ಡಿಜಿಟಲ್ ಪೇಮೆಂಟ್ ಮಾಡುವರಿಗೆ ಇಲ್ಲಿದೆ ನೋಡಿ ಟಿಪ್ಸ್

ಮಳಿಗೆಯಲ್ಲಿ ಶಾಪಿಂಗ್ ಮಾಡುವಾಗ, ಆನ್ ಲೈನ್ ನಲ್ಲಿ ಅಥವಾ ಪ್ರಯಾಣ ಮಾಡುವಾಗಲೇ ಇರಲಿ ಜನರು ಇಂದು ಹಣವನ್ನು ಡಿಜಿಟಲ್ ಮೂಲಕವೇ ಪಾವತಿ (Digital Payments) ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಪಾವತಿ ಮಾಡುವುದು ಮುಖ್ಯವಾದ್ದರಿಂದ ಈ ಸಲದ ಡಿಜಿಟಲ್ ಪಾವತಿ ಜಾಗೃತಿ ಸಪ್ತಾಹ ಸಂದರ್ಭದಲ್ಲಿ ವೀಸಾ ನೀಡುತ್ತಿರುವ ಸಲಹೆಗಳು ಇಲ್ಲಿದೆ. * ಸುರಕ್ಷಿತ ಸಂಪರ್ಕರಹಿತ ಪಾವತಿಗಾಗಿ ಫೋನ್ ನಲ್ಲಿ ಕಾರ್ಡ್ ಗಳನ್ನು ಸೇವ್ ಮಾಡಿ: ಬ್ಯಾಂಕಿಂಗ್ ಮತ್ತು ಪಾವತಿ ಆಪ್ ಗಳಲ್ಲಿ ನಿಮ್ಮ ಕಾರ್ಡ್ […]
ಗೃಹಲಕ್ಷ್ಮಿ ಹಣ ಬೇಕಾದ್ರೆ ಹೀಗೆ ಮಾಡಿ: ಇಲ್ಲದಿದ್ರೆ ಬಂದ್!

ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದಾಗಿದೆ. ಈ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಜಮಾ ಆಗುತ್ತೆ. ಇದರಿಂದ ರಾಜ್ಯಾದ್ಯಂತ ತುಂಬಾ ಮಹಿಳೆಯರಿಗೆ ಸಹಾಯವಾಗಿದ್ದು, ಉತ್ತಮ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದೀಗ ಈ ಹಣ ಖಾತೆಗೆ ಹಾಕಲು ಕೆಲವು ನಿಯಮಗಳನ್ನು ಮಾಡಲಾಗಿದೆ. ಈ ಗೃಹಲಕ್ಷ್ಮಿ ಯೋಜನೆಯಲ್ಲಿನ (Gruha Lakshmi scheme) ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ. ಯಾರೂ ಆತಂಕಪಡಿವ ಅಗತ್ಯ ಇಲ್ಲ. ಮಹಿಳೆಯರ ಖಾತೆಗೆ […]
Karnataka Budget 2025: ಸಿದ್ದರಾಮಯ್ಯ ಬಜೆಟ್ ಪ್ರಮುಖಾಂಶಗಳು

ಬೆಂಗಳೂರು: 2025-26ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಮಂಡನೆ ಪೂರ್ಣಗೊಂಡಿದೆ. ಬರೋಬ್ಬರಿ 3 ಗಂಟೆ 30 ನಿಮಿಷ ಬಜೆಟ್ ಭಾಷಣ ಮಾಡಿದ್ದು, 178 ಪುಟಗಳ ಯೋಜನೆಗಳನ್ನು ಓದಿದ್ದಾರೆ. ದಾಖಲೆಯ 16 ನೇ ಬಾರಿಯ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಿಗೆ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಈ ಬಜೆಟ್ ಯಾರಿಗೆ ಸಿಹಿಯಾಗಿತ್ತು, ಯಾರಿಗೆ ಕಹಿ, ಯಾವ ವಲಯಕ್ಕೆ ಎಷ್ಟು ಅನುದಾನ, ಹೊಸ ಕೊಡುಗೆಗಳು ಏನು ಎನ್ನುವುದನ್ನು ಇಲ್ಲಿ ತಿಳಿಯೋಣ. ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ನ […]
ವಾಣಿಜ್ಯ ವಾಹನಗಳ ಕಾರ್ಯಕ್ಷಮತೆ ಹೆಚ್ಚಿಸಲು ಬಂತು ಹೊಸ ಫ್ಲೂಯಿಡ್

