ಕುರುಳಿ ಅಂಬಲಮಂದ್‌ನಲ್ಲಿ ಸಂಭ್ರಮದಿಂದ ಜರುಗಿದ ಪುತ್ತರಿ ಕೋಲಾಟ್

ಮಡಿಕೇರಿ : ಕಡಗದಾಳುವಿನ ಕುರುಳಿ ಅಂಬಲ ಮಂದ್‌ನಲ್ಲಿ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ಮಂಗಳವಾರ ನಡೆಯಿತು. ಡಿಸೆಂಬರ್ 03ರ ಸಂಜೆ ಈಡ್, ಡಿ.7 ಭಾನುವಾರ ಮುಂಜಾನೆ ಮಂದ್ ತೊರ್‌ಪ, ಡಿ 9ರ ಮಂಗಳವಾರ ಊರಿನವರು ಮಂದ್‌ನಲ್ಲಿ ಸೇರಿ ಮಧ್ಯಾಹ್ನ 12 ಗಂಟೆಗೆ ಊರ್ ತಕ್ಕರ ಮನೆಗೆ ತೆರಳಿ ಫಲಹಾರ ಊಟೋಪಚಾರದ ನಂತರ ತಳಿಯಕ್ಕಿ ಬೊಳ್‌ಚ, ದುಡಿಕೊಟ್ಟ್ ಪಾಟ್, ಒಡ್ಡೋಲಗದೊಂದಿಗೆ ಊರ್ ತಕ್ಕರನ್ನು ಮಂದ್‌ಗೆ ಕರೆ ತಂದರು. ನಂತರ ಊರ್ ಕೋಲ್ ನಡೆಯಿತು. 3 ಗಂಟೆಗೆ ದೇಶ ತಕ್ಕರನ್ನು ಹಾಗು […]
ಡಿ.11ರಂದು ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಲೋಕಾರ್ಪಣೆ

ಪೊನ್ನಂಪೇಟೆ: ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕೆ ಮಾತ್ರ ಸೀಮಿತಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ಇದೇ ತಿಂಗಳ 11ರಂದು ಗುರುವಾರ ಉದ್ಘಾಟನೆಗೊಳ್ಳಲಿದೆ. ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲೆಯೊಂದಕ್ಕೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸುವ ಮೂಲಕ ಕೆ.ಎಂ.ಎಸ್.ಎ.ಯನ್ನು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರಾದ ಆಲೀರ ರಶೀದ್ ತಿಳಿಸಿದ್ದಾರೆ. ಈ ಕುರಿತು ವಿರಾಜಪೇಟೆಯಲ್ಲಿ ನಡೆದ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯ […]
ಡಿ. 21ರಿಂದ ವಿ.ಬಾಡಗದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ

ಪೊನ್ನಂಪೇಟೆ: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-2025 ಅನ್ನು ಇದೇ ಡಿ.21ರಿಂದ 25ರವರೆಗೆ ಆಯೋಜಿಸಲಾಗಿದೆ. ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ತಂಡಗಳಿಗಾಗಿ ಈ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ವಿ. ಬಾಡಗ ಹೈಪ್ಲೈಯರ್ಸ್ ತಂಡದ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ […]
ಬೀದಿ ಶ್ವಾನಗಳ ಸ್ಥಳಾಂತರ: ನಗರಸಭೆಯ ಜೊತೆ ಕೈಜೋಡಿಸಲು ಮನವಿ

