ದಸರಾ ಆನೆ ಅರ್ಜುನನ ಎರಡನೇ ವರ್ಷದ ಸ್ಮರಣೆ – ರಮೇಶ್ ಉತ್ತಪ್ಪ ರಚಿತ ಎರಡು ಕೃತಿಗಳ ಲೋಕಾರ್ಪಣೆ

ಮೈಸೂರು : ದಸರಾ ಆನೆ ಅರ್ಜುನನ ಎರಡನೇ ವರ್ಷದ ನೆನಪು ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಬರೆದಿರುವ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು. ಮೈಸೂರು ಕಲ್ಚರಲ್ ಅಸೋಸಿಯೇಷನ್ ಹಾಗೂ ಕಲಿಸು ಫೌಂಡೇಷನ್ ವತಿಯಿಂದ ನಗರದ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಎರಡು ಕೃತಿ ಲೋಕಾರ್ಪಣೆ ಮಾಡಿದರು. ಐತಿಚಂಡ ರಮೇಶ್ ಉತ್ತಪ್ಪ ಅವರ 40ನೇ ಕೃತಿ ಅರ್ಜುನ ಬಲಿಯಾದ ಘಟನೆಯ ತನಿಖಾ ವರದಿಯನ್ನು ಒಳಗೊಂಡ ‘‘ಸಾವಿನ ಸತ್ಯ-ಅರ್ಜುನ ನಿನ್ನ ಕೊಂದದ್ದು ಮದಗಜವಲ್ಲ […]
ಏಡ್ಸ್ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ಅದರ ಸಂಪೂರ್ಣ ನಿರ್ಮೂಲನೆ ಸಾಧ್ಯ : ಡಾ. ಸನತ್ ಕುಮಾರ್

ವೀರಾಜಪೇಟೆ : ಹೆಚ್ಐವಿ / ಏಡ್ಸ್ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಅದರ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ. ಸನತ್ ಕುಮಾರ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿ, ವಿರಾಜಪೇಟೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ […]
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿ ಸುನೀಲ್ ಪೊನ್ನೇಟಿ ನೇಮಕ

ಮಡಿಕೇರಿ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿ ಸುನಿಲ್ ಪೊನ್ನೇಟಿ ಅವರನ್ನು ನೇಮಕ ಮಾಡಲಾಯಿತು. ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಖಾಲಿಯಿದ್ದ ಖಜಾಂಚಿ ಹಾಗೂ ವಿವಿಧ ಸ್ಥಾನಗಳಿಗೆ ನೇಮಕಾತಿ ಮಾಡಲಾಯಿತು. ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಪಳೆಯಂಡ ಪಾರ್ಥ ಚಿಣ್ಣಪ್ಪ, ಖಜಾಂಚಿ ಆಯ್ಕೆಯಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಕೆ. ಶಿವಕುಮಾರ್, ನಾಮನಿರ್ದೇಶಿತ ಸದಸ್ಯರುಗಳಾಗಿ ಬೊಳ್ಳಜಿರ ಅಯ್ಯಪ್ಪ, ರಾಜು ರೈ ಹಾಗೂ ವಿ.ವಿ. ಅರುಣ್ ಕುಮಾರ್ ಅವರನ್ನು ನೇಮಿಸಲಾಯಿತು. […]
ಮನೋವಿಜ್ಞಾನದಲ್ಲಿ ಕೊಡಗಿನ ಶಮೀನಾ ಅಸೈನಾರ್ ಸ್ನಾತಕೋತ್ತರ ಪದವಿ

ಗೋಣಿಕೊಪ್ಪ : ಕೊಡಗಿನ ಆಲೀರ ಶಮೀನಾ ಅಸೈನಾರ್ ಇಂದಿರಾಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ (Counselling Psychology)ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗೋಣಿಕೊಪ್ಪ ಬಳಿಯ ಮಾಪಿಳ್ಳೆತೋಡುವಿನ ಅಸೈನಾರ್ ಹಾಗೂ ಫಾತಿಮಾ ದಂಪತಿಯ ಪುತ್ರಿ, ಕೊಳಕೇರಿಯ ಕಣ್ಣಪಣೆ ಅಜೀಝ್ ಅವರ ಪತ್ನಿಯಾಗಿರುವ ಶಮೀನಾ ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಓದಿನಲ್ಲಿ ಆಸಕ್ತಿ ಇದ್ದ ಇವರು 19ನೇ ವಯಸ್ಸಿನಲ್ಲಿ ವೈವಾಹಿಕ ಬಂಧಕ್ಕೆ ಒಳಗಾದರು. ಮದುವೆ ನಂತರವೂ ಓದು ಮುಂದುವರೆದ್ದು, ಮುಂದೆ ಪಿಎಚ್‌ಡಿ ಮಾಡುವ ಇರಾದೆ ಹೊಂದಿದ್ದಾರೆ.
ಭಜನೆ, ನೃತ್ಯ, ಹಾಡು – ಸುಂದರ ಪರಿಸರದಲ್ಲಿ ಮೇಳೈಸಿದ ದೀಪಾವಳಿ ಸಂಭ್ರಮ..!

