ವಾಲಿಬಾಲ್‌ನಲ್ಲಿ ಕೊಡಗಿನ ಹಾಡಿ ಹೈದನ ಸಾಧನೆ – ಸರ್ಕಾರದಿಂದ ಸನ್ಮಾನ…

ಪೊನ್ನಂಪೇಟೆ : ಕ್ರೀಡಾ ಕ್ಷೇತ್ರದ ಸಾಧನೆಗಾಗಿ ತಿತಿಮತಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಜೆ.ಎಂ. ಮನೋಜ್ ಅವರನ್ನು ಸರ್ಕಾರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 14 ವರ್ಷದೊಳಗಿನ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಬಿರ್ಸಾ ಮುಂಡರವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಗಿರಿಜನ ಹಾಡಿಯಲ್ಲಿ ಹುಟ್ಟಿ ಬೆಳೆದು, ಪ್ರಸ್ತುತ ತಿತಿಮತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
FMKMC ಕಾಲೇಜಿಗೆ ಹೊಸ ಚೈತನ್ಯ ತುಂಬಲು ಹಳೆ ವಿದ್ಯಾರ್ಥಿಗಳು ಕೈಜೋಡಿಸಿ – ಪ್ರೊ. ಪಿ.ಎಲ್. ಧರ್ಮ ಕರೆ

ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಲವು ಸಾಧಕರಿಗೆ ಶಿಕ್ಷಣ ಕೊಟ್ಟ ಸಂಸ್ಥೆ. ಈ ಕಾಲೇಜಿನ ಈಗಿನ ಪರಿಸ್ಥಿತಿ ನೋಡಿದಾಗ ಬಹಳ ಬೇಸರವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಾನು ಕೂಡಾ ಈ ಕಾಲೇಜಿನ ಹಳೆ ವಿದ್ಯಾರ್ಥಿ. ದಶಕದ ಹಿಂದೆ ಇದ್ದ ಚಿತ್ರಣ ಈಗ ಇಲ್ಲ. ಹಲವು ರೀತಿಯಲ್ಲಿ ಬದಲಾಗಿದೆ. ಕಾಲೇಜಿನ […]
ಪ್ರವಾಸಿ ಬಸ್‌ಗಳಿಂದ ಸಾರ್ವಜನಿಕರಿಗೆ ತೊಂದರೆ – ಆರ್‌ಟಿಒ ಅಧಿಕಾರಿಗೆ ದೂರು..!

ಮಡಿಕೇರಿ : ಜಿಲ್ಲೆಗೆ ಬರುತ್ತಿರುವ ಪ್ರವಾಸಿ ಬಸ್‌ಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೊಡಗು ಅಭಿವೃದ್ಧಿ ಸಮಿತಿ ನಿಯೋಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನ ಸೆಳೆಯಿತು. ಕೊಡಗಿಗೆ ಸಾಕಷ್ಟು ಅಂತಾರಾಜ್ಯ ಬಸ್‌ಗಳು ಬರುತ್ತಿವೆ. ಹೆಚ್ಚಾಗಿ ಕೇರಳ ಭಾಗದಿಂದ ಬಸ್‌ಗಳು ಬರುತ್ತಿವೆ. ಇವುಗಳ ಬಗ್ಗೆ ನಿಗಾ ಇಡಬೇಕು ಎಂದು ಮನವಿ ಮಾಡಲಾಯಿತು. ಪ್ರವಾಸಿಗರನ್ನು ಕರೆದುಕೊಂಡು ಬರುವ ಬಸ್‌ಗಳು ಅತಿಯಾದ ಶಬ್ಧ, ಧ್ವನಿವರ್ದಕವನ್ನು ಬಳಸಿ ಜನರಿಗೆ ತೊಂದರೆ ಕೊಡುತ್ತಿವೆ. ಈ ಬಗ್ಗೆಯೂ ಗಮನಹರಿಸಬೇಕು. ಜೊತೆಗೆ ಪರವಾನಗಿ ಇಲ್ಲದೆ ಸಂಚರಿಸುವ ಬಸ್‌ಗಳ ವಿರುದ್ಧ […]