ಕಂಡಂಗಾಲದಲ್ಲಿ ಕೊಡವ ಮುಸ್ಲಿಮರ ಶೂಟಿಂಗ್ ಸ್ಪರ್ಧೆ

ಪೊನ್ನಂಪೇಟೆ: ಒಂದು ಕಾಲದಲ್ಲಿ ರಾಜ ಮನೆತನದವರ ಐಷಾರಾಮಿ ಕ್ರೀಡೆಯಾಗಿದ್ದ ಶೂಟಿಂಗ್ ಇಂದು ಜನಸಾಮಾನ್ಯರ ಕ್ರೀಡೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಶೂಟಿಂಗ್ಸ್ ಸ್ಪರ್ಧೆಗಳು ಇತ್ತೀಚಿಗೆ ವ್ಯಾಪಕವಾಗಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಈ ಕಾರಣದಿಂದ ಕೊಡಗಿನಿಂದ ಮತ್ತಷ್ಟು ಶೂಟರ್ಸ್ ಗಳು ಉದಯಿಸುವ ಭರವಸೆಯಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು. ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಬಿಟ್ಟಂಗಾಲ ಸಮೀಪದ ಕಂಡಂಗಾಲದ ಜಿಎಂಪಿ ಶಾಲಾ ಮೈದಾನದಲ್ಲಿ […]