ಮಡಿಕೇರಿ : ಶ್ರೀ ರಾಮಾಂಜನೇಯ ಭಜನಾ ತಂಡ, ಆರೋಹಣ, ಯೋಗ ಭಾರತಿ ಬಳಗದ ವಾರ್ಷಿಕ ದೀಪಾವಳಿ ಸಂಭ್ರಮ ಮಂಗಳವಾರ ರಾತ್ರಿ ವರ್ಣರಂಜಿತವಾಗಿ ಜರುಗಿತು. ಮಡಿಕೇರಿ ಹೊರವಲಯದ ಅಭಿರತಿ ಸ್ಟೇನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ತಂಡದ ಸದಸ್ಯರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಭಜನೆ, ನೃತ್ಯ, ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಅಭಿರತಿ ಮಾಲೀಕರಾದ ಜಯಂತಿ ಸಂಜಯ್ ದಂಪತಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡದಿರು. ಸವಿತಾ ತಂಡದವರು ಪೂಜೆ, ಮಂಗಳಾರತಿ ನೆರವೇರಿಸಿದರು. ಅತಿಥಿಯಾಗಿ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು […]
ಕೊಡಗಿನ ಪುಡಿಯಂಡ ಹೆಚ್. ರಫಿ ಸುಬೇದಾರ್ ಮೇಜರ್ ಆಗಿ ಪದೋನ್ನತಿ

ಮಡಿಕೇರಿ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೇವಣಗೇರಿ ಗ್ರಾಮದ ಪುಡಿಯಂಡ ಹೆಚ್. ರಫಿ ಸುಬೇದಾರ್ ಮೇಜರ್ ಆಗಿ ಪದೋನ್ನತಿ ಪಡೆದಿದ್ದಾರೆ. ಭಾರತೀಯ ಸೇನೆಯ 22ನೇ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟಿನಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಡಿಯಂಡ ಹೆಚ್. ರಫಿ ಅವರು ಸುಬೇದಾರ್ ಮೇಜರ್ ಆಗಿ ಪದೋನ್ನತಿ ಪಡೆದಿರುವುದು ನಮ್ಮ ಸಮುದಾಯಕ್ಕೆ ಮಾತ್ರವಲ್ಲ ಇಡೀ ಕೊಡಗು ಜಿಲ್ಲೆಗೆ ಕೀರ್ತಿ ಮೂಡಿಸಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಮೆಚ್ಚುಗೆ ವ್ಯಕ್ತಪಡಿಸಿದೆ. ದೇವಣಗೇರಿ ಗ್ರಾಮದ ದಿ.ಪುಡಿಯಂಡ ಹಂಸ ಮತ್ತು ಫಾತುಮಾ […]
ವಾಹನ ಚಾಲನೆ ಕಲಿಸುವುದು ಮುಖ್ಯವಲ್ಲ ಸುರಕ್ಷಿತ ಚಾಲನೆಯನ್ನು ಕಲಿಸುವುದು ಅತಿ ಮುಖ್ಯ: ಎಸ್ ಟಿ ಸತೀಶ್

