ನಾಳೆ ನಡೆಯುತ್ತಾ ಸಾರಿಗೆ ನೌಕರರ ಮುಷ್ಕರ..? – ಸಿಎಂ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ..!

ಬೆಂಗಳೂರು : ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆಯಿಂದ(ಆ.05) ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಆ.04ರೊಳಗೆ ಈಡೇರಿಸುವಂತೆ ನೌಕರರ ಸಂಘಟನೆಗಳು ಆಗ್ರಹಿಸಿದ್ದವು. ಈಡೇರದಿದ್ದರೆ ನಾಳೆಯಿಂದ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಸಿವೆ. ಈ ಮಧ್ಯೆ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಒಕ್ಕೂಟದೊಂದಿದೆ ವಿಧಾನದೌಧದ ಸಮಿತಿ ಕೊಠಡಿಯಲ್ಲಿ ಸುದೀರ್ಘ ಚರ್ಚೆ ನಡೆಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ […]
ಇವುಗಳು ಮೂಢನಂಬಿಕೆಗಳಲ್ಲ! ಹಿರಿಯರು ಹೀಗೆ ಹೇಳುವುದರ ಹಿಂದಿನ ವೈಜ್ಞಾನಿಕ ಕಾರಣ ಇದು

ನಮ್ಮಮನೆಯಲ್ಲಿ ಹಿರಿಯರು, ಆಗಾಗ್ಗೆ ಹೀಗೆ ಮಾಡಬೇಡ, ಈಗ ಬೇಡ ನಾಳೆ ಮಾಡು, ಇಲ್ಲಿ ಬೇಡ ಎಂದೆಲ್ಲ ಕೆಲವೊಮ್ಮೆ ಉಪದೇಶ ನೀಡುತ್ತಾರೆ. ಅವುಗಳನ್ನೆಲ್ಲ ನಾವು ಮೂಢನಂಬಿಕೆ ಎಂದು ಹೇಳಿಕೊಂಡು ಬಂದಿದ್ದೇವೆ. ಹಿಂದಿನಿಂದಲೂ ಬಂದ ಕೆಲವು ಆಚರಣೆಗಳು, ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಕಾರಣಗಳು ಅಡಗಿರುತ್ತವೆ. ಆದರೆ, ನಮಗೆ ಕಾರಣಗಳನ್ನು ತಿಳಿಸುವುದರಲ್ಲಿ ನಮ್ಮಹಿರಿಯರು ವಿಫಲರಾಗಿದ್ದಾರೆ. ನಮ್ಮಹಿರಿಯರು ಕಾರಣಗಳನ್ನು ತಿಳಿದೋ , ತಿಳಿಯದೆಯೋ ಅದನ್ನಪಾಲಿಸುತ್ತಲೇ ಬಂದಿದ್ದರಿಂದ, ಅದನ್ನು ನಮಗೂ ಹೇಳುತ್ತಾ ಬಂದಿದ್ದಾರೆ. ಅಂತಹ ಕೆಲವು ನಂಬಿಕೆಗಳು ಹಾಗೂ ಅದರ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು […]
ವಿಮಾ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತರಾಟೆ – ೩೫ ಸಾವಿರ ದಂಡ ವಿಧಿಸಿ ಆದೇಶ..! – ಕಾರಣ ಏನು? ಇಲ್ಲಿದೆ ಮಾಹಿತಿ

ಮಡಿಕೇರಿ : ಆರೋಗ್ಯ ವಿಮೆಯ ಹಣವನ್ನು ನೀಡಲು ನಿರಾಕರಿಸಿದ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಗೆ ವಿಮಾ ಮೊತ್ತದ ಜೊತೆಗೆ ೩೫ ಸಾವಿರ ರೂ. ದಂಡ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಮಡಿಕೇರಿ ನಿವಾಸಿ ಜೈರಸ್ ಥಾಮಸ್ ಅಲೆಕ್ಸಾಂಡರ್ ಮತ್ತು ಅವರ ಪತ್ನಿ ಶಾಲಿನಿ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೇರ್ ಹೆಲ್ತ್ ಇನ್ಸೂರೆನ್ಸ್ ಲಿಮಿಟೆಡ್‌ನಲ್ಲಿ ಆರೋಗ್ಯ ವಿಮಾ ಖಾತೆ ಹೊಂದಿರು. ಇದರ ಪ್ರೀಮಿಯಂ ಮೊತ್ತ ೫ ಲಕ್ಷ ರೂ. ಗಳಾಗಿದ್ದು, ೨೦೨೩ನೇ ಇಸವಿಯಲ್ಲಿ […]
ಮೊದಲ ಬಾರಿ ಯೋಗ ಮಾಡ್ತಾ ಇದ್ದೀರಾ..? ಹಾಗಿದ್ರೆ ಈ ಬಗ್ಗೆ ಗಮನವಿರಲಿ..!

