ಮಡಿಕೇರಿ : ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿಗೆ ಬಿಜೆಪಿಯ ನಾಲ್ವರು ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಎಸ್.ಸಿ ಸತೀಶ್, ಅರುಣ್ ಶೆಟ್ಟಿ, ಕೆ.ಎಂ ಅಪ್ಪಣ್ಣ, ಶಾರದಾ ನಾಗರಾಜ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದವರು.
ನಗರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ಮಾಡಲಾಯಿತು.
ತೆರಿಗೆ ನಿರ್ಧಾರ ಮತ್ತು ಹಣಕಾಸು ಸಮಿತಿಗೆ ಅರುಣ್ ಶೆಟ್ಟಿ, ಸಾರ್ವಜನಿಕ ಅರೋಗ್ಯ & ಶಿಕ್ಷಣ ಸಮಿತಿಗೆ ಎಸ್.ಸಿ. ಸತೀಶ್, ಪಟ್ಟಣ ಯೋಜನೆ ನಗರ ಅಭಿವೃದ್ಧಿ ಸಮಿತಿಗೆ ಅಪ್ಪಣ್ಣ, ಲೆಕ್ಕಪತ್ರ ಸಮಿತಿಗೆ ಶಾರದ ನಾಗರಾಜ್ ಅವಿರೋಧ ಆಯ್ಕೆಯಾದರು.



