Power Cut: ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

ನವೆಂಬರ್, 25 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ 3ನೇ ತ್ರೈಮಾಸಿಕ ನಿರ್ವಾಹಣೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಕಣಗಾಲು, ದೊಡ್ಡಳ್ಳಿ, ಗೋಣಿಮರೂರು, ಬಾಣವಾರ, ಸಿದ್ದಲಿಂಗಪುರ, ಮಾಲಂಬಿ, ಹೊಸಗುತ್ತಿ, ಕೈಸರದಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ. ಹಾಗೆಯೇ 33/11 ಕೆ.ವಿ ಮೂರ್ನಾಡು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಎಫ್1 ಪಾರಾಣೆ […]
ಪೊನ್ನಂಪೇಟೆ : ಕೆರೆಗೆ ಹಾರಿ ಆತ್ಮಹ*ತ್ಯೆಗೆ ಶರಣಾದ ಮಹಿಳೆ..!

ಗೋಣಿಕೊಪ್ಪ : ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತೂಚಮಕೇರಿಯಲ್ಲಿ ನಡೆದಿದೆ. ಮೂಕಳಮಾಡ ಸುರೇಶ್ ಎಂಬವರ ಪತ್ನಿ ಸುಮಿತಾ(48) ಆತ್ಮಹ*ತ್ಯೆಗೆ ಶರಣಾದವರು. ಇಂದು(ಸೋಮವಾರ) ಬೆಳಗ್ಗೆ ಮನೆ ಬಳಿಯ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ದಿನಗಳಿಂದ ಸುಮಿತಾ ಅವರು ಮಾನಸಿಕವಾಗಿ ಬಹಳ ನೊಂದಿದ್ದರು ಎನ್ನಲಾಗಿದೆ. ಹೀಗಾಗಿ ಆತ್ಮಹ*ತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ರೀಮಂಗಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.