ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕೊಡಗಿನ ಫಮೀರಾ ಅಹ್ಮದ್ ಅವರು ‘ಅತ್ಯುತ್ತಮ ಬಹುಭಾಷಾ ವಿಷಯ ರಚನೆಕಾರರು ಮತ್ತು ಡಿಜಿಟಲ್ ಪ್ರಭಾವಿ (ಇನ್ಫ್ಲೂವೆನ್ಸರ್) ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಒಮಾನಿನ್ ಸಲಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಚೆರಿಯಪರಂಬುವಿನ ಪರವಂಡ ಅಹಮದ್ ಮತ್ತು ಝೈನಭ ದಂಪತಿಯ ಪುತ್ರಿಯಾಗಿರುವ ಇವರು ಇನ್ಫರ್ಮೇಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್‌ನಲ್ಲಿ ಬಿಇ ಪದವೀಧರೆಯಾಗಿದ್ದು, ಪ್ರಸ್ತುತ ಮಸ್ಕತ್‌ನಲ್ಲಿ ನೆಲೆಸಿದ್ದಾರೆ. ಈಕೆ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನಿರ್ದೇಶಕರಾದ ಪರವಂಡ ಎ. ಸಿರಾಜ್ ಸಹೋದರಿ.