Coorg buzz health tips : ಯೋಗ (Yoga) ಮಾಡುವುದರಿಂದ ನಾವು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗವು ದೇಹ ಮತ್ತು ಮನಸನ್ನು ಶಾಂತಗೊಳಿಸಲು, ದೈಹಿಕ ಮಾನಸಿಕ ಸಮತೋಲನವನ್ನು ನಿರ್ವಹಿಸುತ್ತದೆ. ಆಧುನಿಕ ಯುಗದಲ್ಲಿ ಮನುಷ್ಯನಿಗೆ ಒತ್ತಡ ಹೆಚ್ಚಾಗಿದೆ. ಹೀಗಾಗಿ 20 ರಿಂದ 30 ನಿಮಿಷಗಳ ಕಾಲ ಯೋಗ ಮಾಡುವ ಮೂಲಕ ನೀವು ನಿಮ್ಮ ಜೀವನವನ್ನು ಉತ್ತಮಗೊಳಿಸಬಹುದು. ಬೆಳಗ್ಗೆ ಎದ್ದು ಯೋಗಾಭ್ಯಾಸ (Yoga practice) ಮಾಡುವುದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ತಪ್ಪಿಸಬಹುದು. ಯೋಗ ಮಾಡುವಾಗ ನಾವು ಹಲವು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. […]
ರಾತ್ರಿ ನಿದ್ರೆಯಲ್ಲಿ ಪದೇಪದೇ ಎಚ್ಚರವಾಗುವುದನ್ನು ನಿರ್ಲಕ್ಷಿಸಬೇಡಿ !!

Coorg Buzz Health Tips : ಮನುಷ್ಯನಿಗೆ ನಿದ್ರೆ ( Sleep) ಬಹಳ ಮುಖ್ಯ. ರಾತ್ರಿ ಸರಿಯಾದ ಸಮಯದಲ್ಲಿ ನಿದ್ರಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಕೆಲವರಿಗೆ ರಾತ್ರಿ ಆಗಾಗ್ಗೆ ಎಚ್ಚರವಾಗುವುದುಂಟು. ಹೀಗೆ ಎಚ್ಚರವಾಗುವುದು ಏಕೆಂದು ತಿಳಿದಿದೆಯಾ.? ಈ ರೀತಿ ಆಗುವುದಕ್ಕೆ ಹಲವಾರು ಕಾರಣಗಳಿದೆ. ಇದನ್ನು ನಿರ್ಲಕ್ಷಿಸಿದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗೆ (health problems )ಕಾರಣವಾಗಬಹುದು. ಆಗಾಗ್ಗೆ ಎಚ್ಚರವಾಗುವುದಕ್ಕೆ ಕಾರಣ..? ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಮಲಗದಿರುವುದು, ಜೊತೆಗೆ ಮಲಗುವ ಮೊದಲು ಮೊಬೈಲ್, ಟಿವಿ, ಲ್ಯಾಪ್ಟಾಪ್ ಮುಂತಾದ […]
Health Tips: ಮಹಿಳೆಯರಿಗಿರಬೇಕು ಆರೋಗ್ಯ ಕಾಳಜಿ!