ಮಡಿಕೇರಿ ನಗರ ಸ್ಥಳೀಯ ಸಂಸ್ಥೆಯ ವತಿಯಿಂದ ನಗರದ ಸಾರ್ವಜನಿಕ ಆರೋಗ್ಯ, ಸುರಕ್ಷತೆ ಹಾಗೂ ಪ್ರಾಣಿ ಕಲ್ಯಾಣವನ್ನು ಮನನದಲ್ಲಿಟ್ಟುಕೊಂಡು, ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಖಾಸಗಿ ಹಾಗು ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳ ಆವರಣಗಳಲ್ಲಿ ಇರುವ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಮಡಿಕೇರಿ ನಗರಸಭೆ ಕೈಗೊಂಡಿದೆ. ಈ ಕಾರ್ಯಕ್ರಮದ ಸತತ ಮತ್ತು ಜವಾಬ್ದರಿಯುತ ಎನ್‍ಜಿಒ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದ್ದು, ಮಡಿಕೇರಿ ನಗರಸಭೆಯೊಂದಿಗೆ ಸಹಭಾಗಿತ್ವಕ್ಕಾಗಿ ವಿನಂತಿಸುತ್ತೇವೆ. ಈ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಗೊಂಡ […]
ಜಗತ್ತಿನ ಎರಡನೇ ಅತಿ ದೊಡ್ಡ ತ್ರಿವರ್ಣ ಧ್ವಜ ಬೆಳಗಾವಿಯಲ್ಲಿ ಅನಾವರಣ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣ ಮಾಡಿದರು. ಬಳಿಕ ಮಾತನಾಡಿದ ಅವರು, ಭಾರತದ ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಾಗಿರದೇ, ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ತಿಳಿಸಿದರು. ಅವರು ಇಂದು ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣ […]
ನಿಮ್ಮ ಹಣ ನಿಮ್ಮ ಹಕ್ಕು ಜಾಗೃತಿ ಶಿಬಿರಕ್ಕೆ ಜಿಲ್ಲಾಧಿಕಾರಿ ಚಾಲನೆ

ದೀರ್ಘ ಕಾಲದಿಂದ ಬ್ಯಾಂಕ್‍ನಲ್ಲಿರುವ ತಮ್ಮ ಹಣ ಪಡೆಯದೆ ಉಳಿದಿರುವ ಠೇವಣಿ, ವಿಮಾ ಕಂತುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರು ಹಣವನ್ನು ವಾಪಸ್ಸು ಪಡೆಯುವ ಸಂಬಂಧ ‘ನಿಮ್ಮ ಹಣ ನಿಮ್ಮ ಹಕ್ಕು’ ಜಾಗೃತಿ ಶಿಬಿರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೋಮವಾರ ಚಾಲನೆ ನೀಡಿದರು. ನಗರದ ಜಿ.ಪಂ.ಸಭಾಂಗಣದಲ್ಲಿ ನಡೆದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿವಿಧ ಕಾರಣಗಳಿಂದ ಬ್ಯಾಂಕ್‍ನಲ್ಲಿ ದೀರ್ಘಕಾಲದಿಂದ ಇರುವ ಹಣ ಹಾಗೂ ವಿಮಾ ಕಂತನ್ನು ಪಡೆಯದಿರುವ ಗ್ರಾಹಕರಿಗೆ ಮಾಹಿತಿ ನೀಡಿ ಹಣವನ್ನು […]
Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

ಶನಿವಾರಸಂತೆಯಲ್ಲಿ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಡಿಸೆಂಬರ್, 10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶನಿವಾರಸಂತೆ ಶಾಖೆಯ ಶನಿವಾರಸಂತೆ ಪಟ್ಟಣ, ಅಪ್ಪ್ಡಶೆಟ್ಟಳ್ಳಿ, ಮಾದ್ರೆ, ಚಿಕ್ಕಕೊಳತ್ತೂರು, ದುಂಡಳ್ಳಿ, ಬೆಂಬಳೂರು, ಬಿಳಹ, ಹಂಡ್ಲಿ, ಕಿತ್ತೂರು, ಸಂಪಿಗೆದಳ, ಮಾದ್ರದಳ್ಳಿ, ಮಣಗಲಿ, ಗೌಡಳ್ಳಿ, ಬೀಟಿಕಟ್ಟೆ, ಶುಂಠಿ, ಶಾಂತ್ವೇರಿ, ಬಸವನಕೊಪ್ಪ, ಕೊಡ್ಲಿಪೇಟೆ ಶಾಖೆಯ ಮುಳ್ಳೂರು, ಗೋಪಾಲಪುರ, ಜಾಗೇನಹಳ್ಳಿ, ನಿಡ್ತ, ಚೌಡೇನಹಳ್ಳಿ, ದೊಡ್ಡಳ್ಳಿ, ಹರೆಹೊಸೂರು, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಪಂಚಾಯಿತಿ, ನೀರುಗುಂದ, […]
ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ NCC ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ

