ಕೊಡಗು ಜಿಲ್ಲಾ ತೀಯಾನ್ ಮಹಾಸಭಾ ಸಮಿತಿಗೆ ನೂತನ ಸಾರಥಿಗಳ ಆಯ್ಕೆ

Thiyan Mahasabha

ಮಡಿಕೇರಿ: ಇಲ್ಲಿನ ರಾಜ ದರ್ಶನ್ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ತೀಯಾನ್ ಮಹಾಸಭಾ ಜಿಲ್ಲಾ ಸಮಿತಿಯ ಪ್ರಮುಖ ಸಭೆಯಲ್ಲಿ ಸಂಘಟನೆಯ ಬಲವರ್ಧನೆಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಕಿರಗಂದೂರಿನ ಎ.ಎನ್. ಪದ್ಮನಾಭ ಆಯ್ಕೆಯಾಗಿದ್ದಾರೆ. ಉಳಿದಂತೆ ಎಸ್.ಆರ್. ಅಶೋಕ್ ಕುಮಾರ್ (ಉಪಾಧ್ಯಕ್ಷ), ಶ್ರೀಮತಿ ಜ್ಯೋತಿ ಅರುಣ್ (ಪ್ರಧಾನ ಕಾರ್ಯದರ್ಶಿ), ಎಂ.ಕೆ. ಮೋಹನ್ (ಖಜಾಂಜಿ) ಹಾಗೂ ಎನ್.ಸಿ. ಸುದರ್ಶನ್ (ಸಂಘಟನಾ ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಯಿತು. ಸಂಘಟನೆಯ ಗೌರವ ಸಲಹೆಗಾರರಾಗಿ […]

ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ,ಪರಿಶೀಲನೆ

kodagu District Collector

ನಗರದ ಸ್ಟೀವರ್ಟ್ ಹಿಲ್ ಬಳಿ ಇರುವ ಕುಡಿಯುವ ನೀರು ಶುದ್ದೀಕರಣ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಶುದ್ದ ಕುಡಿಯುವ ನೀರು ಶುದ್ದೀಕರಣ ಪ್ರಕ್ರಿಯೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿದರು. ಕುಡಿಯುವ ನೀರು ಸಂಬಂಧಿಸಿದಂತೆ ಅಮೃತ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಹಾಗೆಯೇ ಸ್ಟೀವರ್ಟ್ ಹಿಲ್ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಜಾಗ ಸಂಬಂಧಿಸಿದಂತೆ ಆದಷ್ಟು ಬೇಗ ನಗರಸಭೆ ವ್ಯಾಪ್ತಿಗೆ ಪಡೆಯುವಂತೆ ಜಿಲ್ಲಾಧಿಕಾರಿ […]