ಬೆಂಗಳೂರು: ಭಾರತದ ತೈಲ ಕಂಪನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಮತ್ತು ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ (Tata Motors) ಜಂಟಿಯಾಗಿ ಸಂಸ್ಥಾಪನೆ ಮಾಡಿರುವ ಜೆನ್ಯೂನ್ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ಬ್ರಾಂಡ್ ಅನ್ನು ಬಿಡುಗಡೆ ಮಾಡಿದೆ. ಈ ಅತ್ಯುತ್ತಮ ಗುಣಮಟ್ಟದ ಡಿಇಎಫ್ ಉತ್ಪನ್ನವು ವಾಹನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದ್ದು, ಡ್ರೈವ್ ಟ್ರೇನ್ ದಕ್ಷತೆಯನ್ನು ಉತ್ತಮಗೊಳಿಸುತ್ತದೆ ಮತ್ತು ವಾಹನದ ಆಯುಷ್ಯವನ್ನು ಜಾಸ್ತಿ ಮಾಡುತ್ತದೆ. ಉದ್ಯಮದ ಉನ್ನತ ಮಾನದಂಡಗಳನ್ನು ಪೂರೈಸುವ ಬಿಐಎಸ್- ಪ್ರಮಾಣೀಕೃತ […]
‘ವಂತಾರಾ’ ವನ್ಯಜೀವಿ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ: ಇಲ್ಲಿ ಏನೆಲ್ಲಾ ಇದೆ?

ಗುಜರಾತ್‌ನ ಜಾಮ್ ನಗರದಲ್ಲಿರುವ ವಂತಾರ (Vantara) ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಗಳವಾರದಂದು (ಮಾರ್ಚ್ 4) ಉದ್ಘಾಟಿಸಿದರು. ವಂತಾರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಭೇದಗಳಿಗೆ ನೆಲೆ ಒದಗಿಸಲಾಗಿದೆ. ಮತ್ತು ಒಂದೂವರೆ ಲಕ್ಷಕ್ಕೂ ಹೆಚ್ಚು ರಕ್ಷಣೆ ಮಾಡಲಾದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರದಲ್ಲಿ ಇರುವಂಥ ವಿವಿಧ ಸೌಲಭ್ಯಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ಇನ್ನು ಪುನರ್ವಸತಿ ಒದಗಿಸಲಾದ ವಿವಿಧ ಪ್ರಭೇದದ ಪ್ರಾಣಿಗಳೊಂದಿಗೆ ಅವರು ಸಮಯವನ್ನು ಕಳೆದರು. […]
ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು “ವುಮೆನ್ ವಾಕಥಾನ್”

ಬೆಂಗಳೂರು: ಮಹಿಳೆಯರು ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಲ್ಟಿಯಸ್ ಆಸ್ಪತ್ರೆಯ ನೇತೃತ್ವದಲ್ಲಿ “ಮಹಿಳಾ ದಿನಾಚರಣೆ” ಪ್ರಯುಕ್ತವಾಗಿ 3ನೇ ಆವೃತ್ತಿಯ “ಮಹಿಳಾ ವಾಕಥಾನ್”(Womens walkathon) ನನ್ನು ಆಯೋಜಿಸಲಾಗಿತ್ತು. ಈ ವಾಕಥಾನ್ ಅನ್ನು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ಯಶಸ್ವಿ ಗೊಳಿಸಿದರು. ಬೆಂಗಳೂರಿನ ಕಲ್ಯಾಣ ನಗರದ ಕೆಬಿಸಿ ಬ್ಯಾಸ್ಕೆಟ್ ಬಾಲ್ ಕೋರ್ಟ್‌ನಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಂಡ ವಾಕಥಾನ್‌ನನ್ನು ಆಲ್ಟಿಯಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರಿಯಾ ಎಸ್. […]
Bengaluru Airport: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೇಶದ ಅತಿದೊಡ್ಡ ಕಾರ್ಗೋ ಟರ್ಮಿನಲ್ ಪ್ರಾರಂಭ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಆವರಣದಲ್ಲಿ ವಿನ್ಯಾಸ ಸಾಮರ್ಥ್ಯದಲ್ಲಿ ಭಾರತದಲ್ಲೇ ಅತಿದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್ (ಡಿಸಿಟಿ) ಪ್ರಾರಂಭವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮತ್ತು ವಾಯುಯಾನ ಸರಕು ಸಾಗಣೆ ಕ್ಷೇತ್ರದ ಮೆನ್ಜೀಸ್ ಏವಿಯೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾದ 245,000 ಚದರ ಅಡಿ ವ್ಯಾಪ್ತಿಯ ಈ ಕಾರ್ಗೋ ಟರ್ಮಿನಲ್‌ನ್ನು, ದೇಶೀಯವಾಗಿ ಹೆಚ್ಚುತ್ತಿರುವ ವಾಯುಮಾರ್ಗ ಸರಕು ಸಾಗಣೆಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ. ಕೈಗಾರಿಕೆಗಳ ಸಂಪರ್ಕ […]
ಎಲ್ಲಾ ಕಡೆ AI ಹಾವಳಿ: ಪ್ರತಿಭಾವಂತರು ಸಿಗುವುದು ಬಲು ಕಷ್ಟ: ಲಿಂಕ್ಡ್ ಇನ್