ವಿರಾಜಪೇಟೆ : ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್‌ಸಿಸಿ ಘಟಕದ ಏರ್ ವಿಂಗ್ ಹಾಗೂ ಆರ್ಮಿ ವಿಂಗ್ ಗಳ ವತಿಯಿಂದ ಆರ್ಮಡ್ ಫೋರ್ಸ್ ಫ್ಲಾಗ್ ಡೇ ಯ ಪ್ರಯುಕ್ತ ಎಂಸಿಸಿ ವಿದ್ಯಾರ್ಥಿಗಳಿಂದಎಂಸಿಸಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂತ ಅನ್ನಮ್ಮ ಪ್ರೌಢಶಾಲೆಯ ಬಳಿ ವಿದ್ಯಾಸಂಸ್ಥೆ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿಮಿಕ್ ಹಾಗೂ ಎನ್‌ಸಿಸಿ ವಿಂಗ್ ಕಮಾಂಡರ್ ಆಫೀಸರ್ ಪ್ರವೀಣ್ ಕಾರ್ಯಪ್ಪ ರವರು ಈ ಜಾಥಾಕ್ಕೆ […]
ಕೋವಿ ಕೊಡವರ ಸಂಪ್ರದಾಯದ ಅವಿಭಾಜ್ಯ ಅಂಗ: ಅರುಣ್ ಮಾಚಯ್ಯ

ಪೊನ್ನಂಪೇಟೆ: ಪೂಜ್ಯನೀಯ ಸ್ಥಾನದಲ್ಲಿರುವ ಕೋವಿ ಕೊಡವರ ಪುರಾತನ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಕೊಡವರ ಸಂಸ್ಕೃತಿ ಮತ್ತು ಪದ್ಧತಿ ಪರಂಪರೆಯಿಂದ ಕೋವಿಯನ್ನು ಹೊರತುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಹೇಳಿದರು. ಮಾಯಾಮುಡಿಯ ರಿಮ್ ಫೈರ್ ಶೂಟರ್ಸ್ ಹಾಗೂ ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಮಾಯಮುಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ ತೋಕ್ ನಮ್ಮೆ 2025 […]
ಕೊಡವ ಮುಸ್ಲಿಮರಿಂದ ಕಾಟ್ರಕೊಲ್ಲಿ ಪುತ್ತರಿ ಆಚರಣೆ

ಪೊನ್ನಂಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಗುರುವಾರ ರಾತ್ರಿ ನೂರಾರು ಕೊಡವ ಮುಸ್ಲಿಂ ಸಮುದಾಯದವರು ದ. ಕೊಡಗಿನ ಕಾಟ್ರಕೊಲ್ಲಿಯಲ್ಲಿ ಅಲ್ಲಿನ ಆಲೀರ ಕುಟುಂಬಸ್ಥರ ಆತಿಥ್ಯದಲ್ಲಿ ಅದ್ದೂರಿಯಾಗಿ ಆಚರಿಸಿದರು. ಕಾಟ್ರಕೊಲ್ಲಿಯ ಆಲೀರ ಎಂ. ಸಾದಲಿ ಅವರ ಗದ್ದೆಯಲ್ಲಿ ಈ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಕೆಎಂಎ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಲೀರ ಕುಟುಂಬದ ಹಿರಿಯರಾದ […]