ಇಸ್ರೋ ಅಹಮದಾಬಾದ್ ಕೇಂದ್ರಕ್ಕೆ ಗೋಣಿಕೊಪ್ಪದ ಪಿ.ಇ. ಮನ್ಸೂರ್ ಆಯ್ಕೆ

ಕೊಡಗಿನ ಗೋಣಿಕೊಪ್ಪದ ಪ್ರತಿಭಾನ್ವಿತ ಯುವಕ ಪಿ.ಇ. ಮನ್ಸೂರ್ ಅವರು ಅಹಮದಾಬಾದ್‌ನಲ್ಲಿರುವ ಇಸ್ರೋದ ಪ್ರತಿಷ್ಠಿತ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (SAC) ಗೆ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಆಯ್ಕೆಯಾಗುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ಗೋಣಿಕೊಪ್ಪದ ಕಾವೇರಿ ಹಿಲ್ಲಸ್ ನಿವಾಸಿ, ನಿವೃತ್ತ ಸೈನಿಕ ಪಿ.ಎಂ. ಇಬ್ರಾಹಿಂ ಹಾಗೂ ದೇವರಪುರ ಸರ್ಕಾರಿ ಶಾಲೆಯ ಶಿಕ್ಷಕಿ ಕೆ.ಇ. ಸಪೂರ ದಂಪತಿಯ ಪುತ್ರರಾದ ಮನ್ಸೂರ್, ಇತ್ತೀಚೆಗೆ ನಡೆದ ಇಸ್ರೋ (ISRO) ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ FASAL 2.0, IPCM […]
ಮಡಿಕೇರಿ: ಮಾಜಿ ನಗರಸಭೆ ಉಪಾಧ್ಯಕ್ಷ, ಹಿರಿಯ ಕಲಾವಿದ ಲಿಯಾಕತ್ ಅಲಿ ನಿಧನ

ಮಡಿಕೇರಿ: ಮಡಿಕೇರಿ ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಕೊಡಗಿನ ಹಿರಿಯ ಕಲಾವಿದರಾದ ಲಿಯಾಕತ್ ಅಲಿ (69) ಅವರು ಇಂದು ಬೆಳಿಗ್ಗೆ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗದೆ, ಸಾಂಸ್ಕೃತಿಕ ಲೋಕದಲ್ಲೂ ಗುರುತಿಸಿಕೊಂಡಿದ್ದರು. ಗಾಯಕರಾಗಿದ್ದ ಇವರು ಕಲೆ ಮತ್ತು ಸಾಹಿತ್ಯದ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ವಿಶೇಷವಾಗಿ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಲಿಯಾಕತ್ ಅಲಿ ಅವರು, ಐತಿಹಾಸಿಕ ‘ಗೋಕಾಕ್ ಚಳುವಳಿ’ಯೂ ಸೇರಿದಂತೆ ಜಿಲ್ಲೆಯ […]