ಕಳೆದ ಎರಡು ವರ್ಷಗಳಲ್ಲಿ ಜನರೇಟಿವ್ ಎಐ ಎಂಬ ಒಂದು ಪದವು ಜನಪ್ರಿಯ ಪದದಿಂದ ಉದ್ಯಮಗಳ ಅಗತ್ಯವಾಗಿ ಬದಲಾಗಿ ಹೋಗಿದೆ. ಭಾರತದ ಉದ್ಯಮ ನಾಯಕರು ಅದರ ಸಾಮರ್ಥ್ಯವನ್ನು ಅರಿತುಕೊಂಡಿದ್ದಾರೆ ಮತ್ತು ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಲಿಂಕ್ಡ್ ಇನ್‌ನ ಹೊಸ ಸಂಶೋಧನೆಯ ಪ್ರಕಾರ, ಭಾರತದ ಶೇ.98ರಷ್ಟು ಉದ್ಯಮ ನಾಯಕರು 2025ರಲ್ಲಿ ತಮ್ಮ ಸಂಸ್ಥೆಗಳಲ್ಲಿ ಎಐ ಅಳವಡಿಕೆಯನ್ನು ವೇಗಗೊಳಿಸುವುದು ತಮ್ಮ ಮುಖ್ಯ ಆದ್ಯತೆ ಎಂದು ಹೇಳಿದ್ದಾರೆ. ಆದರೆ ಸರಿಯಾದ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ಕಂಡುಹಿಡಿಯುವುದು ಇನ್ನೂ ಬಹಳ ದೊಡ್ಡ ಸವಾಲಾಗಿದೆ. ಭಾರತದ 5ರಲ್ಲಿ […]
ಮಿಸ್ & ಮಿಸೆಸ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿಂಚಿದ ಆಸ್ಟ್ರಲ್ ಪೇಜೆಂಟ್ಸ್

ಮಿಸ್ & ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಮೂವರು ವೈದ್ಯೆಯರು ಅತ್ಯುನ್ನತ ಗೌರವ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಫಿಲಿಫೈನ್ಸ್‌ನ ಮನಿಲಾದಲ್ಲಿ ಫೆ 16 ರಿಂದ 22ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತ 50 ವರ್ಷದೊಳಗಿನ ಪ್ರಿ-ಟೀನ್, ಟೀನ್, ಮಿಸ್, ಮಿಸೆಸ್ ಮತ್ತು ಮತ್ತು 40 ವರ್ಷ ಮೇಲ್ಪಟ್ಟ ಎಲೈಟ್ ಮಿಸೆಸ್ ವಿಭಾಗಗಳಲ್ಲಿ ಪಾಲ್ಗೊಂಡಿದ್ದರು. ಅಸ್ಟ್ರಲ್ ಪೇಜೆಂಟ್ ನ ಸಂಸ್ಥಾಪಕಿ ಪ್ರತಿಭಾ ಸೌಂಶಿಮಠ್, ಅಸ್ಟ್ರಲ್ ಪೇಜೆಂಟ್ಸ್‌ನ ಪ್ರತಿನಿಧಿಗಳು 40 ವರ್ಷದೊಳಗಿನ ಮಿಸ್, ಮಿಸೆಸ್ ಮತ್ತು […]
ಪುಂಡರಿಗೆ ಸೆಡ್ಡು: ಮಹಾರಾಷ್ಟ್ರದ ವಾಹನಗಳ ಚಾಲಕರಿಗೆ ಸಿಹಿ, ಗುಲಾಬಿ ನೀಡಿದ ಕರವೇ

ಬೆಳಗಾವಿ ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ಮಿತಿ ಮೀರಿದ್ದರೆ, ಇತ್ತ ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆ ವತಿಯಿಂದ ಮಹಾರಾಷ್ಟ್ರದ ವಾಹನಗಳ ಚಾಲಕರನ್ನು ಸನ್ಮಾನಿಸಿ, ಸಿಹಿ ತಿನ್ನಿಸಿ, ಗುಲಾಬಿ ಹೂ ನೀಡಿ ಸೌಹಾರ್ದತೆ ಮೆರೆಯಲಾಗಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ವಾಹನಗಳನ್ನು ತಡೆದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದ ಕಾರ್ಯಕರ್ತರು. ಚಾಲಕ, ನಿರ್ವಾಹಕರನ್ನು ಗೌರವಿಸಿ, ಸಿಹಿ ನೀಡಿ, ಹೂ ನೀಡಿ ಭಾಷೆ ವಿಚಾರದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಭಾವೋದ್ವೇಕಕ್ಕೆ ಒಳಗಾಗದೆ ಶಾಂತಿ […]