ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಇನ್ನಿಲ್ಲ

Shivu Madappa

ಮಾಜಿ ಜಿಲ್ಲಾ ಕಾಂಗ್ರೆಸ್ (Congress) ಅಧ್ಯಕ್ಷ ಕುಟ್ಟ ಗ್ರಾಮದ ನಿವಾಸಿ ಮುಕ್ಕಾಟೀರ ಶಿವು ಮಾದಪ್ಪ (49) ನಿಧನರಾಗಿದ್ದಾರೆ. ನೇರ ನುಡಿಯ ಒಬ್ಬ ನಾಯಕ, ಮಾಜಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಹಾಲಿ ಕೆಪಿಸಿಸಿ ಸದಸ್ಯರಾಗಿದ್ದ ಶಿವು ಮಾದಪ್ಪ (Shivu Madappa) ಒಬ್ಬ ಅತ್ಯುತ್ತಮ ಸಂಘಟಗಾರರಾಗಿ, ಯುವ ನಾಯಕರಾಗಿ ಗುರುತಿಸಿಕೊಂಡಿದ್ದರು. ಮುಕ್ಕಾಟಿರ ಶಿವು ಮಾದಪ್ಪ ಭಾನುವಾರ ರಾತ್ರಿ 11:00 ಸಮಯದಲ್ಲಿ ಮೈಸೂರು ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ಸಂಸ್ಕಾರ ಸೋಮವಾರ […]

ಮಡಿಕೇರಿಯಲ್ಲಿ ಗಮನ ಸೆಳೆದ ಪೊಲೀಸ್ ರನ್ ಮ್ಯಾರಾಥಾನ್

Police Run Marathon

ಕರ್ನಾಟಕ ರಾಜ್ಯ ಪೊಲೀಸ್ (Police) ಇಲಾಖೆಯ ಫಿಟ್ನೆಸ್ ಫಾರ್ ಅಲ್ (Fitness for all) ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದಾದ್ಯಂತ ಇಂದು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಈ ಕಾಯಕ್ರಮದ ಭಾಗವಾಗಿ ಕೊಡಗು ಜಿಲ್ಲಾ ಪೊಲೀಸ್ ಘಟಕದ ಆಯೋಜನೆಯಲ್ಲಿ ಡ್ರಗ್ಸ್ ಮುಕ್ತ ಕೊಡಗು ಎನ್ನುವ ಪರಿಕಲ್ಪನೆಯೊಂದಿಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ಪೊಲೀಸ್ ರನ್ ಮ್ಯಾರಾಥಾನ್ (Police Run Marathon) ನಡೆಯಿತು. ವಿಕ್ರಮ್ ಜಾದೂಗಾರ್ ರವರಿಂದ ಮಾದಕ ದ್ರವ್ಯವನ್ನು […]

ರಶ್ಮಿಕಾಗೆ ಸೂಕ್ತ ಭದ್ರತೆ ನೀಡಲು ಕೊಡವ ಕೌನ್ಸಿಲ್ ಒತ್ತಾಯ: ಕೊಡಗಿನ ಬೆಡಗಿ ಪರ ನಿಂತ ಖ್ಯಾತ ನಟಿಯರು

Rashmika Mandanna

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೊಡಗಿನ ಬೆಡಗಿ. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು. ಆದರೆ ರಶ್ಮಿಕಾ ಕನ್ನಡ ಸರಿಯಾಗಿ ಮಾತಾಡಲ್ಲ, ಹೈದರಾಬಾದ್ ನನ್ನ ಊರು ಅಂತ ಹೇಳಿದ್ದಕ್ಕೆ ವಿಪರೀತ ಟ್ರೋಲ್​ಗೆ ಗುರಿಯಾಗುತ್ತಿದ್ದಾರೆ. ಶಾಸಕ ರವಿಕುಮಾರ್ ಅವರಂತೂ ರಶ್ಮಿಕಾ ಮಂದಣ್ಣಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಬೆದರಿಕೆ ಧ್ವನಿಯಲ್ಲಿ ಹೇಳಿದ್ದರು. ಇದೀಗ ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ರಶ್ಮಿಕಾಗೆ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. […]

ಭಾಗ್ಯವತಿಗೆ ಉತ್ತಮ ಅಂಗನವಾಡಿ ಶಿಕ್ಷಕಿ ಪ್ರಶಸ್ತಿ

Anganwadi Teacher Award

ರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಬಲ್ಲಮಾವಟಿ ವೃತ್ತದ ಹಳೆ ತಾಲೂಕು ಅಂಗನವಾಡಿ ಕೇಂದ್ರದ ಶಿಕ್ಷಕಿ ಭಾಗ್ಯವತಿಯವರಿಗೆ “ಉತ್ತಮ ಅಂಗನವಾಡಿ ಶಿಕ್ಷಕಿ” (Anganwadi Teacher) ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿ ಗೌರವಿಸಿದರು.

