ಮನುಕುಲದ ಒಳಿತಿಗೆ ಪ್ರಕೃತಿ ಸಂರಕ್ಷಿಸಿ – ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಆರ್. ಶಂಕರಾನಂದ್ ಕರೆ

ಕುಶಾಲನಗರ : ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ ಆರಾಧಿಸಿದಲ್ಲಿ ಮಾತ್ರ ಜೀವ ವೈವಿಧ್ಯತೆ ಸಂರಕ್ಷಿಸಲು ಸಾಧ್ಯ ಎಂದು ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಆರ್. ಶಂಕರಾನಂದ ಆಶಿಸಿದರು. ಕೊಡಗು ವಿಶ್ವವಿದ್ಯಾಲಯದ ಹಾರಂಗಿ ಸಭಾಂಗಣದಲ್ಲಿ ಸೋಮವಾರ “ಹಸಿರು ಸಂರಕ್ಷಣೆಯಲ್ಲಿ ಕೊಡಗಿನ ಜೀವವೈವಿಧ್ಯ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಸ್ವಾರ್ಥದಿಂದಾಗಿ ಪ್ರಕೃತಿ ಇಂದು ವಿನಾಶದ ಅಂಚಿನಲ್ಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ಅತ್ಯಾಚಾರದಿಂದಾಗಿ ಪ್ರಕೃತಿ ಮುನಿಯತೊಡಗಿದ್ದು, ಭೂಕಂಪ, ಪ್ರವಾಹಗಳು ಮನುಷ್ಯನ ನೆಮ್ಮದಿ […]
ಯೋಗಾಸನದಲ್ಲಿ ಹೊಸದಾಗಿ ಮೂರು ವಿಶ್ವ ದಾಖಲೆ ಮಾಡಿದ ಮದೆನಾಡಿನ ಬಿ.ಕೆ. ಸಿಂಚನಾ

ಮಡಿಕೇರಿ : ಯೋಗಾಸನದಲ್ಲಿ ಕೊಡಗಿನ ಸಿಂಚನಾ ಹೊಸದಾಗಿ ಮೂರು ವಿಶ್ವ ದಾಖಲೆ ಮಾಡಿದ್ದಾಳೆ. ಮದೆನಾಡಿನ ಬಿಜಿಎಸ್ ಶಾಲೆಯ ಆವರಣ ನೂತನ ದಾಖಲೆಗೆ ಸಾಕ್ಷಿಯಾಯಿತು. ಯೋಗಾಸನದಲ್ಲಿ ಈಗಾಗಲೆ 07 ವಿಶ್ವ ದಾಖಲೆ ಮಾಡಿದ್ದ ಸಿಂಚನಾ, ಮಂಗಳವಾರ ಮೂರು ಹೊಸ ದಾಖಲೆ ಸೃಷ್ಟಿಸುವ ಮೂಲಕ 10 ಜಾಗತಿಕ ದಾಖಲೆಯಲ್ಲಿ ತನ್ನ ಹೆಸರು ನಮೂದಿಸಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗಾಗಿ ಶಾಲೆಯಲ್ಲಿ ವೇದಿಕೆ ಸಿದ್ಧವಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಮ್ಮುಖದಲ್ಲಿ, ಹಲವು ಗಣ್ಯರ ಉಪಸ್ಥಿತಿಯಲ್ಲಿ ಸಿಂಚನಾ ಹೊಸ […]