ಮನೋವಿಜ್ಞಾನದಲ್ಲಿ ಕೊಡಗಿನ ಶಮೀನಾ ಅಸೈನಾರ್‌ ಸ್ನಾತಕೋತ್ತರ ಪದವಿ

ಗೋಣಿಕೊಪ್ಪ : ಕೊಡಗಿನ ಆಲೀರ ಶಮೀನಾ ಅಸೈನಾರ್ ಇಂದಿರಾಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ (Counselling Psychology)ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗೋಣಿಕೊಪ್ಪ ಬಳಿಯ ಮಾಪಿಳ್ಳೆತೋಡುವಿನ ಅಸೈನಾರ್ ಹಾಗೂ ಫಾತಿಮಾ ದಂಪತಿಯ ಪುತ್ರಿ, ಕೊಳಕೇರಿಯ ಕಣ್ಣಪಣೆ ಅಜೀಝ್ ಅವರ ಪತ್ನಿಯಾಗಿರುವ ಶಮೀನಾ ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಓದಿನಲ್ಲಿ ಆಸಕ್ತಿ ಇದ್ದ ಇವರು 19ನೇ ವಯಸ್ಸಿನಲ್ಲಿ ವೈವಾಹಿಕ ಬಂಧಕ್ಕೆ ಒಳಗಾದರು. ಮದುವೆ ನಂತರವೂ ಓದು ಮುಂದುವರೆದ್ದು, ಮುಂದೆ ಪಿಎಚ್‌ಡಿ ಮಾಡುವ ಇರಾದೆ ಹೊಂದಿದ್ದಾರೆ.

ಭಜನೆ, ನೃತ್ಯ, ಹಾಡು – ಸುಂದರ ಪರಿಸರದಲ್ಲಿ ಮೇಳೈಸಿದ ದೀಪಾವಳಿ ಸಂಭ್ರಮ..!

ಮಡಿಕೇರಿ : ಶ್ರೀ ರಾಮಾಂಜನೇಯ ಭಜನಾ ತಂಡ, ಆರೋಹಣ, ಯೋಗ ಭಾರತಿ ಬಳಗದ ವಾರ್ಷಿಕ ದೀಪಾವಳಿ ಸಂಭ್ರಮ ಮಂಗಳವಾರ ರಾತ್ರಿ ವರ್ಣರಂಜಿತವಾಗಿ ಜರುಗಿತು. ಮಡಿಕೇರಿ ಹೊರವಲಯದ ಅಭಿರತಿ ಸ್ಟೇನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ತಂಡದ ಸದಸ್ಯರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಭಜನೆ, ನೃತ್ಯ, ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಅಭಿರತಿ ಮಾಲೀಕರಾದ ಜಯಂತಿ ಸಂಜಯ್‌ ದಂಪತಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡದಿರು. ಸವಿತಾ ತಂಡದವರು ಪೂಜೆ, ಮಂಗಳಾರತಿ ನೆರವೇರಿಸಿದರು. ಅತಿಥಿಯಾಗಿ ಪತ್ರಕರ್ತ ಕಿಶೋರ್‌ ರೈ ಕತ್ತಲೆಕಾಡು […]

ಕೊಡಗಿನ ಪುಡಿಯಂಡ ಹೆಚ್. ರಫಿ ಸುಬೇದಾರ್ ಮೇಜರ್ ಆಗಿ ಪದೋನ್ನತಿ

ಮಡಿಕೇರಿ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೇವಣಗೇರಿ ಗ್ರಾಮದ ಪುಡಿಯಂಡ ಹೆಚ್. ರಫಿ ಸುಬೇದಾರ್ ಮೇಜರ್ ಆಗಿ ಪದೋನ್ನತಿ ಪಡೆದಿದ್ದಾರೆ. ಭಾರತೀಯ ಸೇನೆಯ 22ನೇ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟಿನಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಡಿಯಂಡ ಹೆಚ್. ರಫಿ ಅವರು ಸುಬೇದಾರ್ ಮೇಜರ್ ಆಗಿ ಪದೋನ್ನತಿ ಪಡೆದಿರುವುದು ನಮ್ಮ ಸಮುದಾಯಕ್ಕೆ ಮಾತ್ರವಲ್ಲ ಇಡೀ ಕೊಡಗು ಜಿಲ್ಲೆಗೆ ಕೀರ್ತಿ ಮೂಡಿಸಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್‌ ಮೆಚ್ಚುಗೆ ವ್ಯಕ್ತಪಡಿಸಿದೆ. ದೇವಣಗೇರಿ ಗ್ರಾಮದ ದಿ.ಪುಡಿಯಂಡ ಹಂಸ ಮತ್ತು ಫಾತುಮಾ […]