ವಾಹನ ಚಲಾವಣೆಯನ್ನು ಆಸಕ್ತಿಯಿಂದ ಪ್ರತಿಯೊಬ್ಬರು ಕಲಿಯುತ್ತಾರೆ. ಆದರೆ ಸುರಕ್ಷಿತ ಚಾಲನೆಯನ್ನು ಕಲಿಯುವುದು ಅತಿ ಮುಖ್ಯ ಎಂದು ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್ ಟಿ ಸತೀಶ್ ಅಭಿಪ್ರಾಯಪಟ್ಟರು. ವಿರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಲಾರ್ಡ್ಸ್ ಡ್ರೈವಿಂಗ್ ಶಾಲೆಯ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದವರು ಸಮಾಜದಲ್ಲಿ ಬೆಳವಣಿಗೆಯನ್ನು ಹೊಂದಿದ ಪ್ರತಿಯೊಬ್ಬರಲ್ಲಿಯೂ ಸಮಾಜದ ಕುರಿತಾ ಕೃತಜ್ಞತಾ ಭಾವನೆ ಇರಬೇಕು. ಸೌಜನ್ಯಯುತ ಹಾಗೂ ಮನುಷ್ಯತ್ವದಿಂದ ನೀಡುವ ಕಲಿಕೆ ಇತರರಿಗೂ ಪ್ರೇರಣೆಯಾಗುತ್ತದೆ . ಅದರಂತೆ ವಿರಾಜಪೇಟೆ ಲಾರ್ಡ್ಸ್ ಡ್ರೈವಿಂಗ್ ಶಾಲೆಯು […]
ಪುತ್ತರಿ ಹಬ್ಬಕ್ಕೆ ಹಸಿರು ಪಟಾಕಿ ಹಚ್ಚೋಣ – ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಅಭಿಯಾನ..!

Coorg BUzz Special ಮಡಿಕೇರಿ : ಪುತ್ತರಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇದೆ. ಹೊಸ ಅಕ್ಕಿಯನ್ನು ಮನೆ ತುಂಬಿಸಿಕೊಳ್ಳಲು, ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಜನ ಕಾತರರಾಗಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಹಬ್ಬದ ಭಾಗವಾಗಿ ಒಂದು ಅಭಿಯಾನ ಸದ್ದು ಮಾಡುತ್ತಿದೆ. ಅದೇ ಹಸಿರು ಪಟಾಕಿ ಕ್ಯಾಂಪೇನ್. ದೀಪಾವಳಿ ಹಬ್ಬದಂತೆ ಕೊಡಗಿನಲ್ಲಿ ಆಚರಿಸುವ ಪುತ್ತರಿಯಲ್ಲೂ ತರಹೇವಾರಿ ಪಟಾಕಿಗಳು ಸದ್ದು ಮಾಡುತ್ತವೆ. ಈ ಬಾರಿ ಕೊಡಗಿನ ಪರಿಸರ ಕಾಳಜಿಯೊಂದಿಗೆ ಹಸಿರು ಪಟಾಕಿಯನ್ನು ಬಳಸೋಣ ಎಂಬ ಸಂದೇಶದೊಂದಿಗೆ ಸರಪಳಿ ಅಭಿಯಾನ […]
ಅರೆಭಾಷೆ ಗೌಡ ಸಮುದಾಯಕ್ಕೆ ಮಡಿಕೇರಿಯಲ್ಲಿ ಜಮೀನು – ಮುಂದಿನ ಬಜೆಟ್‌ನಲ್ಲಿ ಈಡೇರಿಕೆ – ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು : ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ 2024ನೇ ಸಾಲಿನ ಅರೆ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಜಂಬರ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆಭಾಷೆ ಗೌಡರು ಹೆಚ್ಚಾಗಿ ವಾಸಿಸುತ್ತಿದ್ದು, ಇವರ ಜನಸಂಖ್ಯೆ ಮೂರು […]
ಯುವ ಸಮೂಹದಲ್ಲಿ ಕ್ಷೀಣಿಸುತ್ತಿರುವ ಪತ್ರಿಕೆ, ಪುಸ್ತಕ ಓದು – ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ – ಜಗದೀಶ್ ಜೋಡುಬೀಟಿ ಕಳವಳ

ಗೋಣಿಕೊಪ್ಪ : ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಪತ್ರಕರ್ತ ಜಗದೀಶ್ ಜೋಡುಬೀಟಿ ಹೇಳಿದರು. ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ, ಗೋಣಿಕೊಪ್ಪ ಕಾವೇರಿ ಕಾಲೇಜು ಎನ್‌ಎಸ್‌ಎಸ್ ಘಟಕ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪತ್ರಿಕಾ ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಯುವಜನತೆ ಎಂಬ ವಿಷಯದ ಬಗ್ಗೆ ಮಾತನಾಡಿದರು. ಪತ್ರಿಕೆಗಳು ವಿಶ್ವಾಸಾರ್ಹ ಮಾಹಿತಿಯ ಮೂಲವಾಗಿದೆ. ಯುವ ಜನರಿಗೆ ವಿಭಿನ್ನ ವಿಷಯಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತವೆ. ಪತ್ರಿಕೆಗಳನ್ನ […]