ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಮಡಿಕೇರಿ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಗಾಳಿಬೀಡಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ಆರೋಪಿ ಓರ್ವನನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಬೆಟ್ಟತ್ತೂರು ನಿವಾಸಿ ಜಿ.ಆರ್. ಕಿರಣ್ ಕುಮಾರ್ (35) ಎಂಬಾತ ಬಂಧಿಸಲ್ಪಟ್ಟಿರುವ ಆರೋಪಿಯಾಗಿದ್ದಾನೆ. ಆರೋಪಿ ದಿನಾಂಕ 28-02-2025 ರಂದು ಗಾಳಿಬೀಡು ಗ್ರಾಮದ ಗಣಪತಿ ದೇವಾಲಯದ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಸರಬರಾಜು ಮಾಡಲು ಯತ್ನಿಸುತ್ತಿದ್ದುದರ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 43 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡು […]
ಕೊಡಗು ವಿವಿ ಮುಚ್ಚುವ ಕ್ರಮ ಖಂಡಿಸಿ ಬಿಜೆಪಿ, ಎಬಿವಿಪಿಯಿಂದ ಪಾದಯಾತ್ರೆ: ಸಂಸದ ಭಾಗಿ

ಕೊಡಗು ವಿವಿ (Kodagu University) ಮುಚ್ಚಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಳುವಾರ ಗ್ರಾಮದಿಂದ ಕುಶಾಲನಗರದ ವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಪಾದಯಾತ್ರೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ (Yaduveer Wadiyar) ಪಾಲ್ಗೊಂಡರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಎಂಎಲ್ಸಿ ಸುಜಾಕುಶಾಲಪ್ಪ, ಭಾರತೀಶ್ ಮತ್ತಿತರರು ಭಾಗಿ. ನೂರಾರು ವಿದ್ಯಾರ್ಥಿಗಳುˌ ಕಾರ್ಯಕರ್ತರು ಹಾಗೂ ಯುವಜನತೆಯೊಂದಿಗೆ ಹೆಜ್ಜೆ ಹಾಕಿದರು. ಎರಡು ವರ್ಷಗಳ ಹಿಂದೆ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ […]