ಅರಣ್ಯ ಸಚಿವರೇ… ಕಾಡಾನೆ ದಾಳಿಗೆ ಎಷ್ಟು ಜನ ಸತ್ರು ಅಂತ ಎಲ್ಲಿಯವರೆಗೆ ಹಾಕುತ್ತಾ ಇರ್ಬೇಕು..?

ನಾವು ಸತ್ತವರ ಸಂಖ್ಯೆ ಲೆಕ್ಕ ಹಾಕುತ್ತಲೇ ಎಷ್ಟು ದಿನ ಇರಬೇಕು..? ಮೊನ್ನೆ ಒಬ್ಬರು ಹಿರಿಯರು ಮಾತಿಗೆ ಸಿಕ್ಕಾಗ ಕೇಳಿದ ಪ್ರಶ್ನೆ ಇದು. ನನ್ನಲ್ಲೂ ಅವರ ಪ್ರಶ್ನೆಗೆ ಉತ್ತರವಿಲ್ಲದೆ, ಮರು ಪ್ರಶ್ನೆ ಹಾಕುತ್ತಲೇ ಮಾತು ಮುಂದುವರೆಸಿದೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾಡಾನೆಗಳ ದಾಳಿ ಇದೇ ಮೊದಲೇನಲ್ಲ. ದಶಕದಿಂದಲೂ ಇದೆ. ಈ ನಡುವೆ ಬಂದ ಹುಲಿರಾಯನ ಬಳಗ ಜಿಲ್ಲೆಯ ಜನರನ್ನು ನಿದ್ದೆಗೆಡಿಸಿತ್ತು. ಇದೀಗ ಅದರ ಜೊತೆಗೆ ಜಗಪಡೆಗಳೂ ಸೇರಿಕೊಂಡಿವೆ. ಹುಲಿ ದಾಳಿಗೆ […]