ರಶ್ಮಿಕಾಗೆ ಸೂಕ್ತ ಭದ್ರತೆ ನೀಡಲು ಕೊಡವ ಕೌನ್ಸಿಲ್ ಒತ್ತಾಯ: ಕೊಡಗಿನ ಬೆಡಗಿ ಪರ ನಿಂತ ಖ್ಯಾತ ನಟಿಯರು

Rashmika Mandanna

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೊಡಗಿನ ಬೆಡಗಿ. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು. ಆದರೆ ರಶ್ಮಿಕಾ ಕನ್ನಡ ಸರಿಯಾಗಿ ಮಾತಾಡಲ್ಲ, ಹೈದರಾಬಾದ್ ನನ್ನ ಊರು ಅಂತ ಹೇಳಿದ್ದಕ್ಕೆ ವಿಪರೀತ ಟ್ರೋಲ್​ಗೆ ಗುರಿಯಾಗುತ್ತಿದ್ದಾರೆ. ಶಾಸಕ ರವಿಕುಮಾರ್ ಅವರಂತೂ ರಶ್ಮಿಕಾ ಮಂದಣ್ಣಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಬೆದರಿಕೆ ಧ್ವನಿಯಲ್ಲಿ ಹೇಳಿದ್ದರು. ಇದೀಗ ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ರಶ್ಮಿಕಾಗೆ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. […]

Govinda: ಬಾಲಿವುಡ್ ನಟ ಗೋವಿಂದ ಡಿವೋರ್ಸ್​ ಕೇಸ್​ಗೆ ಹೊಸ ಟ್ವಿಸ್ಟ್​​​

Govinda

ಬಾಲಿವುಡ್​ ಸ್ಟಾರ್​ ನಟ ಗೋವಿಂದ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ 37 ವರ್ಷಗಳ ದಾಂಪತ್ಯ ಕೊನೆಗೊಳಿಸುವ ವಿಚಾರ ಎಲ್ಲೆಡೆ ವೈರಲ್ ಆಗಿತ್ತು. ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ ದಾಂಪತ್ಯದಲ್ಲಿ ಬಿರುಕು ಸುದ್ದಿ ಬಿಟೌನ್​ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಕುಟುಂಬದ ಆಪ್ತ ಮೂಲವೊಂದು ಸುನೀತಾ ಕೆಲವು ತಿಂಗಳ ಹಿಂದೆಯೇ ಗೋವಿಂದ ಅವರಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್​ ಸ್ಟಾರ್​ ನಟ ಮತ್ತು ಸುನೀತಾ ಅವರು 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. […]

ಗಂಗಾ ಪುಣ್ಯ ಸ್ನಾನ ಮಾಡಿ, ಸೇವೆ ಮಾಡುವ ಭಾಗ್ಯ ನನಸು ಮಾಡಿಕೊಂಡ ನಟಿ ಕಾರುಣ್ಯ ರಾಮ್

ಮಹಾಕುಂಭ ಮೇಳಕ್ಕೆ ಪ್ರತಿದಿನವೂ ಹಲವಾರು ಜನರು ಆಗಮಿಸುತ್ತಿದ್ದಾರೆ. ಪ್ರಯಾಗ್ ರಾಜ್‌ನ್ನು ಭೇಟಿಯಾಗಿ ತ್ರಿವೇಣಿ ಸಂಗಮದಲ್ಲಿ ನುಗ್ಗಿ, ನಮ್ಮ ಜನ್ಮ ಪಾವನವಾಯಿತು ಎಂದು ಸಾರ್ಥಕ ಭಾವನೆಯನ್ನು ಹೊಂದಿ ಮನೆ ಕಡೆ ಹಿಂತಿರುಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸುಮಾರು 50 ಕೋಟಿ ಹೆಚ್ಚಿನ ಭಕ್ತರು ಮಹಾಕುಂಭ ಮೇಳಕ್ಕೆ ಬೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಹಾಕುಂಭ ಮೇಳದ ವಿಶೇಷವಾದ ಸಂಗತಿ ಎಂದರೆ, ಈ ಬಾರಿ ಪುಣ್ಯಸ್ನಾನವು ಕೇವಲ ಜನಸಾಮಾನ್ಯರಷ್ಟೇ ಮಾಡುತ್ತಿಲ್ಲ. ಚಿತ್ರರಂಗದಲ್ಲಿ ಹೆಸರಾಗಿದ್ದ ಹಲವರು ಕೂಡ ಪುಣ್ಯಸ್ನಾನ ಮಾಡುತ್ತಿದ್ದಾರೆ. […]