ಬೀದಿ ಬದಿ ವ್ಯಾಪಾರಿಗಳೇ ಗಮನಿಸಿ…

Street vendor

ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಸಂಪಾಜೆಯಿಂದ ಕುಶಾಲನಗರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು ಅಲ್ಲಲ್ಲಿ ಅನಧಿಕೃತವಾಗಿ ಹಣ್ಣಿನ ಅಂಗಡಿಗಳನ್ನು ಮತ್ತು ಇತರೆ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಗ್ರಾಹಕರು ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ರಸ್ತೆಯಲ್ಲಿನ ವಾಹನ ನಿಲುಗಡೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆಯಿರುವುದರಿಂದ ಮಾರ್ಚ್, 15 ರೊಳಗೆ ಸಂಬಂಧಿಸಿದ ಬೀದಿ ಬದಿ ವ್ಯಾಪಾರಿಗಳು (Street vendor) ಅಂಗಡಿಗಳನ್ನು ತೆರವುಗೊಳಿಸಬೇಕು, ತಪ್ಪಿದ್ದಲ್ಲಿ ಮಾರ್ಚ್, 16 ರಿಂದ ಪೊಲೀಸ್ ಸಹಯೋಗದೊಂದಿಗೆ ಇಲಾಖೆಯ ವತಿಯಿಂದ […]

ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ಕಾಲರ್ಶಿಪ್, ಪ್ರತಿಭಾ ಪುರಸ್ಕಾರ ವಿತರಣೆ

Dubai Kodagu Alumni Association

ಸಂಯುಕ್ತ ಅರಬ್ ಸಂಸ್ಥಾನದ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಕೊಡಗಿನ ಹಳೆ ವಿದ್ಯಾರ್ಥಿಗಳ ಸಂಘದ ಅವರ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕೊಡಗಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಎಲ್ಲಾ ವರ್ಷವು ನೀಡಿ ಬರುವ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಕೊಡಗಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಫೆ.01 ರಂದು ಹೊದವಾಡದಲ್ಲಿರುವ ರಾಫಲ್ಸ್ […]

ಕರ್ನಾಟಕ ಬಜೆಟ್ 2025: ಕೊಡಗಿಗೆ ಸಿಕ್ಕಿದ್ದೇನು?

Karnataka Budget 2025

ಸಿಎಂ ಸಿದ್ದರಾಮಯ್ಯನವರು (CM Siddaramaih) ದಾಖಲೆಯ 16ನೇ ಬಜೆಟ್ (Budget) ಅನ್ನು ಮಂಡಿಸಿದ್ದಾರೆ. ಬರೋಬ್ಬರಿ 4.09 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಿಗೆ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಹಾಗಾದರೆ ಕೊಡಗು ಜೆಲ್ಲೆಗೆ (Kodagu) ಈ ಬಾರಿ ಬಜೆಟ್ ನಲ್ಲಿ ಸಿಕ್ಕ ಕೊಡುಗೆಗಳು ಏನು ಎಂದು ತಿಳಿಯೋಣ. * ಪೊನ್ನಂಪೇಟೆಯಲ್ಲಿ ಹೊಸ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಲಾಗುತ್ತದೆ. * ಕುಶಾಲನಗರ ತಾಲೂಕು ಆಸ್ಪತ್ರೆಯನ್ನು ನವೀಕರಣಗೊಳಿಸಲಾಗುವುದು ಹಾಗೂ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ […]

Karnataka Budget 2025: ಸಿದ್ದರಾಮಯ್ಯ ಬಜೆಟ್ ಪ್ರಮುಖಾಂಶಗಳು

Karnataka Budget 2025

ಬೆಂಗಳೂರು: 2025-26ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget)  ಮಂಡನೆ ಪೂರ್ಣಗೊಂಡಿದೆ. ಬರೋಬ್ಬರಿ 3 ಗಂಟೆ 30 ನಿಮಿಷ ಬಜೆಟ್ ಭಾಷಣ ಮಾಡಿದ್ದು, 178 ಪುಟಗಳ ಯೋಜನೆಗಳನ್ನು ಓದಿದ್ದಾರೆ. ದಾಖಲೆಯ 16 ನೇ ಬಾರಿಯ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಿಗೆ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಈ ಬಜೆಟ್ ಯಾರಿಗೆ ಸಿಹಿಯಾಗಿತ್ತು, ಯಾರಿಗೆ ಕಹಿ, ಯಾವ ವಲಯಕ್ಕೆ ಎಷ್ಟು ಅನುದಾನ, ಹೊಸ ಕೊಡುಗೆಗಳು ಏನು ಎನ್ನುವುದನ್ನು ಇಲ್ಲಿ ತಿಳಿಯೋಣ. ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್​ನ […]

ಮಹಿಳೆಯರಿಗೆ ಉಚಿತ ಫ್ಯಾಶನ್ ಡಿಸೈನಿಂಗ್/ ಟೈಲರಿಂಗ್ ತರಬೇತಿ

fashion designing/tailoring training

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫ್ಯಾಶನ್ ಡಿಸೈನಿಂಗ್/ ಟೈಲರಿಂಗ್ ಕುರಿತ 30 ದಿನಗಳ ಉಚಿತ ತರಬೇತಿಯು ಏಪ್ರಿಲ್ 03 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಮಹಿಳೆಯರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು ಹಾಗೂ ನರೇಗಾ ಯೋಜನೆಯ ಜಾಬ್ ಕಾರ್ಡ್ […]

ಮಡಿಕೇರಿ ನಗರ ಠಾಣೆಯಲ್ಲಿ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ

General Thimmaiah Public School students

ಮಡಿಕೇರಿ (Madikeri) ನಗರ ಠಾಣೆಯಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ (General Thimmaiah Public School) ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ನಡೆಸಿದ್ದು ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಠಾಣೆಯ ಬಗ್ಗೆ, ಪೊಲೀಸ್‌ ಸೇವೆಗಳ ಬಗ್ಗೆ, ಮಕ್ಕಳ ಕಾನೂನು, ರಸ್ತೆ ಸುರಕ್ಷತೆ, ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳು ಮುಂತಾದವ ವಿಷಯಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.