ಕೆಲವು ದಿನದ ಹಿಂದಷ್ಟೇ ರಸ್ತೆ ದುಸ್ಥಿತಿ ಬಗ್ಗೆ ವರದಿ ಮಾಡಿ ಸಾರ್ವಜನಿಕ ಕಾಳಜಿ – ಅದೇ ರಸ್ತೆಯಲ್ಲಿ ಬಿದ್ದು ಗಾಯಗೊಂಡ ಪತ್ರಕರ್ತೆ..!

ಮಡಿಕೇರಿ : ಜಿಲ್ಲೆಯ ಬಹುತೇಕ ಕಡೆ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಹಲವೆಡೆ ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಒಂದೆಡೆ ಹೊಂಡ ಗುಂಡಿಗಳು ರಸ್ತೆಯನ್ನು ಆವರಿಸಿದ್ದರೆ, ಮತ್ತೊಂದೆಡೆ ಈ ಬಾರಿಯ ನಿರಂತರ ಮಳೆಗೆ ಎಲ್ಲೆಲ್ಲಿಂದೋ ಬಂದು ರಸ್ತೆಯಲ್ಲಿ ಹರಡಿಕೊಂಡಿರುವ ಮಣ್ಣು & ಮರಳಿನ ರಾಶಿ ದ್ವಿಚಕ್ರ ವಾಹನ ಸವಾರರನನು ಯಮಸ್ವರೂಪಿಯಾಗಿ ಕಾಡುತ್ತಿದೆ. ಅದೆಷ್ಟೋ ಮಂದಿ ಹೊಂಡ, ಗುಂಡಿಗಳನ್ನು ತಪ್ಪಿಸಲು ಹೋಗಿ, ಮಣ್ಣು, ಮರಳಿನ ರಾಶಿಯಲ್ಲಿ ವಾಹನ ಜಾರಿದ ಪರಿಣಾಮ ಬಿದ್ದು ಗಾಯಗೊಂಡಿರುವ […]

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮ 2025 – ಮಡಿಕೇರಿಯಲ್ಲಿ ಕಾರ್ಯಾಗಾರ

ಮಡಿಕೇರಿ : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು-2025 ಕುರಿತ ಕಾರ್ಯಾಗಾರ ಮಡಿಕೇರಿಯಲ್ಲಿ ನಡೆಯಿತು. ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ಕಾರ್ಯಾಗಾರ ಉದ್ಘಾಟಿಸಿದರು. ಮಾಸ್ಟರ್‌ ಟ್ರೈನರ್‌ಗಳಾದ ಪುಟ್ಟರಾಜು, ಪಂಚಾಯತಿ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿ ಗ್ರೇಡ್‌-2 ಪೂಣಚ್ಚ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಜಿಲ್ಲಾ ಪಂಚಾಯಿತಿಯ ವಿವಿಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗೆ ಮಾಹಿತಿ ನೀಡಿದರು. […]

ಹಾರಂಗಿ ಹಿನ್ನೀರಿನಲ್ಲಿ ದುರಂತ : ಇಂದು ಪತ್ತೆಯಾಯ್ತು ಮತ್ತೋರ್ವ ವಿದ್ಯಾರ್ಥಿಯ ಮೃ*ತದೇಹ..!

ಸುಂಟಿಕೊಪ್ಪ : ಹಾರಂಗಿ ಹಿನ್ನೀರಿನಲ್ಲಿ ಬುಧವಾರ ನಡೆದಿದ್ದ ದುರಂತದಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಈಜರು ತೆರಳಿದ್ದ ಸಂದರ್ಭ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ಆ ಪೈಕಿ ಚಂಗಪ್ಪ(17) ಮೃತದೇಹ ನಿನ್ನೆಯೇ ಪತ್ತೆಯಾಗಿತ್ತು. ಮಡಿಕೇರಿ ರಾಜಾಸೀಟ್‌ ಬಳಿಯ ನಿವಾಸಿ ತರುಣ್ ತಮ್ಮಯ್ಯ (17) ಮೃತದೇಹ ಇಂದು ಪತ್ತೆಯಾಗಿದೆ. ಹೆಬ ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸರು, ದುಬಾರೆ Rafting ತಂಡದವರು ಮೃತದೇಹ ಪತ್ತೆಯಾಗಿ ಕಾರ್ಯಾಚರಣೆ […]

ಅಂಗನವಾಡಿ ಕಾರ್ಯಕರ್ತೆಯರು, ಪೋಷಕರೊಂದಿಗೆ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಮಡಿಕೇರಿ : ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಡಿಮೆ ತೂಕದ ಮಕ್ಕಳ ಪೋಷಕರೊಂದಿಗೆ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ (NRC madikeri) ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಭೇಟಿ ನೀಡಿ ಪೌಷ್ಟಿಕ ಪುನಶ್ಚೇತನ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಅಂಗನವಾಡಿ ಕೇಂದ್ರದಲ್ಲಿ 0-6 ವರ್ಷದ ಮಕ್ಕಳ ತೂಕ, ಎತ್ತರ, ತೋಳಿನ ಸುತ್ತಳತೆಯನ್ನು ಪರಿಶೀಲಿಸಿ […]