ಹಿಂದಿನ ಕಾಲದಿಂದಲೂ ಮಹಿಳೆಯರು ಮನೆಯ ಸದಸ್ಯರ ಆರೋಗ್ಯದ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದುನ್ನು ಬಿಡಬೇಕು ಹಾಗಾದಾಗ ಮಾತ್ರ ಆರೋಗ್ಯವಂತರಾಗಿ ಬದುಕಲು ಸಾಧ್ಯ ಮತ್ತು ಉತ್ತಮ ಜೀವನಶೈಲಿಯನ್ನು ಹೊಂದಲು ಸಾಧ್ಯ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ನಿಶಾ ಬುಚಾಡೆ ಅವರ ಆರೋಗ್ಯ ಸಲಹೆಗಳು (Health Tips) ಇಲ್ಲಿದೆ. * ಅಡುಗೆ ಮಾಡುವುದು, ಮಕ್ಕಳ ಪಾಲನೆ ಜೊತೆಗೆ ಮನೆಯ ಕೆಲಸದ ಒತ್ತಡ ನಡುವೆ ಸರಿಯಾದ ಸಮಯಕ್ಕೆ […]
ಕಣ್ಣಿನ ಆರೋಗ್ಯ: ಗ್ಲಾಕೋಮಾ ಬಗ್ಗೆ ಇರಲಿ ಎಚ್ಚರ

ಗ್ಲಾಕೋಮವನ್ನು (Glaucoma) ಸದ್ದಿಲ್ಲದೇ ದೃಷ್ಟಿ ಕದ್ದೊಯ್ಯುವ ಕಳ್ಳ ಎಂದು ಕರೆಯ ಬಹುದು. ಗ್ಲಾಕೋಮಾ ಕಣ್ಣಿಗೆ ಸಂಬಂಧ ಪಟ್ಟ ಆತಂಕಕಾರಿ ಕಾಯಿಲೆಯ ಸ್ಥಿತಿಗಳಲ್ಲೊಂದು. ಇದರಿಂದ ಕಣ್ಣಿನ ದೃಷ್ಟಿ ಹೋಗುತ್ತದೆ. ಸಾಧಾರಣವಾಗಿ 40 ವರ್ಷಗಳಿಗಿಂತಲೂ ಹೆಚ್ಚಿನ ವಯಸ್ಸಿನವರಿಗೆ, ಅದರಲ್ಲೂ ಅನುವಂಶಿಕವಾಗಿ ಗ್ಲಾಕೋಮಾ ರೋಗವು ಹರಡುವುದು ಕಂಡು ಬರುತ್ತದೆ. ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಕಾಯಿಲೆ ಗ್ಲಾಕೋಮಾ ರೋಗ ಲಕ್ಷಣಗಳು: ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಠಿ ಕದಿಯುವ ಕಾಯಿಲೆ ಗ್ಲಾಕೋಮಾ, 40 ವಯಸ್ಸಿನ ನಂತರ ಪ್ರತೀಯೊಬ್ಬರೂ ವರ್ಷಕ್ಕೊಮ್ಮೆ ಕಣ್ಣಿನ ಒತ್ತಡ […]
ಫ್ಲೂ ಲಸಿಕೆ ಪಡೆದು ಫ್ಲೂನಿಂದ ದೂರವಿರಿ ಹಾಗೂ ಆರೋಗ್ಯವಾಗಿರಿ

ಪ್ರತೀ ವರ್ಷದಲ್ಲೂ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರು ಫ್ಲೂನಿಂದ (Flu) ತೊಂದರೆಗೊಳಗಾಗುತ್ತಾರೆ. ಪ್ರತೀ ವರ್ಷ 100 ಕೋಟಿಗಿಂತಲೂ ಹೆಚ್ಚು ಫ್ಲೂ ಪ್ರಕರಣಗಳಲ್ಲಿ 3 ರಿಂದ 5 ಮಿಲಿಯನ್ ಮಂದಿ ಗಂಭೀರ ಪರಿಸ್ಥಿತಿ ಎದುರಿಸುತ್ತಾರೆ. ಸಾಮಾನ್ಯವಾಗಿ ಫ್ಲೂ ಅನ್ನು ಶೀತ ಎಂದು ಭಾವಿಸಲಾಗುತ್ತದೆ. ಆದರೆ ಫ್ಲೂ ನಿಮ್ಮ ದೈನಂದಿನ ಜೀವನ ಮತ್ತು ಕೆಲಸ ಕಾರ್ಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಅದಕ್ಕೆ ಫ್ಲೂನಿಂದ ಕ್ತ ಲಸಿಕೆ ಪಡೆಯುವುದು ಅವಶ್ಯವಾಗಿದೆ ಮತ್ತು ಲಸಿಕೆಯಿಂದ (Vaccine) ನಿಮ್ಮನ್ನು ನೀವು ರಕ್ಷಿಸಬಹುದಾಗಿದೆ. ಆದರೆ ಅನೇಕ ಜನರು […]