ಗಬ್ಬದ ಹಸು ಹತ್ಯೆ – ಮೂವರ ಸದಸ್ಯತ್ವ ರದ್ದುಪಡಿಸಿದ ಜಮಾಅತ್‌ – ವಹಿವಾಟು ನಡೆಸದಂತೆ ಇತರೆ ಸದಸ್ಯರಿಗೆ ಎಚ್ಚರಿಕೆ..!

Share this post :

ಮಡಿಕೇರಿ : ವಿರಾಜಪೇಟೆ ಬಳಿಯ ಮೈತಾಡಿ ಗ್ರಾಮದಲ್ಲಿ ಗಬ್ಬದ ಹಸು ಹತ್ಯೆಗೈದ ಪ್ರಕರಣ ಸಂಬಂಧ ಬಂಧಿತರಾಗಿರುವ ಮೂವರನ್ನು ಕೊಂಡಂಗೇರಿ ಜಮಾ-ಅತ್‌ ಸದಸ್ಯತ್ವದಿಂದ ಹೊರಹಾಕಲಾಗಿದೆ.
ಕೊಂಡಂಗೇರಿ ನಿವಾಸಿಗಳಾದ ಮೊಹಮ್ಮದ್ ಆಶಿಕ್(22), ಶಾಹಿದ್(25), ಹ್ಯಾರೀಸ್ (34) ಗೋಹತ್ಯೆ ಕೇಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಬೆಳವಣಿಗೆ ಬಳಿಕ ಪ್ರಕಟಣೆ ಹೊರಡಿಸಿರುವ ಸುನ್ನಿ ಮುಸ್ಲಿಂ ಜಮಾಅತ್‌, ಇವರು ಶರೀಅರ್‌ಗೆ ವಿರುದ್ಧವಾದ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರೊಂದಿಗೆ ಜಮಾಅತ್‌ನ ಸದಸ್ಯರು ಯಾವುದೇ ಚಟುವಟಿಕೆ ನಡೆಸುಂತಿಲ್ಲ. ಯಾರಾದರು ಈ ಮೂವರೊಂದಿಗೆ ಗುರುತಿಸಿಕೊಂಡಲ್ಲ, ಯಾವುದೇ ವಹಿವಾಟು ನಡೆಸಿದಲ್ಲಿ, ಅಂಥವರ ವಿರುದ್ಧವೂ ಜಮಾಅತ್‌ನಿಂದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

coorg buzz
coorg buzz