ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ನವೆಂಬರ್, 26 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ, ಹೊದ್ದೂರು, ಕಬಡಗೇರಿ, ಕಕ್ಕಬ್ಬೆ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಚೆರಿಯಪರಂಬು, ಹಳೆ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

ವೇಗವಾಗಿ ಬಂದು ರಸ್ತೆ ಮಧ್ಯೆ ಎರಡು ಪಲ್ಟಿಯಾದ ಪಿಕಪ್..!‌ Video ನೋಡಿ

ಸೋಮವಾರಪೇಟೆ :  ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ನಗರೂರು ಬಳಿ ತಿರುವಿನಲ್ಲಿ ಪಿಕಪ್‌ ವಾಹನವೊಂದು ಚಾಲಕನ ನಿಯಂತ್ರಣ ಸಿಗದೆ ರಸ್ತೆಯಲ್ಲಿ ಪಲ್ಟಿಯಾಗಿದೆ. ಅದರ ಹಿಂಬದಿ ಇದ್ದವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಈ ಘಟನೆ ಇಂದು(ನ.25ರಂದು) ಮಧ್ಯಾಹ್ನ ಸಂಭವಿಸಿದ್ದು, ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಕಳುಹಿಸಿಕೊಟ್ಟವರು – ಅವಿಲಾಶ್‌ ಕಾಜೂರು.

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ: ಕಾವೇರಿ ಕಾಲೇಜಿಗೆ ಪ್ರಥಮ ಸ್ಥಾನ

ಸೋಮವಾರಪೇಟೆಯಲ್ಲಿ ನಡೆದ ಕೊಡಗು ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾಟದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡವು ಮೊದಲ ಸ್ಥಾನ ಪಡೆದಿದೆ. ಶಹೀಮ್, ಆದರ್ಶ ಬಿದ್ದಪ್ಪ, ಬಸಿತ್, ಅಪ್ಸಲ್, ಮಿರನ್, ಹೃತಿಕ್, ಸಫ್ವಾನ್, ಮತ್ತು ರಿಜ್ವಾನ್ – ಈ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಪ್ರಥಮ ಬಹುಮಾನ ತಂದುಕೊಟ್ಟಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪ : PWD AEE ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ..!

ಮಡಿಕೇರಿ : ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ. ಮಡಿಕೇರಿಯಲ್ಲೂ ಕೂಡಾ ಪಿಡಬ್ಲ್ಯೂಡಿ ಅಧಿಕಾರಿ ಮನೆ ಮೇಲೂ ಲೋಕಾಯುಕ್ತ ದಾಳಿಯಾಗಿದೆ. ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್‌ ಗಿರೀಶ್‌ ಕಚೇರಿ, ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಡಿಕೇರಿಯಲ್ಲಿನ‌ ಕಚೇರಿ, ಕುಶಾಲನಗರ, ಮೈಸೂರಿನ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆಂದು ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ DYSP ದಿನಕರ್ ಶೆಟ್ಟಿ ನೇತೃತ್ವದಲ್ಲಿ ಮೈಸೂರಿನಲ್ಲಿ ದಾಳಿಯಾಗಿದೆ.