆ 5 ರಲ್ಲಿ 2 ಮಂದಿ ಪ್ರತಿದಿನ 1-3 ಗಂಟೆಗಳ ಕಾಲ ಉದ್ಯೋಗ ಅರ್ಜಿಗಳನ್ನು ಪರಿಶೀಲಿಸುತ್ತಾರೆ. ಮತ್ತು ಶೇ.64ರಷ್ಟು ಅಂದ್ರೆ 5ರಲ್ಲಿ 3 ಮಂದಿ ಎಐ ಟೂಲ್ ಗಳು ನೇಮಕಾತಿಯನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದು ಎಂದು ಭಾವಿಸಿದ್ದಾರೆ. ಲಿಂಕ್ಡ್‌ ಇನ್‌ನ ಹೊಸ “ಹೈರಿಂಗ್ ಅಸಿಸ್ಟಂಟ್” ಟೂಲ್ ಪುನರಾವರ್ತಿತ ಕೆಲಸಗಳನ್ನು ಮಾಡಲು ನೆರವಾಗುತ್ತದೆ ಮತ್ತು ಆ ಮೂಲಕ ನೇಮಕಾತಿದಾರರು ನೇಮಕಾತಿ ಮ್ಯಾನೇಜರ್ ಗಳಿಗೆ ಸಲಹೆ ನೀಡುವುದು, ಅಭ್ಯರ್ಥಿಗಳ ಜೊತೆ ಸಂಪರ್ಕ ಹೊಂದುವುದು ಮುಂತಾದ ಪ್ರಮುಖ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಈ ಕುರಿತು ಐಬಿಎಂನ ಗ್ಲೋಬಲ್ ಟ್ಯಾಲೆಂಟ್ ಅಟ್ರಾಕ್ಷನ್ ಲೀಡರ್ ಸಚಿನ್ ಬೊರ್ಡೆ ಅವರು, “ಈ ಟೂಲ್ ಅಭ್ಯರ್ಥಿಗಳನ್ನು ತ್ವರಿತವಾಗಿ ಒದಗಿಸುತ್ತದೆ ಮತ್ತು ತಂಡದ ಉತ್ಪಾದಕತೆಯನ್ನು ಸುಧಾರಿಸುತ್ತದೆ” ಎಂದು ಹೇಳಿದ್ದಾರೆ.

ಭಾರತದಲ್ಲಿ ಶೇ.71ರಷ್ಟು ಹೆಚ್ಆರ್ ತಜ್ಞರು ತಮಗೆ ಸೂಕ್ತ ತರಬೇತಿ ಸಂಪನ್ಮೂಲಗಳನ್ನು ಪಡೆಯುವಲ್ಲಿ ತೊಂದರೆ ಎದುರಿಸುತ್ತಾರೆ. ಲಿಂಕ್ಡ್‌ ಇನ್ ಲರ್ನಿಂಗ್‌ನ ಹೊಸ ಎಐ- ಚಾಲಿತ ತರಬೇತಿ ಫೀಚರ್ ಸಾಫ್ಟ್ ಸ್ಕಿಲ್ ಗಳನ್ನು ಸಂವಹನಾತ್ಮಕ ಪ್ರಕ್ರಿಯೆ ಮತ್ತು ಇತರ ಪ್ರಕ್ರಿಯೆಗಳ ಮೂಲಕ ಅಭಿವೃದ್ಧಿ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ಉದ್ಯೋಗಿಗಳು ಪರ್ಫಾರ್ಮೆನ್ಸ್ ರಿವ್ಯೂ, ಫೀಡ್ ಬ್ಯಾಕ್ ಡಿಸ್ಕಷನ್ ಗಳಂತಹ ಕಚೇರಿ ಸಂಭಾಷಣೆ ಸಂದರ್ಭಗಳಲ್ಲಿ ಮಾತನಾಡುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಉದ್ಯೋಗಿಗಳಿಗೆ ಹಲವಾರು ವೈಯಕ್ತಿಕ ಸಲಹೆಗಳನ್ನು ನೀಡುತ್ತದೆ.